ಆಳಂದ ಚೆಕ್‌ಪೋಸ್ಟ್‌ ಹತ್ತಿರದ ಶಿವಲಿಂಗೇಶ್ವರ ಕಾಲೋನಿಯ ದಿಲೀಪ್‌ ರಾಠೋಡ್‌ ಎಂಬುವವರಿಗೆ ಅವರ ಹಿರಿಯ ಮಗ ಸುರೇಶ ರಾಠೋಡ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿದ್ದಾನೆ. 

ಕಲಬುರಗಿ(ಜು.19): ಹಣ ನೀಡುವಂತೆ ತಂದೆಗೆ ಪೀಡಿಸಿದ ಮಗನೊಬ್ಬ ಹಣ ನೀಡದೇ ಇದ್ದಾಗ ತಂದೆಗೆ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಆಳಂದ ಚೆಕ್‌ಪೋಸ್ಟ್‌ ಹತ್ತಿರದ ಶಿವಲಿಂಗೇಶ್ವರ ಕಾಲೋನಿಯ ದಿಲೀಪ್‌ ರಾಠೋಡ್‌ ಎಂಬುವವರಿಗೆ ಅವರ ಹಿರಿಯ ಮಗ ಸುರೇಶ ರಾಠೋಡ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿದ್ದಾನೆ. 

ಕಲಬುರಗಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಜೀವ ಬೆದರಿಕೆ

ತರಕಾರಿ ವ್ಯಾಪಾರಿಯಾಗಿರುವ ದಿಲೀಪ್‌ ರಾಠೋಡ್‌ ಅವರ ಹಿರಿಯ ಮಗ ಸುರೇಶ ರಾಠೋಡ್‌ 15 ಸಾವಿರ ರುಪಾಯಿ ನೀಡುವಂತೆ ಪೀಡಿಸಿದ್ದಾನೆ. ಆಗ ಅವರು ಹಣ ನೀಡಲು ನಿರಾಕರಿಸಿದಾಗ ಕುಪಿತನಾದ ಸುರೇಶ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿದ್ದಾನೆ. 

ಈ ಸಂಬಂಧ ಸುರೇಶ ರಾಠೋಡ್‌ ಮತ್ತು ಇದಕ್ಕೆ ಪ್ರಚೋದನೆ ನೀಡಿದ ರವಿ ರಾಠೋಡ್‌ ವಿರುದ್ಧ ದಿಲೀಪ್‌ ರಾಠೋಡ್‌ ಅವರು ಚೌಕ್‌ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.