Asianet Suvarna News Asianet Suvarna News

ಮಾಜಿ ಸಂಸದ ಪತ್ನಿಯನ್ನೂ ಬಿಡದ ಕಳ್ಳರು! ನೀರು ಕೇಳೋ ನೆಪದಲ್ಲಿ ಸರ ಕಿತ್ತು ಪರಾರಿ!

ಕಳೆದ ಕೆಲ ದಿನಗಳಿಂದ ಕಡಿಮೆಯಾಗಿದ್ದ ಕಳ್ಳರ ಹಾವಳಿ ನಗರದಲ್ಲಿ ಮತ್ತೆ ಆರಂಭವಾಗಿದೆ. ಕುಡಿಯಲು ನೀರು ಕೇಳಿ, ಮಾಜಿ ಸಂಸದನ ಪತ್ನಿಯ ಸರವನ್ನೇ ಕಳ್ಳರು ದೋಚಿದ ಘಟನೆ ಬುಧವಾರ ನಡೆದಿದೆ.

Thieves snatched former MP's wifes necklace in sirsi uttara kannada news rav
Author
First Published Sep 7, 2023, 8:32 AM IST

ಶಿರಸಿ (ಸೆ.7) :  ಕಳೆದ ಕೆಲ ದಿನಗಳಿಂದ ಕಡಿಮೆಯಾಗಿದ್ದ ಕಳ್ಳರ ಹಾವಳಿ ನಗರದಲ್ಲಿ ಮತ್ತೆ ಆರಂಭವಾಗಿದೆ. ಕುಡಿಯಲು ನೀರು ಕೇಳಿ, ಮಾಜಿ ಸಂಸದನ ಪತ್ನಿಯ ಸರವನ್ನೇ ಕಳ್ಳರು ದೋಚಿದ ಘಟನೆ ಬುಧವಾರ ನಡೆದಿದೆ.

ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ದೇವರಾಯ ನಾಯ್ಕ ಅವರ ಮನೆಯಲ್ಲಿ ಈ ಸುಲಿಗೆ ಪ್ರಕರಣ ನಡೆದಿದೆ. ಶಿರಸಿ ನಗರದ ಯಲ್ಲಾಪುರ ನಾಕಾದಲ್ಲಿರುವ ಮಾಜಿ ಸಂಸದರ ಮನೆಯಲ್ಲಿ ಅವರ ಪತ್ನಿ ಗೀತಾ ನಾಯ್ಕ ಒಬ್ಬರೇ ಇದ್ದಾಗ ಅಪರಿಚಿತ ವ್ಯಕ್ತಿಯೊರ್ವ ನೀರು ಕೇಳುವ ನೆಪ ಮಾಡಿಕೊಂಡು, ಅವರ ಕುತ್ತಿಗೆಯಲ್ಲಿದ್ದ ಸರ ಹರಿದುಕೊಂಡು ಹೋಗಿದ್ದಾನೆ.‌ ಅಂದಾಜು ₹ ೩ ಲಕ್ಷ ಮೌಲ್ಯದ ೬೦ ಗ್ರಾಂ ತೂಕದ ಸರ ಹರಿದುಕೊಂಡು ಹೋಗಲಾಗಿದೆ.

 

ಟ್ರಾಫಿಕ್‌ ಸಿಗ್ನಲ್‌ ಬ್ಯಾಟರಿ ಕಳ್ಳತನ; ಖದೀಮನ ಬೆನ್ನಟ್ಟಿ ಹಿಡಿದ ಪೊಲೀಸ್

ಬುಧವಾರ ಮಧ್ಯಾಹ್ನ ೧೨ ಗಂಟೆಯ ವೇಳೆಗೆ ಘಟನೆ ಜರುಗಿದ್ದು, ಆ ಸಮಯದಲ್ಲಿ ಮಾಜಿ ಸಂಸದರ ಪತ್ನಿ ಹೊರತುಪಡಿಸಿ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ‌. ವಿಷಯ ತಿಳಿದ ನಂತರ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮಗ ನಾಗರಾಜ ನಾಯ್ಕ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌

ಘಟನಾ ಸ್ಥಳಕ್ಕೆ ಮಾರುಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ಹಿಡಿಯಲು ನಾಕಾಬಂದಿ ಸೇರಿದಂತೆ ವಿವಿಧ ತುರ್ತು ಕ್ರಮ ಕೈಗೊಂಡಿದ್ದಾರೆ. ಆದರೆ ಮನೆಗೆ ಸಿಸಿಟಿವಿ ಇಲ್ಲದೇ ಇರುವುದು ಸಮಸ್ಯೆಯಾಗಿದೆ.

ಬಸ್ ಹತ್ತುವ ವೇಳೆ ಮಹಿಳೆಯ ಚಿನ್ನಾಭರಣ ಕಳ್ಳತನ; ಇಬ್ಬರು ಸರಗಳ್ಳಿಯರ ಬಂಧನ

Follow Us:
Download App:
  • android
  • ios