Asianet Suvarna News Asianet Suvarna News

ಶಿವಮೊಗ್ಗ: ಒಂಟಿ ಮನೆ ದರೋಡೆಗೆ ಯತ್ನ, ಪಶ್ಚಿಮ ಬಂಗಾಳ ವ್ಯಕ್ತಿ ಬಂಧನ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಂಟಿ ಮನೆಗಳ ಗುರುತಿಸಿ ದರೋಡೆ ಮತ್ತು ಹಲ್ಲೆಗೆ ಯತ್ನಿಸುತ್ತಿದ್ದ ಪಶ್ಚಿಮ ಬಂಗಾಳ ರಾಜ್ಯದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Single house robbery attempt West Bengal man arrested at shivamogga rav
Author
First Published Sep 18, 2023, 4:24 PM IST

ಸಾಗರ (ಸೆ.18) : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಂಟಿ ಮನೆಗಳ ಗುರುತಿಸಿ ದರೋಡೆ ಮತ್ತು ಹಲ್ಲೆಗೆ ಯತ್ನಿಸುತ್ತಿದ್ದ ಪಶ್ಚಿಮ ಬಂಗಾಳ ರಾಜ್ಯದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಪಶ್ಚಿಮಬಂಗಾಳ ರಾಜ್ಯದ ಮುರ್ಷಿದಾಬಾದ್ ಜಿಲ್ಲೆ, ಭಗಂಗೋಲ್ ತಾಲೂಕಿನ ರಾಣಿಲ್ ಗ್ರಾಮದ ಹದೀದ್ ಷಾ ಬಂಧಿತ ಆರೋಪಿ. ಈತ ಆವಿನಹಳ್ಳಿ ಹೋಬಳಿಯ ಕೋಳೂರು, ಗೆಣಸಿನಕುಣಿ, ಗಿಣಿವಾರ, ಕೌತಿ, ಹುಲಿದೇವರಬನ, ಅಂಬಾರಗೋಡ್ಲು ಗ್ರಾಮ ವ್ಯಾಪ್ತಿಯ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದ. ಅಲ್ಲದೆ, ಒಂಟಿ ಮನೆಗಳನ್ನು ಗುರುತಿಸಿ, ದರೋಡೆ ಮತ್ತು ಹಲ್ಲೆಗೆ ಯತ್ನಿಸುತ್ತಿದ್ದ.

 

Viral video: ದಾವಣಗೆರೆ ಜನರಲ್ಲಿ ಭಯಭೀತಿಗೊಳಿಸಿದ ಒಂಟಿ ಮನೆ ದರೋಡೆ!

ಸೆ.10ರಂದು ಆರೋಪಿ ಹದೀದ್ ಷಾ ಅಂಬಾರಗೋಡ್ಲು ಗ್ರಾಮದ ಸುಜಾತ ಕೋಂ ಶೇಖರ್ ಶೆಟ್ಟಿ ಎಂಬವರ ಮನೆಗೆ ನುಗ್ಗಿ ಸಿಸಿ ಕ್ಯಾಮೆರಾ ಸಂಪರ್ಕವನ್ನು ಕಡಿತಗೊಳಿಸಿ, ಮಾರಾಣಾಂತಿಕ ಹಲ್ಲೆ ನಡೆಸಿದ್ದನು. ಆರೋಪಿ ಪತ್ತೆಗೆ ಇಳಿದ ಪೊಲೀಸರು ಹದೀದ್ ಷಾನನ್ನು ಬಂಧಿಸಿದ್ದಾರೆ. ಅಲ್ಲದೇ, ಹಲ್ಲೆ ಮಾಡಲು ಆತ ಬಳಸಿದ್ದ ಕಬ್ಬಿಣದ ರಾಡ್, ಸಿಸಿ ಕ್ಯಾಮರಾ ತಂತಿ ತುಂಡು ಮಾಡುವ ವಸ್ತು, ಮಾಸ್ಕ್, ಹ್ಯಾಂಡ್ ಗ್ಲೌಸ್ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿವೈಎಸ್‌ಪಿ ಗೋಪಾಲಕೃಷ್ಣ ಟಿ. ನಾಯ್ಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಮಹಾಬಲೇಶ್ವರ ನಾಯ್ಕ್, ಸಬ್ ಇನ್‌ಸ್ಪೆಕ್ಟರ್ ನಾರಾಯಣ ಮಧುಗಿರಿ, ಸಿಬ್ಬಂದಿ ಸನಾವುಲ್ಲಾ, ಶ್ರೀಧರ್, ಸವಿತಾ, ಪ್ರವೀಣಕುಮಾರ್, ರವಿಕುಮಾರ್, ಗುರುಬಸವರಾಜ, ವಿಶ್ವನಾಥ್ ಮತ್ತು ಚಾಲಕ ಗಿರೀಶ್ ಬಾಬು ಪಾಲ್ಗೊಂಡಿದ್ದರು. 

ಮಾಜಿ ಸಂಸದ ಪತ್ನಿಯನ್ನೂ ಬಿಡದ ಕಳ್ಳರು! ನೀರು ಕೇಳೋ ನೆಪದಲ್ಲಿ ಸರ ಕಿತ್ತು ಪರಾರಿ!

Follow Us:
Download App:
  • android
  • ios