Asianet Suvarna News Asianet Suvarna News

Davanagere: ಮೋರಾರ್ಜಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಜಗಳೂರು ತಾಲೂಕಿನ ಮೆದಗಿನಕೆರೆ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಎಸ್.ಸುನೀಲ್( 12) ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

Sixth std Student Commits Suicide At Morarji School in Davanagere gvd
Author
Bangalore, First Published Aug 24, 2022, 7:35 AM IST

ದಾವಣಗೆರೆ (ಆ.24): ಜಗಳೂರು ತಾಲೂಕಿನ ಮೆದಗಿನಕೆರೆ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಎಸ್.ಸುನೀಲ್( 12) ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಗಲಗಟ್ಟೆ ಗ್ರಾಮದ ಕೆ.ಎಚ್. ಸುರೇಶ್ ಹಾಗೂ ಕೆ.ಕವಿತಾ ಅವರ ಪುತ್ರ ಸುನೀಲ್ ವಸತಿ ಶಾಲೆಯಲ್ಲಿ ಇರಲು ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಈ ಹಿಂದೆ ಮುಗ್ಗಿದರಾಗಿಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. 

ಪೋಷಕರ ಮನವಿ ಮೇರೆಗೆ ಮ್ಯೂಚಲ್ ಆಧಾರದ ಮೇಲೆ ಮೆದಗಿನಕೆರೆ ವಸತಿ ಶಾಲೆಗೆ ಸೇರ್ಪಡೆಯಾಗಿದ್ದ. ಕಳೆದ ಒಂದು ವಾರದ ಹಿಂದೆ ಅನಾರೋಗ್ಯದ ಹಿನ್ನೆಲೆ ಪೋಷಕರು ಸಾಗಲಟ್ಟೆ ಗ್ರಾಮಕ್ಕೆ ಕರೆದೊಯ್ದಿದ್ದರು. ಶುಕ್ರವಾರ ಮತ್ತೆ ಪೋಷಕರು ವಸತಿ ಶಾಲೆಗೆ ಬಿಟ್ಟು ಹೋಗಿದ್ದರು. ನಂತರ ಶನಿವಾರ ಸಂಬಂಧಿಕರ ಮೂಲಕ ತಂದೆ ಹೇಳಿ ಶಾಲೆಗೆ ಬರುವಂತೆ ಮನವಿ ಮಾಡಿದ್ದ. ನಂತರ ಪೋಷಕರು ವಿದ್ಯಾರ್ಥಿಯನ್ನು ಕರೆದೋಯ್ದು ನಂತರ ಸೋಮವಾರ ವಸತಿ ಶಾಲೆಗೆ ಬಿಟ್ಟು ಹೋಗಿದ್ದರು. 

ಬೆಂಗಳೂರು: ಬಿಬಿಎಂಪಿಯ 14 ಲಕ್ಷ ಪ್ರೇಯಸಿಯ ಖಾತೆಗೆ..!

ಮಂಗಳವಾರ ಸಂಜೆ ಪೋಷಕರಿಗೆ ಕರೆ ಮಾಡಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದ. ನಾಳೆ ಬರುತ್ತೇನೆ ಎಂದು ಪೋಷಕರು ಹೇಳಿದ್ದಾರೆ. ಆದರೆ ಪೋಷಕರು ಬಾರದೇ ಇದ್ದಿದ್ದರಿಂದ ಮನ ನೊಂದು ಶೌಚಾಲಯಕ್ಕೆ ತೆರಳಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಾಂಶುಪಾಲರಾದ ಜಿ.ಎನ್ ರೂಪಕಲಾ, ವಾರ್ಡನ್ ಮಂಜುನಾಥ್ ಹುಡುಕಿದರೂ ಸಿಗದಿದ್ದಾಗ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಜೀವ ಹೋಗುವ ಹಂತದಲ್ಲಿದ್ದ ವಿದ್ಯಾರ್ಥಿಯನ್ನು ತಮ್ಮ ಕಾರಿನಲ್ಲಿ ಜಗಳೂರಿನ ಸರಕಾರಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. 

ಪೂಜೆಗೆ ಬಂದವಳ ಮೇಲೆ ಜ್ಯೋತಿಷಿಯಿಂದ ರೇಪ್‌, ದೋಷ ಪರಿಹಾರ ಮಾಡೋದಾಗಿ ನಂಬಿಸಿ ದ್ರೋಹ..!

ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಎಸ್.ಪಿ. ರಿಷ್ಯಂತ್ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಡಿ.ರೇಷ್ಮಾಕೌಸರ್ ಹಾಸ್ಟಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow Us:
Download App:
  • android
  • ios