Yadagiri Crime: ಹತ್ತಿ ಹೊಲದಲ್ಲಿ ಮೈ ಮರೆತಿದ್ದ ಜೋಡಿಯನ್ನು ಕೊಡಲಿಯಿಂದ ಕತ್ತರಿಸಿ ಕೊಂದ ಪತಿ

ಹಂತಕನ ಕ್ರೌರ್ಯಕ್ಕೆ ಕಪ್ಪುಹೊಲ ಆಗಿತ್ತು ರಕ್ತಗೆಂಪು..!
ಹತ್ತಿ ಹೊಲದಲ್ಲಿ ಮೈ ಮರೆತಿದ್ದ ಜೋಡಿ ಮೇಲೆ ಅಟ್ಯಾಕ್..!
ಮಟ ಮಟ ಮಧ್ಯಾಹ್ನವೇ ನಡೆದು ಹೋಗಿತ್ತು ಜೋಡಿಕೊಲೆ..!
ಹಂತಕನ ಕ್ರೌರ್ಯಕ್ಕೆ ಕಪ್ಪುಹೊಲ ಆಗಿತ್ತು ರಕ್ತಗೆಂಪು..!
ಜೋಡಿಕೊಲೆಯ ಭೀಕರತೆ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

Husband kills couple with ax in cotton field sat

ಬೆಂಗಳೂರು (ಡಿ.17): ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ಕಾಚಾಪುರ ಅನ್ನೋ ಗ್ರಾಮ ಅವತ್ತು ಮಟಮಟ ಮಧ್ಯಾಹ್ನ ಹತ್ತಿಯ ಹೊಲದಲ್ಲಿ ಜೋಡಿ ಹೆಣಗಳು ಬಿದ್ದಿದ್ದವು. ಮೃತ ಮಹಿಳೆ 30ರ ಆಸುಪಾಸಿನ ಬಸಮ್ಮ ಕಾಚಾಪುರ ನಿವಾಸಿ ಮಲ್ಲಣ್ಣ ಎಂಬುವವನ ಹೆಂಡತಿ. ಇನ್ನೊಂದು ಮೃತದೇಹ ಇದೇ ಕಾಚಾಪುರದ 180 ಎಕರೆ ಆಸ್ತಿ ಇರುವ ಆಗರ್ಭ ಶ್ರೀಮಂತ 36 ವರ್ಷದ ನಾಡಗೌಡನದ್ದಾಗಿದೆ.

ಆದರೆ, ಈ ಇಬ್ಬರನ್ನೂ ಕೊಲೆ ಮಾಡಿದ್ದು ಬೇರ್ಯಾರೂ ಅಲ್ಲ, ಬಸಮ್ಮನ ಗಂಡ ಮಲ್ಲಣ್ಣ ಆಗಿದ್ದಾನೆ. ಈ ಭೀಕರ ಕೊಲೆಗೆ ಇದ್ದ ಕಾರಣ ಇವರಿಬ್ಬರ ಮಧ್ಯೆ ಇದ್ದ ಅಕ್ರಮ ಸಂಬಂಧ. ನಾಡಗೌಡ ಅನ್ನೋ ಕೋಟ್ಯಾಧಿಪತಿ ಜಮೀನ್ದಾರ. ಬಸಮ್ಮಳನ್ನ ಬುಟ್ಟಿಗೆ ಹಾಕ್ಕೊಂಡಿದ್ದ. ಹಲವು ವರ್ಷಗಳಿಂದ ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಇದ್ದೇ ಇತ್ತು. ಆದರೆ, ಅಕ್ರಮ ಸಂಬಂಧವನ್ನು ಸಹಿಸಲಾರದೇ ಸಮಯಕ್ಕಾಗಿ ಕಾಯುತ್ತಿದ್ದ ಬಸಮ್ಮಳ ಗಂಡ ಇಬ್ಬರೂ ಏಕಾಂತದಲ್ಲಿ ಇರುವಾಗಲೇ ಸ್ಥಳಕ್ಕೆ ಹೋಗಿ ಕೊಲೆ ಮಾಡಿದ್ದಾನೆ.

