ಪೂಜೆಗೆ ಬಂದವಳ ಮೇಲೆ ಜ್ಯೋತಿಷಿಯಿಂದ ರೇಪ್‌, ದೋಷ ಪರಿಹಾರ ಮಾಡೋದಾಗಿ ನಂಬಿಸಿ ದ್ರೋಹ..!

ಆವಲಹಳ್ಳಿಯ ಇರಂಡನಹಳ್ಳಿಯ ಆನಂದಮೂರ್ತಿ ಮತ್ತು ಪತ್ನಿ ಲತಾ ವಿರುದ್ಧ ಎಫ್‌ಐಆರ್‌ ದಾಖಲು,  ಮನೆಯಲ್ಲಿ ಮಾಟ-ಮಂತ್ರ ಹಾಗೂ ದೋಷ ಪರಿಹಾರದ ಹೆಸರಿನಲ್ಲಿ ಪೂಜೆ ಮಾಡಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದ ಆರೋಪಿಗಳು

Astrologer Rape on Woman  in Bengaluru grg

ಬೆಂಗಳೂರು(ಆ.24):  ದೋಷ ಪರಿಹಾರಕ್ಕಾಗಿ ವಿಶೇಷ ಪೂಜೆ ನೆಪದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಡಿ ಜ್ಯೋತಿಷಿ ಹಾಗೂ ಆತನ ಪತ್ನಿ ವಿರುದ್ಧ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಆವಲಹಳ್ಳಿಯ ಇರಂಡನಹಳ್ಳಿಯ ಆನಂದಮೂರ್ತಿ ಮತ್ತು ಪತ್ನಿ ಲತಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆರೋಪಿಗಳು ಮನೆಯಲ್ಲಿ ಮಾಟ-ಮಂತ್ರ ಹಾಗೂ ದೋಷ ಪರಿಹಾರದ ಹೆಸರಿನಲ್ಲಿ ಪೂಜೆ ಮಾಡಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ. ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧ ದೂರು ದಾಖಲಾದ ಬೆನ್ನಲ್ಲೇ ಆನಂದಮೂರ್ತಿ ದಂಪತಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, ನಂತರ ಗ್ಯಾಂಗ್‌ರೇಪ್‌

ಪ್ರಕರಣದ ವಿವರ

ಸಂತ್ರಸ್ತೆಗೆ ಐದಾರು ವರ್ಷದ ಹಿಂದೆ ಸಂಬಂಧಿಕರ ಮನೆಯ ವಿಶೇಷ ಪೂಜೆಯಲ್ಲಿ ಆರೋಪಿ ಆನಂದಮೂರ್ತಿ ಪರಿಚಿತನಾಗಿದ್ದಾನೆ. ಈ ವೇಳೆ ‘ನಿನಗೆ ದೋಷವಿದ್ದು, ಕೆಲ ಪೂಜೆ ಮಾಡಿಸಿದರೆ ಪರಿಹಾರವಾಗುತ್ತದೆ. ಇಲ್ಲವಾದರೆ, ಕುಟುಂಬಕ್ಕೆ ಕೆಟ್ಟದ್ದಾಗಲಿದೆ’ ಎಂದು ಆನಂದಮೂರ್ತಿ ಹೆದರಿಸಿದ್ದ. ಈತನ ಮಾತು ನಂಬಿ ಯುವತಿ ಆನಂದಮೂರ್ತಿ ಮನೆಗೆ ದೋಷ ಪರಿಹಾರದ ಪೂಜೆ ತೆರಳಿದ್ದಳು. ಈ ವೇಳೆ ಪೂಜೆ ನೆಪದಲ್ಲಿ ಆರೋಪಿ ಆಕೆಗೆ ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರಸಿ ಕುಡಿಸಿ ಪ್ರಜ್ಞೆ ತಪ್ಪಿಸಿದ್ದಾನೆ. ಈ ವೇಳೆ ಆರೋಪಿ ಆನಂದಮೂರ್ತಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಇದನ್ನು ಆತನ ಪತ್ನಿ ಶೀಲಾ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಳು.

11 ವರ್ಷದ ಸ್ನೇಹಿತೆಯನ್ನು ಅತ್ಯಾಚಾರ ಮಾಡಲು ಮೂವರನ್ನು ಹೈರ್‌ ಮಾಡಿದ ಗೆಳತಿ

ಬಳಿಕ ಆರೋಪಿಗಳು ಯುವತಿಗೆ ಲೈಂಗಿಕ ದೌರ್ಜನ್ಯದ ವಿಡಿಯೋ ತೋರಿಸಿ ಬೆದರಿಸಿ ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ .2.50 ಲಕ್ಷ ವಸೂಲಿ ಮಾಡಿದ್ದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಲೀಕ್‌ ಮಾಡುತ್ತೇವೆ. ಪಾಲಕರು ಹಾಗೂ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಯುವತಿ ಈ ವಿಚಾರವನ್ನು ಯಾರಿಗೂ ಹೇಳದೇ ಸುಮ್ಮನಿದ್ದಳು.

ಹುಡುಗನಿಗೆ ನಗ್ನ ಫೋಟೋ ತೋರಿಸಿ ಮದುವೆ ಮುರಿದ

ಇತ್ತೀಚೆಗೆ ಪೋಷಕರು ಯುವತಿಗೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದ ಆರೋಪಿ ಆನಂದಮೂರ್ತಿ, ಯುವತಿಗೆ ನಿಶ್ಚಯವಾಗಿರುವ ಹುಡುಗನನ್ನು ಭೇಟಿಯಾಗಿ ಯುವತಿಯ ಖಾಸಗಿ ಫೋಟೋ ತೋರಿಸಿ ಮದುವೆ ಮುರಿದು ಬೀಳುವಂತೆ ಮಾಡಿದ್ದ. ಈ ವೇಳೆ ಪೋಷಕರು, ಯುವತಿಯನ್ನು ಪ್ರಶ್ನೆ ಮಾಡಿದಾಗ, ಐದಾರು ವರ್ಷದಿಂದ ಆರೋಪಿ ಆನಂದಮೂರ್ತಿ ಎಸಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿದ್ದಾಳೆ. ಹೀಗಾಗಿ ಪೋಷಕರು, ವಕೀಲರ ಸಹಾಯದಿಂದ ಆರೋಪಿಗಳಾದ ಆನಂದಮೂರ್ತಿ ಹಾಗೂ ಆಕೆಯ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿರುವ ಕೆ.ಆರ್‌.ಪುರ ಠಾಣೆ ಪೊಲೀಸರು ವಂಚಕ ದಂಪತಿ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios