Viral video: ದಾವಣಗೆರೆ ಜನರಲ್ಲಿ ಭಯಭೀತಿಗೊಳಿಸಿದ ಒಂಟಿ ಮನೆ ದರೋಡೆ!

 ಹಾಡುಹಗಲೇ  ದಾವಣಗೆರೆ ಲೇಕ್ ವಿವ್ಹ್ ಬಡಾವಣೆಯಲ್ಲಿ ನಡೆದ ಒಂಟಿ ಮನೆ ದರೋಡೆ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಮನೆ ಯಜಮಾನಿ ಮನೆ ಕಾಂಪೋಂಡ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಹೇಗೋ ಒಳನುಸುಳಿದ ದರೋಡೆಕೋರ ಮನೆ ಗೃಹಿಣಿಗೆ  ಕಲ್ಲಿನಿಂದ ತಲೆಯ ಮೇಲೆ ಹೊಡೆದು 5 ಲಕ್ಷ  ನಗದು ಹಣ  ಕಿತ್ತುಕೊಂಡು  ಪರಾರಿಯಾಗಿದ್ದಾನೆ

Viral video  A single house robbery that terrorized the people of Davangere rav

-ವರದರಾಜ್ 

ದಾವಣಗೆರೆ (ಸೆ.14) ; ಹಾಡುಹಗಲೇ  ದಾವಣಗೆರೆ ಲೇಕ್ ವಿವ್ಹ್ ಬಡಾವಣೆಯಲ್ಲಿ ನಡೆದ ಒಂಟಿ ಮನೆ ದರೋಡೆ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಮನೆ ಯಜಮಾನಿ ಮನೆ ಕಾಂಪೋಂಡ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಹೇಗೋ ಒಳನುಸುಳಿದ ದರೋಡೆಕೋರ ಮನೆ ಗೃಹಿಣಿಗೆ  ಕಲ್ಲಿನಿಂದ ತಲೆಯ ಮೇಲೆ ಹೊಡೆದು 5 ಲಕ್ಷ  ನಗದು ಹಣ  ಕಿತ್ತುಕೊಂಡು  ಪರಾರಿಯಾಗಿದ್ದಾನೆ. ದರೋಡೆಕೋರ ಮನೆ ಪ್ರವೇಶ ಮಾಡಿರುವುದು, ಮನೆಯಿಂದ ಹೊರಗೆ ಹೋಗುವ  ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಳ್ಳನ ಜಾಡನ್ನು ದಾವಣಗೆರೆ ಪೊಲೀಸರು ಬೆನ್ನು ಹತ್ತಿದ್ದಾರೆ. 

ಘಟನೆ ಬಗ್ಗೆ ಮನೆ ಗೃಹಿಣಿ ಹೇಳಿದ್ದು

ದಾವಣಗೆರೆ ಕುಂದುವಾಡ ರಸ್ತೆಯಲ್ಲಿನ ಲೇಕ್ ವಿವ್ ವೀರಭದ್ರೇಶ್ವರ ಪ್ರಸನ್ನ ಮನೆಯಲ್ಲಿ ನಿನ್ನೆ ನಡೆದ ದರೋಡೆ ಪ್ರಕರಣ  ದಾವಣಗೆರೆ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಒಂಟಿ ಮನೆಯಲ್ಲಿ ಮಹಿಳೆಯರು ಒಬ್ಬೊಬ್ಬರೇ ಇದ್ದಾಗ  ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಪ್ರಕರಣ ಸಾಕ್ಷಿಯಾಗಿದೆ. ಮನೆಯಲ್ಲಿ ಮನೆಯೊಡತಿ ಯೋಗೇಶ್ವರಿ ಅವರ ಪುತ್ರ ಇದ್ದಾಗ ಕಳ್ಳನೊಬ್ಬ ಮನೆಯೊಕ್ಕಿದ್ದಾನೆ.. ಮನೆ ಸ್ಟೋರ್ ರೂಂನಲ್ಲಿ ಅಡಿಗಿಕೊಂಡು ಯೋಗೇಶ್ವರಿಯವರು ಅಡುಗೆ ಮನೆಗೆ ಬಂದಾಗ ಅವರ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ನಂತರ ಬೆದರಿಸಿ ಬೀರುವಿನ  ಕೀ ಪಡೆದು ಮನೆಯಲ್ಲಿ ಮಗನ ಚಿಕಿತ್ಸೆಗೆಂದು ಇಟ್ಟಿದ್ದ 5 ಲಕ್ಷ ನಗದು ವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಹಲ್ಲೆಯಿಂದ ತೀವ್ರ ರಕ್ತಸ್ರಾವ ಆಗಿ ಗೃಹಿಣಿ  ಯೋಗೆಶ್ವರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 

ರಾಜ್ಯದ ಆ ಜಿಲ್ಲೆಗೂ ಕಾಲಿಟ್ಟಿದ್ದಾರಾ ಉಗ್ರರು ? ಐಸಿಸ್‌ ನಂಟು ಇರುವ ಶಂಕೆ !

ಕಳ್ಳನ ಎಂಟ್ರಿ ಮತ್ತು ಎಕ್ಸಿಟ್ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ

ಮಗನ ಚಿಕಿತ್ಸೆಗೆಂದು ಮನೆಯಲ್ಲಿ ಇಟ್ಟಿದ್ದ 5 ಲಕ್ಷ ಹಣ ಕಳೆದುಕೊಂಡ ಕುಟುಂಬ ಕಂಗಲಾಗಿ ಒಂದು ರೀತಿಯ ಭೀತಿಯಲ್ಲಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆ(Vidyanagar police station)ಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚುವರಿ ಪೊಲೀಸ್ ಅಧೀಕ್ಷಕ, ರಾಮಗೊಂಡ ಬಸರಿಗೆ ಭೇಟಿ ಪರಿಶೀಲನೆ  ನಡೆಸಿದ್ದಾರೆ. ಕಳ್ಳ ಮನೆ ಬಳಿ ಓಡಾಡುವ ಮನೆಯೊಳಗೆ ಬರುವ ಸಿಸಿ ಟಿವಿ ದೃಶ್ಯವನ್ನು ಪೊಲೀಸರು ಸಂಗ್ರಹಿಸಿದ್ದು ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ದಾವಣಗೆರೆ ಪೊಲೀಸರಿಗೆ ಪ್ರಕರಣ ಚಾಲೆಂಜ್ ಆಗಿದ್ದು ಪ್ರಕರಣ ಬೇಧಿಸಲು ವಿಶೇಷ ತಂಡವನ್ನು ರಚಿಸಿದ್ದಾರೆ.  ಹಾಡುಹಗಲೇ ನಡೆದಿರುವ ಘಟನೆ ದಾವಣಗೆರೆ ನಾಗರಿಕರಲ್ಲಿ ತಲ್ಲಣವನ್ನುಂಟು ಮಾಡಿದ್ದು ಆದಷ್ಟು ಬೇಗ ಆರೋಪಿಗಳನ್ನು ಶೀಘ್ರ ಬಂಧಿಸಬೇಕಿದೆ.

ಈ ನಾಲ್ವರು ಐಸಿಸ್‌ ಶಂಕಿತರ ಸುಳಿವು ನೀಡಿದರೆ ತಲಾ 3 ಲಕ್ಷ ಬಹುಮಾನ: ಎನ್‌ಐಎ ಘೋಷಣೆ

Latest Videos
Follow Us:
Download App:
  • android
  • ios