ಮಕ್ಕಳ ಭವಿಷ್ಯದಿಂದ ಸುಮ್ಮನಿದ್ದ ಮಲ್ಲಣ್ಣ: ಮಲ್ಲಣ್ಣನಿಗೆ ಹೆಂಡ್ತಿ ಬಸಮ್ಮಳ ಕ್ಯಾರೆಕ್ಟರ್ ಸರಿ ಇಲ್ಲ ಅನ್ನೋದು ಗೊತ್ತಾಗಿ ತುಂಬಾ ದಿನವೇ ಆಗಿತ್ತು. ಆಗಾಗ ಊರಿನ ಸಿರಿವಂತ ಜಮೀನ್ದಾರ ಈ ನಾಡಗೌಡ ಮನೆಗೆ ಬಂದು ಹೋಗಿ ಮಾಡ್ತಾನೆ ಅನ್ನೋದು ಗೊತ್ತಿತ್ತು. ಈ ವಿಚಾರದಲ್ಲಿ ಹಲವು ಬಾರಿ ಗಂಡ ಮಲ್ಲಣ್ಣನಿಗೂ ಮತ್ತು ಹೆಂಡ್ತಿ ಬಸಮ್ಮಳಿಗೂ ಗಲಾಟೆ ಆಗಿತ್ತು. ಆದರೆ, ಎಷ್ಟೇ ಸಾಕ್ಷಿ ತಂದು ಮುಂದಿಟ್ಟರೂ ಬಸಮ್ಮ ಮಾತ್ರ ಇರೋ ಸತ್ಯವನ್ನ ಯಾವತ್ತು ಒಪ್ಪಿಕೊಂಡಿರಲಿಲ್ಲ. ಎರಡೂ ಮನೆಯವರನ್ನ ಕರೆಸಿ ಹೇಳಿದರೂ ಆಕೆ ಕೇಳಿರಲಿಲ್ಲ, ಜೊತೆಗೆ ರಾಜಿ ಪಂಚಾಯಿತಿ ನಡೆಸಿದರೂ ಒಂದೆರಡು ದಿನ ಸುಮ್ನನಿದ್ದು, ಮತ್ತೆ ಗಂಡನಿಗೆ ಮೋಸ ಮಾಡಿ ನಾಡಗೌಡನ ತೋಳ ತೆಕ್ಕೆಯಲ್ಲಿ ಒಂದಾಗುತ್ತಿದ್ದಳು.

'ಮುದ್ದು ಸರೋಜಾ ವದ್ದು ಸರೋಜಾ..' ಅಂದ್ಕೊಂಡು ಹೋದ ಡಾಬಾ ಹುಡ್ಗ ನಡುರಸ್ತೆಯಲ್ಲೇ ಹೆಣವಾದ!

ದಂಪತಿಗೆ ಮೂರು ಮಕ್ಕಳು: ಬಸಮ್ಮ ಮತ್ತು ಮಲ್ಲಣ್ಣ ದಂಪತಿಗೆ 2 ಗಂಡು 1 ಹೆಣ್ಣು ಸೇರಿ ಒಟ್ಟು ಮೂರು ಮಕ್ಕಳಿದ್ದರು. ಹೀಗಾಗಿ, ಹೆಂಡತಿಯ ವಿಚಾರ ಗೊತ್ತಿದದರೂ ಯಾವುದೇ ಕಾರಣಕ್ಕೂ ಮಕ್ಕಳಿಗೆ ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ಮಲ್ಲಣ್ಣ ತನ್ನ ಹೆಂಡ್ತಿ ವಿಚಾರ ಗೊತ್ತಿಲ್ಲದಂತೇ ಇದ್ದುಬಿಟ್ಟಿದ್ದ. ತುಂಬಿದ ಊರಿನಲ್ಲಿ ಎಲ್ಲಿ ತನ್ನ ಮನೆ ಮಾನ ಮರ್ಯಾದೆ ಬೀದಿ ಪಾಲಾಗುತ್ತೋ ಅನ್ನೋ ಭಯ ಆತನಿಗಿತ್ತು. ಇದೇ ಕಾರಣಕ್ಕಾಗಿ ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದಂತೆ ಇದ್ದುಬಿಟ್ಟಿದ್ದ. ಆದರೆ, ಯಾವಾಗ ಹೆಂಡ್ತಿ ಮಲ್ಲಮ್ಮಳ ಆಟ ಅತಿಯಾಯ್ತೋ, ಕದ್ದು ಮುಚ್ಚಿ ಹೊಲದ ಮಧ್ಯೆ, ಮೋಟಾರ್ ಮನೆ ಹೀಗೆ ಎಲ್ಲೆಂದ್ರಲ್ಲಿ ಮಲ್ಲಮ್ಮ ಮತ್ತು ನಾಡಗೌಡ ಕಣ್ಣಾ ಮುಚ್ಚಾಲೆ ಆಟವನ್ನ ಮುಂದುವರೆಸಿದರೋ ಆಗ ಮಲ್ಲಣ್ಣನ ಆಕ್ರೋಶ ಹೆಚ್ಚಾಗಿತ್ತು.

ಚಿಕ್ಕಮ್ಮನ ಸರಸ ನೋಡಿದ್ದ ಶಿವಣ್ಣ: ಡಿಸೆಂಬರ್ 1ನೇ ತಾರೀಕು ಗುರುವಾರ ಮಧ್ಯಾಹ್ನ ಗಂಡನಿಗೆ ಊಟ ಕೊಟ್ಟು ಮನೆಯಿಂದ ಏನೂ ಗೊತ್ತಿಲ್ಲದವಳಂತೆ ಕಳ್ಳ ಹೆಜ್ಜೆ ಇಟ್ಟು ಹತ್ತಿಹೊಲದ ಕಡೆಗೆ ಬಸಮ್ಮ ಹೋಗಿದ್ದಾಳೆ. ಇನ್ನು ಅಲ್ಲಿಗೆ ಬಂದು ಕಾದು ಕುಳಿತಿದ್ದ ನಾಡಗೌಡನ ಜೊತೆ ಚಕ್ಕಂದ ಆಡೋ ಯೋಜನೆ ಮಾಡಿಕೊಂಡಿದ್ದಳು. ಇಬ್ಬರೂ ಇದೇ ಹತ್ತಿ ಹೊಲದಲ್ಲಿ ವಿರಹಬಾದೆ ತೀರಿಸಿಕೊಳ್ಳಲು ಅವಸರದಲ್ಲಿದ್ದರು. ಆದರೆ, ಈ ಪ್ರೇಮಪಕ್ಷಿಗಳ ಆತುರವನ್ನ ಮಲ್ಲಣ್ಣನ ಅಣ್ಣ ಮಗ ಶಿವಣ್ಣ ಕಣ್ಣಾರೆ ನೋಡಿದ್ದಾನೆ. ತನ್ನ ಚಿಕ್ಕಮ್ಮ ನಾಡಗೌಡನನ್ನ ಭೇಟಿಯಾಗಲು ಹತ್ತಿಹೊಲದ ಹಾದಿಯಲ್ಲಿ ಹೊರಟಿದ್ದುದನ್ನು ಕಂಡು ಎಲ್ಲವನ್ನು ಮಲ್ಲಣ್ಣನಿಗೆ ಹೇಳಿದ್ದಾನೆ. 

Yadgir: ಆಸ್ತಿ ವಿಚಾರಕ್ಕೆ ಅಣ್ಣನಿಂದ ತಮ್ಮನ ಪತ್ನಿ ಮೇಲೆ ಹಲ್ಲೆ!

ಹೊಲಸು ವಿಚಾರ ತಿಳಿದು ಕಟ್ಟೆಯೊಡೆದ ಆಕ್ರೋಶ: ಯಾವಾಗ, ತನ್ನಣ್ಣನ ಮಗ ಶಿವಣ್ಣ ಅಂಥದ್ದೊಂದು ಹೊಲಸು ಸಮಾಚಾರವನ್ನ ತಂದು ಮಲ್ಲಣ್ಣನ ಕಿವಿಯಲ್ಲಿ ಉಸುರಿದನೋ ಆಗ ಮಲ್ಲಣ್ಣನ ಆಕ್ರೋಶದ ಕಟ್ಟೆ ಒಡೆದಿತ್ತು. ಈ ವೇಳೆ ತನ್ನ ಸಂಬಂಧಿಕನಾದ ಬಸವರಾಜುನನ್ನೂ ಕರೆದುಕೊಂಡು ಕೈಯಲ್ಲಿ ಕುಡುಗೋಲು ಹಿಡಿದು ಹೊಲದತ್ತ ಹೊರಟನು. ಈ ವಿಷಯ ತಿಳಿಸಿದ್ದ ಶಿವಣ್ಣನೂ ಚಿಕ್ಕಪ್ಪನ ಜೊತೆಗೆ ಬಂದನು. ಹತ್ತಿ ಹೊಲದಲ್ಲಿ ಇಬ್ಬರ ಸರಸ ಸಲ್ಲಾಪ ಮುಂದುವರೆದ ಸ್ಥಳಕ್ಕೆ ಬಂದು ಕಾಮದಾಹ ತೀರಿಸಿಕೊಳ್ಳುತ್ತಿದ್ದ ಇಬ್ಬರನ್ನೂ ಕೊಡಲಿಯಿಂದ ಮಲ್ಲಣ್ಣ ಕತ್ತರಿಸಿದ್ದಾನೆ. ಕೆಲವೇ ನಿಮಿಷಗಳ ಹಿಂದೆ ಸುಖದ ಅಮಲಿನಲ್ಲಿ ತೇಲಾಡ್ತಿದ್ದ ಜೋಡಿ ನೆತ್ತರ ಓಕುಳಿಯಲ್ಲಿ ಮಿಂದು ಪ್ರಾಣಬಿಟ್ಟರು. ಹತ್ತಿಯ ಹೊಲ ಪ್ರೇಮಿಗಳ ನೆತ್ತರ ಕುಡಿದು ಕೆಂಪಾಗಿತ್ತು.

