* ಬಯಲಿಗೆ ಬಂದ ನಕಲಿ ಪಾಸ್ ಪೋರ್ಟ್ ಜಾಲ* ಐವರು ಬಾಂಗ್ಲಾ ಪ್ರಜೆಗಳ ಬಂಧನ* ಇದರ ಹಿಂದೆ ದೊಡ್ಡ ಜಾಲವೆ ಇರುವ ಶಂಕೆ
ನವದೆಹಲಿ(ಸೆ.17) : ನವದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ (IGI) ವಿಮಾನ ನಿಲ್ದಾಣದಲ್ಲಿ ನಕಲಿ ಪಾರ್ಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿ ಆರು ಜನರ ಬಂಧನವಾಗಿದೆ. ಇದರಲ್ಲಿ ಐದು ಜನ ಬಾಂಗ್ಲಾ ಪ್ರಜೆಗಳು ಸೇರಿದ್ದಾರೆ. ಭಾರತೀಯ ಪಾಸ್‌ಪೋರ್ಟ್‌ಗಳೊಂದಿಗೆ ಇದ್ದವರನ್ನು ಅರೆಸ್ಟ್ ಮಾಡಲಾಗಿದೆ.
ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೆ ಬಂದಿದೆ ಆಪ್
ಐವರು ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಆರು ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 11 ರಂದು ಐಜಿಐ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಮೂವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) (ವಿಮಾನ ನಿಲ್ದಾಣ) ವಿಕ್ರಮ್ ಪೊರ್ವಾಲ್ ತಿಳಿಸಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆ ನಡೆಸಿದಾಗ ಮತ್ತೆ ಮೂವರು ಆರೋಪಿಗಳು ಸೆರೆ ಸಿಕ್ಕರು. ಒಟ್ಟು 27 ಅನಧಿಕೃತ ಪಾಸ್‌ಪೋರ್ಟ್‌ಗಳು, 15 ಅರೈವಲ್ ಮತ್ತು ಡಿಪಾರ್ಚರ್ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ವಂಚನೆ ಮತ್ತು ಪೋರ್ಜರಿ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಇದರ ಹಿಂದಿನ ಜಾಲ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
