ನಂಜನಗೂಡಿನಲ್ಲಿ ನಾಪತ್ತೆಯಾಗಿದ್ದ ವಿಶೇಷ ಚೇತನ ವ್ಯಕ್ತಿಯ ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ ಆಘಾತ ಕಾದಿತ್ತು. ಪತ್ನಿಯ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ, ಮಾತು ಬಾರದ, ಕಿವಿ ಕೇಳದ ಆರೋಪಿಗಳೇ ಸಂಚು ರೂಪಿಸಿ ಆತನನ್ನು ಕೊಲೆ ಮಾಡಿ ಬಾವಿಗೆ ಎಸೆದಿರುವುದು ತನಿಖೆಯಿಂದ ಬಯಲಾಗಿದೆ.

ಮೌನ ಸಂಭಾಷಣೆಯಲ್ಲಿ ಅಡಗಿತ್ತು ಮೃತ್ಯು ಸಂಚು

ಮೈಸೂರು: ಕೊಲೆ ಮಾಡುವವರು ಮಾತನಾಡಿಕೊಂಡು ಕೊಲೆ ಮಾಡುವುದು ಸಾಮಾನ್ಯವಾದ ವಿಚಾರ ಆದರೆ ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣ ಬೇಧಿಸಿದ ಪೊಲೀಸರೇ ಶಾಕ್ ಆಗಿದ್ದಾರೆ. ಹೌದು ಈ ಕೇಸ್‌ನಲ್ಲಿ ಆರೋಪಿಗಳಿಗೆ ಮಾತು ಬರಲ್ಲ ಕಿವಿಯೂ ಕೇಳಲ್ಲ ಆದರೂ ಸಹ ಓರ್ವನನ್ನು ಕೊಲೆ ಮಾಡಿ ಈಗ ಸಿಕ್ಕಿ ಹಾಕಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಪತ್ನಿಗಾಗಿ ಪತಿಯನ್ನೇ ಮುಗಿಸಿದ 'ಮೂಗ' ಘಾತಕರು

ಆಗಿದ್ದೇನು?: ಫೆ.15 ರಂದು ಮನೆಯಿಂದ ನಾಪತ್ತೆಯಾಗಿದ್ದ ಸ್ವಾಮಿ (32) ಎನ್ನುವ ವಿಶೇಷ ಚೇತನ ವ್ಯಕ್ತಿಯನ್ನು ಹುಡುಕುವ ನಿಟ್ಟಿನಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿಯ ಬೆಳವಣಿಗೆ ಬೆಳಕಿಗೆ ಬಂದಿದೆ. ಪ್ರಕರಣ ಬೆನ್ನತ್ತಿದ ಪೊಲೀಸರು ತನಿಖೆ ಆರಂಭಿಸಿ ನಾಪತ್ತೆಯಾಗಿದ್ದ ಸ್ವಾಮಿ ಉಪಯೋಗಿಸುತ್ತಿದ್ದ ದೂರವಾಣಿ ಸಂಖ್ಯೆ, ವಾಟ್ಸಾಪ್, ಸೇರಿದಂತೆ ಹಲವಾರು ಕೋನಗಳ ಮುಖಾಂತರ ತನಿಖೆ ಚುರುಕುಗೊಳಿಸಿದಾಗ ಕಾಣೆಯಾದ ವ್ಯಕ್ತಿಯ ಚಲನವಲನದ ಮೊಬೈಲ್ ನೆಟ್ವರ್ಕ್ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಭಾಗದಲ್ಲಿ ಅಂತ್ಯ ಆಗಿರುವುದು ಕಂಡು ಬಂದಿತ್ತು.

ವಾಕ್ ಮತ್ತು ಶ್ರವಣ ಸಂಸ್ಥೆಯ ನೆರವಿನಿಂದ ಹಂತಕರ ಬೇಟೆಯಾಡಿದ ಪೊಲೀಸರು!

ಸ್ವಾಮಿ ಹಾಗೂ ಆತನ ಪತ್ನಿಯೂ ಸಹ ಮಾತುಬಾರದ ಮೂಕಿಯಾಗಿದ್ದು ಆಕೆಗೆ ಗಂಡನ ಸ್ನೇಹಿತ ಇಂದಿರಾನಗರದ ಗಂಗಾಧರ್ ಜೊತೆಯಲ್ಲಿ ವಿಡಿಯೋ ಕಾಲ್‌ನಲ್ಲಿ ಸ್ನೇಹ ಸಂಬಂಧ ಇತ್ತು ಎಂದು ಮೇಲ್ನೋಟಕ್ಕೆ ತಿಳಿದು ಬಂದಿತ್ತು. ಪೊಲೀಸರು ಈ ದಿಕ್ಕಿನಲ್ಲಿ ತನಿಖೆ ಆರಂಭಿಸಿದಾಗ ನಂಜನಗೂಡು ಮೂಲದ ಸ್ವಾಮಿಗೆ ಪಾರ್ಟಿ ಕೊಡಿಸುವುದಾಗಿ ಹನುಮಾಪುರದ ಶ್ರೀನಿವಾಸ, ಇಂದಿರಾನಗರದ ಗಂಗಾಧರ ಹಾಗೂ ದೇವರಾಜ್‌ ಎಂಬುವರು ಫೆಬ್ರವರಿ 15ರಂದು ಇಂದಿರಾನಗರಕ್ಕೆ ಆತನನ್ನು ಕರೆಸಿಕೊಂಡಿದ್ದಾರೆ. ಬಳಿಕ ಆತನಿಗೆ ಪಾರ್ಟಿ ಕೊಡಲು ಹೊಸಹಳ್ಳಿ ತೋಟದ ಬಾವಿ ಬಳಿ ಕರೆಸಿ ಅತಿಯಾದ ಮದ್ಯ ಕುಡಿಸಿ ನಂತರ ಆತನನ್ನು ಕೊಲೆ ಮಾಡಿ ಬಾವಿಗೆ ಬಿಸಾಕಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಆರೋಪಿಗಳಾದ ಇಂದಿರಾನಗರದ ಗಂಗಾಧರ ಹಾಗೂ ಹನುಮಾಪುರದ ಶ್ರೀನಿವಾಸ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದಾಗ ಕೊಲೆ ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ನಾಪತ್ತೆಯಾಗಿರುವ ದೇವರಾಜ್‌ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ 22 ದಿನದ ಹಿಂದಿನ ಶವವನ್ನು ಪೊಲೀಸರು ಹೊರ ತೆಗೆದಿದ್ದಾರೆ.

