Asianet Suvarna News Asianet Suvarna News

Belagavi Crime: ಕ್ರಿಕೆಟ್‌ ಮೈದಾನಕ್ಕೆ ಕಾರು ನುಗ್ಗಿಸಬೇಡಿ ಎಂದ ಇಬ್ಬರು ಯುವಕರನ್ನು ಕೊಂದೇ ಬಿಟ್ಟ ಪಾಪಿ

ಕ್ರಿಕೆಟ್‌ ಆಡುತ್ತಿದ್ದ ಮೈದಾನಕ್ಕೆ ಕಾರು ನುಗ್ಗಿಸಿದ್ದಕ್ಕೆ ಅದನ್ನು ಪ್ರಶ್ನೆ ಮಾಡಿದ್ದ ಇಬ್ಬರು ಯುವಕರನ್ನು ಮೈದಾನದಲ್ಲಿಯೇ ಚಾಚು ಚುಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಶಿಂಧೊಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿದೆ ನೋಡಿ ಘಟನೆಯ ಪೂರ್ಣ ವಿವರ...

Sinner who killed the youth by telling them not to enter the cricket ground sat
Author
First Published Dec 26, 2022, 10:36 AM IST

ಬೆಳಗಾವಿ (ಡಿ.26): ಸಾಮಾನ್ಯವಾಗಿ ನಾವು ಆಟವಾಡುವಾಗ ಯಾರಾದರೂ ಬೇಕಂತಲೇ ಅಡ್ಡಪಡಿಸಿದರೆ ಅವರ ಮೇಲೆ ಸಿಟ್ಟು ಮಾಡಿಕೊಂಡು ಬೇರೆಡೆ ಹೋಗಿ ಎಂದು ಹೇಳುವುದು ಸಾಮಾನ್ಯ. ಆದರೆ, ಕ್ರಿಕೆಟ್‌ ಆಡುತ್ತಿದ್ದ ಮೈದಾನಕ್ಕೆ ಕಾರು ನುಗ್ಗಿಸಿದ್ದಕ್ಕೆ ಅದನ್ನು ಪ್ರಶ್ನೆ ಮಾಡಿದ್ದ ಇಬ್ಬರು ಯುವಕರನ್ನು ಮೈದಾನದಲ್ಲಿಯೇ ಚಾಚು ಚುಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಶಿಂಧೊಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿ ಕ್ಷುಲ್ಲಕ ಕಾರಣಕ್ಕೆ ಸವು, ಆತ್ಮಹತ್ಯೆ, ಕೊಲೆಗಳು ನಡೆಯುವುದು ನೋಡಿದರೆ ಮನ್ಯಷ್ಯ ಜೀವನ ಇಷ್ಟೊಂದು ಕೀಲಾಗಿ ಹೋಯಿತೇ ಎಂದು ಅಸಹ್ಯ ಹುಟ್ಟಿಸುವಂತಿದೆ. ಇಲ್ಲಿಯೂ ಕೂಡ ಕ್ರಿಕೆಟ್‌ ಮೈದಾನಕ್ಕೆ ಕಾರು ನುಗ್ಗಿಸಬೇಡಿ ಎಂದು ಹೇಳಿದ್ದ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಯು ಕ್ರಿಕೆಟ್‌ ಆಡುತ್ತಿದ್ದ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ಆತನ ಮನಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಇಬ್ಬರು ಯುವಕರು ಪ್ರಾಣ ಚೆಲ್ಲಿದ್ದು ಮಾತ್ರ ಭರಿಸಲಾಗದ ನಷ್ಟ ಉಂಟು ಮಾಡಿರುವುದಂತೂ ಸತ್ಯವಾಗಿದೆ.

Bengaluru crime: ಉದ್ಯಮಿ ಮನೆಯಲ್ಲಿ ಜೋಡಿ ಕೊಲೆ: ಚಿನ್ನಾಭರಣ ಲೂಟಿ

ನೋಡ ನೋಡುತ್ತಿದ್ದಂತೆ ಚಾಕು ಚುಚ್ಚಿಯೇಬಿಟ್ಟ: ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಗ್ರಾಮದಲ್ಲಿ ರಾತ್ರಿ ನಡೆದ ಘಟನೆ ನಡೆದಿದೆ. ಬಸವರಾಜ್ ಬೆಳಗಾಂವ್ಕರ್ (22), ಗಿರೀಶ ನಾಗಣ್ಣವರ (22) ಕೊಲೆಯಾದ ದುರ್ದೈವಿಗಳು ಆಗಿದ್ದಾರೆ. ಮೃತರ ಪೈಕಿ ಬಸವರಾಜ್ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದರೆ, ಗಿರೀಶ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದನು. ಇನ್ನು ಕುಟುಂಬದ ನಿರ್ವಹಣೆ ನೋಡಿಕೊಳ್ಳಬೇಕಾದ ಯುವಕರು ಇಲ್ಲದಂತಾಗಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ, ಇನ್ನು ಕೊಲೆ ಮಾಡಿದ ತಕ್ಷಣವೇ ದುಷ್ಕರ್ಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನಡೆದಿದ್ದು ಹೇಗೆ?: ಶಿಂಧೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಯುವಕರು ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮೈದಾನದಲ್ಲಿ ವಾಹನ ನುಗ್ಗಿಸಿದ್ದಾನೆ. ಇದರಿಂದ ಯುವಕರು ಮೈದಾನಕ್ಕೆ ಕಾರು ನುಗ್ಗಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವಕರ ಆಕ್ಷೇಪಕ್ಕೆ ಸಿಟ್ಟಾದ ಚಾಲಕ ವಾಹನದಿಂದ ಕೆಳಗಿಳಿದು ಚಾಕುವಿನಿಂದ ಚುಚ್ಚಿ ಯುವಕರಿಬ್ಬರ ಬರ್ಬರ ಹತ್ಯೆ ಮಾಡಿದ್ದಾನೆ. ಸ್ಥಳದಲ್ಲಿಯೇ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟ ಯುವಕರ ಮೃತ ದೇಹಗಳನ್ನು ಬಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. 

ಇದನ್ನೂ ಓದಿ: Yadagiri Crime: ಹತ್ತಿ ಹೊಲದಲ್ಲಿ ಮೈ ಮರೆತಿದ್ದ ಜೋಡಿಯನ್ನು ಕೊಡಲಿಯಿಂದ ಕತ್ತರಿಸಿ ಕೊಂದ ಪತಿ

ಜಿಲ್ಲಾಸ್ಪತ್ರೆಯ ಬಳಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ: ಇನ್ನು ಘಟನೆ ನಡೆದ ಶಿಂಧೊಳ್ಳಿ ಗ್ರಾಮದ ಕ್ರಿಕೆಟ್‌ ಮೈದಾನದ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೊಲೆಗೆ ಕಾರಣವಾಗಿರುವ ಬಗ್ಗೆಯೂ ವಿಚಾರಣೆ ಮಾಡಿದ್ದಾರೆ. ಇನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತದೇಹ ಇಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಗಲಾಟೆ ಸಂಭವಿಸುವ ಆತಂಕವಿದೆ. ಆದ್ದರಿಂದ ಭದ್ರತೆ ಮತ್ತು ಸಾರ್ವಜನಿಕ ಆಸ್ತಿ ಸಂರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

Follow Us:
Download App:
  • android
  • ios