ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ವಿದೇಶಾಂಗ ಇಲಾಖೆ ಇನ್ನೂ ಸರಳಗೊಳಿಸಿದೆ. ದೇಶದ ಯಾವುದೇ ಮೂಲೆಯಿಂದಾದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. 

ನವದೆಹಲಿ: ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ವಿದೇಶಾಂಗ ಇಲಾಖೆ ಇನ್ನೂ ಸರಳಗೊಳಿಸಿದೆ. ದೇಶದ ಯಾವುದೇ ಮೂಲೆಯಿಂದಾದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾದ ಹೊಸ ಎಂ ಪಾಸ್‌ಪೋರ್ಟ್‌ಸೇವಾ ಎಂಬ ಮೊಬೈಲ್‌ ಆ್ಯಪ್‌ ಅನ್ನು ಮಂಗಳವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಲೋಕಾರ್ಪಣೆ ಮಾಡಿದ್ದಾರೆ.

 ಈ ಆ್ಯಪ್‌ ಅನ್ನು ಸುಷ್ಮಾ ಅವರು ಪಾಸ್‌ಪೋರ್ಟ್‌ ಕ್ರಾಂತಿ ಎಂದು ಬಣ್ಣಿಸಿದ್ದಾರೆ. ಆರನೇ ಪಾಸ್‌ಪೋರ್ಟ್‌ ಸೇವಾ ದಿವಸದ ಪ್ರಯುಕ್ತ ಲೋಕಾರ್ಪಣೆಗೊಂಡಿರುವ ಆ್ಯಪ್‌ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ಗಳಲ್ಲಿ ಲಭ್ಯವಾಗಲಿದೆ.

ಇನ್ನು ಮುಂದೆ, ಪಾಸ್‌ಪೋರ್ಟ್‌ ಸೇವೆಗೆ ಅರ್ಜಿ ಸಲ್ಲಿಸಲು ಕಂಪ್ಯೂಟರ್‌ ಅಥವಾ ಪ್ರಿಂಟರ್‌ ಅಗತ್ಯವಿರುವುದಿಲ್ಲ. ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ, ಪಾಸ್‌ಪೋರ್ಟ್‌ ಸೇವೆ ಕುರಿತ ವ್ಯವಹಾರಗಳನ್ನು ನಿರ್ವಹಿಸಬಹುದು.