ಕೊಲೆಗಾರರಿಗೆ ಮಾತು ಬರಲ್ಲ ಕಿವಿ ಕೇಳಲ್ಲ

ಈ ಕೊಲೆಯನ್ನು ಸಾಮಾನ್ಯ ವ್ಯಕ್ತಿಗಳು ಮಾಡಿದ್ದರೆ ಅದು ಬೇರೆ ಆಯಾಮದಲ್ಲಿ ತನಿಖೆ ಸಾಗುತ್ತಿತ್ತು. ಆದರೆ ಇಲ್ಲಿ ಎದುರಾದ ಸಮಸ್ಯೆಯೇ ಸ್ವಾಮಿ ಹೆಂಡತಿ ಲತಾ (ಹೆಸರು ಬದಲಾಯಿಸಲಾಗಿದೆ) ಹಾಗೂ ಇಬ್ಬರು ಆರೋಪಿಗಳಾದ ಗಂಗಾಧರ ಹಾಗೂ ಶ್ರೀನಿವಾಸ್‌ ಅವರಿಗೆ ಮಾತು ಬರಲ್ಲ ಹಾಗೂ ಕಿವಿ ಕೇಳುವುದಿಲ್ಲ. ಆದರೂ ಸಹ ಗಂಗಾಧರ ಜೊತೆಗೆ ಮಾತು ಬಾರದ ಲತಾಗೆ ಪ್ರೇಮಾಂಕುರವಾಗಿತ್ತು. ಅವರ ಜೊತೆಗೆ ಆಕೆ ಪ್ರತಿ ದಿನ ಸಂಪರ್ಕದಲ್ಲಿದಳು ಎಂದು ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿದೆ. ಈ ಪ್ರೇಮ ಪ್ರಕರಣವೇ ಈಗ ಸ್ವಾಮಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಈ ಸಂಬಂಧ ನಂಜನಗೂಡು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ: ಬೇಸಿಗೆ ರಜೆಯಾಯ್ತು ಪೋಷಕರಿಗೆ ಸಜೆ: ಈಜಲು ಹೋಗಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು

ಈ ಪ್ರಕರಣದಲ್ಲಿ ಪೊಲೀಸರು ಮೈಸೂರಿನ ವಾಕ್ ಮತ್ತು ಶ್ರಾವಣ ಸಂಸ್ಥೆಯಿಂದ ಮಾತು ಬಾರದ ಕಿವಿ ಕೇಳದ ವ್ಯಕ್ತಿಗಳ ಸಂಭಾಷಣೆ ಬಗ್ಗೆ ಮಾಹಿತಿ ಪಡೆದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ವಾಮಿ ಹಾಗೂ ಸ್ವಾಮಿ ಪತಿ ಸವಿತಾಗೆ ಶ್ರೀನಿವಾಸ್ ಹಣಕಾಸು ಸಹಾಯ ಮಾಡುತ್ತಿದ್ದ. ಸ್ವಾಮಿಯನ್ನು ಕೊಲೆ ಮಾಡಿದ್ರೆ ಸವಿತಾ ಜೊತೆ ತಾನು ಮದುವೆ ಆಗಬಹುದು ಎಂದು ಯೋಜನೆ ರೂಪಿಸಿದ ಶ್ರೀನಿವಾಸ್ ಸ್ನೇಹಿತನ ಜೊತೆ ಸೇರಿ ಈ ಕೊಲೆ ಮಾಡಿದ್ದಾನೆ. ನಾಪತ್ತೆ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಸವಿತಾ ಹಾಗೂ ಶ್ರೀನಿವಾಸ ನಡುವಿನ ವಿಡಿಯೋ ಕಾಲ್ ಸುಳಿವು ನೀಡಿತ್ತು. ಬಳಿಕ ಮೈಸೂರಿನ ವಾಕ್ ಮತ್ತು ಶ್ರಾವಣ ಸಂಸ್ಥೆಯಿಂದ ಮಾತು ಬಾರದ ಕಿವಿ ಕೇಳದ ವ್ಯಕ್ತಿಗಳ ಸಂಭಾಷಣೆ ಬಗ್ಗೆ ಮಾಹಿತಿ ಪಡೆದು ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದರು.

ಇದನ್ನೂ ಓದಿ: ಕೇರಳ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ನೀಡಿದ ಭರವಸೆಗೆ ಕರ್ನಾಟಕದಲ್ಲಿ ರೈತರು ಪರಿಸವಾದಿಗಳ ತೀವ್ರ ಆಕ್ರೋಶ