Asianet Suvarna News Asianet Suvarna News

Shivamogga: ಕರ್ಕಶ ಶಬ್ದ ಮಾಡುವ ವಾಹನಗಳ ಸೈಲೆನ್ಸರ್‌ಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ

ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ರಸ್ತೆ ಮೇಲಿಟ್ಟು ಪೊಲೀಸರು ಬುಲ್ಡೋಜರ್ ಹತ್ತಿಸಿದರು. ಇನ್ಮುಂದೆ ಈ ರೀತಿಯ ಸೈಲೆನ್ಸರ್ ಬಳಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Shivamogga police destroys modified bike silencers gvd
Author
First Published Dec 24, 2022, 7:18 AM IST

ಶಿವಮೊಗ್ಗ (ಡಿ.24): ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ರಸ್ತೆ ಮೇಲಿಟ್ಟು ಪೊಲೀಸರು ಬುಲ್ಡೋಜರ್ ಹತ್ತಿಸಿದರು. ಇನ್ಮುಂದೆ ಈ ರೀತಿಯ ಸೈಲೆನ್ಸರ್ ಬಳಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು! ಎರ್ರಾ ಬಿರ್ರಿ ಬೈಕ್ ಓಡಿಸುತ್ತಾ ಕರ್ಕಶ ಶಬ್ದ ಮಾಡುತ್ತಾ ಶೋಕಿ ಮಾಡೋ ಹುಡುಗರಿಗೆ ಬುಲ್ಡೋಜರ್ ಕಾರ್ಯಚರಣೆ ಮಾಡುವ ಮೂಲಕ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ  ಏಕಕಾಲಕ್ಕೆ ಆಪರೇಷನ್ ನಾಯೈಸ್ ಹೆಸರಿನಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಬುಲ್ಡೋಜರ್ ಕೆಳಗೆ ಸಿಕ್ಕಿ ಬ್ಯಾಡ್ ಸೈಲೆನ್ಸರ್‌ಗಳು ಅಪ್ಪಚಿ... ಪಚಡಿಯಾದವು. 

ಜಿಲ್ಲೆಯಾದ್ಯಂತ  ಒಟ್ಟು 231 Defective Silencer  ಮತ್ತು 41 Shrill Hornsಗಳನ್ನು ಬುಲ್ಡೋಜರ್ ಬಳಸಿ ನಾಶ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲೆಯಾದ್ಯಂತ ಸ್ಪೆಷಲ್ ಡ್ರೈವ್ ನಡೆಸಿ ಆಪರೇಷನ್ ಡೆಮಾಲಿಶ್ ಮಾಡಲಾಗಿದೆ. ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಖಡಕ್ ಕಾರ್ಯಾಚರಣೆ ನಡೆದಿದ್ದು, ವಶಕ್ಕೆ ಪಡೆದ ದೋಷಪೂರಿತ ಸೈಲೆನ್ಸರ್  (Defective Silencer) ಗಳನ್ನು ಮತ್ತು ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್  (Shrill Horns) ಗಳನ್ನ ಬುಲ್ಡೋಜರ್ ಅಪ್ಪಚ್ಚಿ ಮಾಡಿದೆ.

ಕರ್ನಾಟಕಕ್ಕಿಂತ 10 ಪಟ್ಟು ಬಲವಾದ ನಿರ್ಣಯ ತರುತ್ತೇವೆ: ಮಹಾರಾಷ್ಟ್ರ

ಎಲ್ಲೆಲ್ಲಿ ಎಷ್ಟೆಷ್ಟು ಪಚಡಿ ಗೊತ್ತಾ..!?
* ಶಿವಮೊಗ್ಗ ನಗರದ ಶಿವಪ್ಪ ನಾಯಕ ಸರ್ಕಲ್ ನಲ್ಲಿ 70 Defective Silencer  ಮತ್ತು 30 Shrill Horns ಪಚಡಿ
* ಭದ್ರಾವತಿಯ ಅಂಡರ್ ಬ್ರಿಡ್ಜ್ ಹತ್ತಿರ 135 Defective Silencer
* ಸಾಗರ ಟೌನ್ ಸೊರಬ ರಸ್ತೆಯ ಐತಪ್ಪ ವೃತ್ತದಲ್ಲಿ 14 Defective Silencer  ಮತ್ತು 11 Shrill Horns
* ಶಿಕಾರಿಪುರ ಟೌನ್ ಅಂಬೇಡ್ಕರ್ ವೃತ್ತದಲ್ಲಿ 12 Defective Silencer  ಗಳು

133 ಸೈಲೆನ್ಸರ್‌ ಧ್ವಂಸ: ಸಂಚಾರದ ವೇಳೆ ರಸ್ತೆಗಳಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದ ಸುಮಾರು 133 ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಪೊಲೀಸ್‌ ಉಪವಿಭಾಗ ನಗರ ​ವೃತ್ತ ಮತ್ತು ಸಂಚಾರಿ ಠಾಣೆ ಸಿಬ್ಬಂದಿ ಪತ್ತೆ ಹಚ್ಚಿ ಶುಕ್ರವಾರ ಸೈಲೆನ್ಸರ್‌ಗಳನ್ನು ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸಿದರು. ಈ ಹಿಂದೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರೂ ವಾಹನಗಳ ಮಾಲೀಕರು ಬದಲಿಸಿಕೊಂಡಿ​ರ​ಲಿಲ್ಲ. ಈ ಹಿನ್ನೆಲೆಯಲ್ಲಿ ಆ ವಾಹನಗಳನ್ನು ವಶಕ್ಕೆ ಪಡೆದು ಅವುಗಳ ಸೈಲೆನ್ಸರ್‌ಗಳನ್ನು ಬೇರ್ಪಡಿಸಿ, ನಗರದ ಬಿ.ಎಚ್‌. ರಸ್ತೆ, ಅಂಡರ್‌ ಬ್ರಿಡ್ಜ್‌, ಅಂಬೇಡ್ಕರ್‌ ವೃತ್ತದ ಬಳಿ ಸಾರ್ವಜನಿಕವಾಗಿ ಅವುಗಳನ್ನು ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸುವ ಮೂಲಕ ಅಪರಾಧ ತಡೆ ಮಾಸಚರಣೆ ನಡೆಸಿ, ಜಾಗೃತಿ ಮೂಡಿಸಲಾಯಿತು.

ಕೋವಿಡ್‌ ಎದುರಿಸಲು ಡಿ.27ರಂದು ತಾಲೀಮು: ಸಚಿವ ಸುಧಾಕರ್‌

ವಾಹನ ಕಾಯ್ದೆಗಳ ಪ್ರಕಾರ ಕಿರಿಕಿರಿ ಉಂಟು ಮಾಡುವ ಸೈಲೆನ್ಸರ್‌ಗಳನ್ನು ಬಳಸುವುದು ಕಾನೂನು ಉಲ್ಲಂಘನೆಯಾಗಿದೆ. ಈ ಸಂಬಂಧ ಜಿಲ್ಲಾ ಪೊಲೀಸ್‌ ವತಿಯಿಂದ ಜಿಲ್ಲೆಯಾದ್ಯಂತ ಅಭಿಯಾನ ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಈ ಸಂದರ್ಭ ಪೊಲೀಸ್‌ ಉಪಾಧೀಕ್ಷಕ ಜಿತೇಂದ್ರಕುಮಾರ್‌ ದಯಾಮ, ನಗರ ಪೊಲೀಸ್‌ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೊಲೀಸ್‌ ಠಾಣಾಧಿಕಾರಿ ಸುರೇಶ್‌ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.

Follow Us:
Download App:
  • android
  • ios