ಪೊಲೀಸರಿಗೆ ಶರಣಾದ ಆರೋಪಿಗಳು: ಕೊಲೆ ಮಾಡಿದ ವಿಚಾರ ಊರಿಗೆ ಗೊತ್ತಾದ ನಂತರ ಓಡಿ ಹೋಗಿ ತಲೆ ಮರೆಸಿಕೊಳ್ಳುವ ಮರ್ಜಿಗೆ ಹೋಗದ ಮಲ್ಲಣ್ಣ ಕೆಂಬಾವಿ ಪೊಲೀಸರು ಹುಡುಕೋ ಮೊದಲೇ ಅವರ ಮುಂದೆ ಹಾಜಾರ್ ಆಗಿದ್ದನು. ಶವವನ್ನ ಪೋಸ್ಟ್ ಮಾರ್ಟಮ್ ಸಾಗಿಸಿದ ಬಳಿಕ, ಸ್ಥಳಕ್ಕೆ ಖುದ್ದು ಎಸ್ಪಿ ಸಿಬಿ ವೇದಮೂರ್ತಿ ಘಟನೆ ನಡೆದ ಜಾಗಕ್ಕೆ ಬಂದು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರು. ಆರೋಪಿಗಳಾದ ಮಲ್ಲಣ್ಣ, ಶಿವಣ್ಣ ಮತ್ತು ಈ ಬಸವರಾಜು ಅನ್ನೋ ಮೂರೂ ಮಂದಿ ಕೆಂಬಾವಿ ಸ್ಟೇಷನ್ ಜೈಲಿನಲ್ಲಿದ್ದರು.

Bengaluru Crime: ನಂಬಿಕೆ ಇಲ್ಲದವನ ಪ್ರೀತಿ ನಂಬಿಕೊಂಡು ಕೊಲೆಯಾದ ನೇಪಾಳಿ ಸುಂದರಿ

ದುರುದ್ದೇಶ ಇಟ್ಟುಕೊಂಡು ಕೊಲೆ:  ಸುಮಾರು 180 ಎಕರೆ ಆಸ್ತಿ ಇದ್ದ ಈ ನಾಡಗೌಡನ ಕಡೆಯವರು ಈ ಕೊಲೆಯಲ್ಲಿ ಬೇರೆ ಏನೋ ರೀಸನ್ ಇದೆ ಅನ್ನೋ ಆರೊಪ ಮಾಡಿದ್ದಾರೆ. ಆದರೆ, ಅಕ್ರಮ ಸಂಬಂಧ, ಹೊಲದಲ್ಲಿ ಬೇಟಿ, ಕಳ್ಳತನದ ಹೆಜ್ಜೆಗಳು, ಮಲ್ಲಮ್ಮಳ ಗಂಡನ ಕೈಗೆ ಸಿಕ್ಕಿಹಾಕಿಕೊಂಡಿದ್ದು ಇದೆಲ್ಲಾ ಬರೀ ಸುಳ್ಳು ಅಂತಿದ್ದಾರೆ. ಆದರೆ, ಬೇರೆ ದುರುದ್ದೇಶ ಮುಚ್ಚಿಟ್ಟು ಅಕ್ರಮ ಸಂಬಂಧದ ಕಾರಣ ಹೇಳಿ ಕೊಲೆ ಮಾಡಿದ್ದಾರೆ ಅಂತಿದ್ದಾರೆ.

ಬಡವಾದ ಮೂರು ಕಂದಮ್ಮಗಳು: ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆ ಮಾತಿನಂತೆ, ಅಮ್ಮನನ್ನ ಕೊಂದ ಅಪ್ಪ ಜೈಲು ಪಾಲಾದರು. ಆದರೆ, ಅಪ್ಪ ಅಮ್ಮನನ್ನ ಯಾಕೆ ಕೊಂದ ಅಂತಲೂ ಗೊತ್ತಿಲ್ಲದ ಈ ಮುಗ್ಧ, ಅಮಾಯಕ ಕುಡಿಗಳು ಅನಾಥ ಪ್ರಜ್ಞೆಯಿಂದ ನರಳುತ್ತಿವೆ. ಇನ್ನೂ ಹೆಣ್ಣು ಕಾಲಿಟ್ಟ ಕಡೆ ಲಕ್ಷ್ಮೀ ಒಲೀತಾಳಂತೆ. ಆದರೆ, ಅದೇ ಹೆಣ್ಣು ನಿಜಜೀವನದಲ್ಲಿ ಹೊಸ್ತಿಲು ದಾಟಿದರೆ ಏನೇನೆಲ್ಲಾ ಅನಾಹುತಗಳು ನಡೆದು ಹೋಗುತ್ತೆ ಎನ್ನುವುದು ಈ ಜೋಡಿ ಹತ್ಯೆಯ ಕಥೆ ತಾಜಾ ಉದಾಹರಣೆಯಾಗಿದೆ. 

Latest Videos
Follow Us:
Download App:
  • android
  • ios