Asianet Suvarna News Asianet Suvarna News

ವ್ಯಕ್ತಿ ಮೇಲೆ ಶಾಸಕನ ಬಾಡಿಗಾರ್ಡ್‌ನಿಂದ ಹಲ್ಲೆ, ಪತ್ನಿ ಮಕ್ಕಳು ಚೀರಾಡಿದರೂ ಕರುಣೆ ತೋರದ ಕಟುಕ!

ಶಾಸಕನ ಬಾಡಿಗಾರ್ಡ್ ರಾಡ್‌ನಿಂದ ಕಾರಿನಲ್ಲಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ಕಾರಿನಲ್ಲಿ ಪತ್ನಿ ಮಕ್ಕಳು ಚೀರಾಡಿ ಸಹಾಯಕ್ಕಾಗಿ ಅಂಗಲಾಚಿದರೂ ಕರುಣೆ ತೋರದೆ ಭೀಕರ ದಾಳಿ ನಡೆಸಿದ ದೃಶ್ಯ ಸೆರೆಯಾಗಿದೆ.
 

Shinde group mla bodyguard attack  man with rod in mumbai road family screamed for help ckm
Author
First Published Sep 12, 2024, 7:50 PM IST | Last Updated Sep 12, 2024, 7:50 PM IST

ಮುಂಬೈ(ಸೆ.12) ರಸ್ತೆಯಲ್ಲಿ ದಾಳಿ ಪ್ರತಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ನಡು ರಸ್ತೆಯಲ್ಲೇ ಶಾಸಕನ ಬಾಡಿಗಾರ್ಡ್ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ್ದಾನೆ. ಕಾರಿನಲ್ಲಿ ಕುಟುಂಬ ಸಮೇತ ತೆರಳುತ್ತಿದ್ದ ವ್ಯಕ್ತಿ ಮೇಲೆ ಬಾಡಿಗಾರ್ಡ್ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಕಾರಿನಲ್ಲಿದ್ದ ಪತ್ನಿ, ಮಕ್ಕಳು ಚೀರಾಡುತ್ತಿದ್ದರೂ ಈತ ಮಾತ ಕರುಣೆ ತೋರದೆ ದಾಳಿ ನಡೆಸಿದ್ದಾರೆ. ಪತ್ನಿ ಹಾಗೂ ಮಕ್ಕಳು ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಬರವು ಸ್ಥಿತಿಯಲ್ಲಿ ಇರಲಿಲ್ಲ. ಈ ಘಟನೆ ಮುಂಬೈನಲ್ಲಿ ನಡೆದಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಶಿವಸೇನೆ ಬಣದ ಶಾಸಕ ಮಹೇಂದ್ರ ತೋರ್ವೆಯ ಬಾಡಿಗಾರ್ಡ್ ಶಿವಾಜಿ ಸೊನವಾಲೆ ಈ ದಾಳಿ ನಡೆಸಿದ್ದಾರೆ. ಉದ್ದವ್ ಠಾಕ್ರೆ ಶಿವಸೇನೆ ಬಣ ಈ ವಿಡಿಯೋ ಪೋಸ್ಟ್ ಮಾಡಿ ಸರ್ಕಾರವನ್ನು ಪ್ರಶ್ನಿಸಿದೆ. ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ಹಾಗೂ ಆತನ ಕುಟುಂಬದ ಮೇಲೆ ಈ ಹಲ್ಲೆ ನಡೆದಿದೆ. ನೆರುಲ್ ಬಳಿ ರಸ್ತೆಯಲ್ಲಿ ಹಾಡಹಗಲೇ ದಾಳಿ ಮಾಡಲಾಗಿದೆ. ಸುತ್ತ ಜನ ಇದ್ದರೂ ಯಾರೂ ನೆರವಿಗೆ ಬರವು ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ದಾಳಿಕೋರ ಸೊನವಾಲೆ ಕಬ್ಬಿಣದ ರಾಡ್ ಹಿಡಿದು ದಾಳಿ ಮಾಡಿದ್ದ.

ಉದ್ದವ್ ಠಾಕ್ರೆ ಬಣ ಮಹಾರಾಷ್ಟ್ರದ ಕಾನೂನು ಸುವ್ಯವಸ್ಥೆ ಪ್ರಶ್ನೆ ಮಾಡಿದ ಬೆನ್ನಲ್ಲೇ ಇತ್ತ ಸರ್ಕಾರ ಎಚ್ಚೆತ್ತುಕೊಂಡಿದೆ. ತಕ್ಷವೆ ಬಾಡಿಗಾರ್ಡ್ ಸೊನವಾಲೆ ಅರೆಸ್ಟ್ ಮಾಡಿದೆ. ಪೊಲೀಸ್ ಮೂಲಗಳ ಪ್ರಕಾರ, ದಾಳಿ ಮಾಡಿದ ಸೊನವಾಲೆ ಹಾಗೂ ಕಾರಿನಲ್ಲಿದ್ದ ವ್ಯಕ್ತಿ ಇಬ್ಬರು ಪರಿಚಯಸ್ತರೆ. ಕೆಲ ವಿಚಾರಗಳಿಗೆ ಇಬ್ಬರಿಗೂ ಮನಸ್ತಾಪವಾಗಿದೆ. ಇದಕ್ಕೆ ಪ್ರತೀಕಾರ ತೀರಿಸಲು ಸೊನವಾಲೆ ಏಕಾಏಕಿ ದಾಳಿ ಮಾಡಿದ್ದಾನೆ.

ಆನೆ ದಾಳಿಯಿಂದ ರಕ್ಷಣೆಗಾಗಿ ಮನೆಯಲ್ಲಿ ಜೊತೆಯಾಗಿ ಮಲಗಿದ್ದ 3 ಮಕ್ಕಳು ಹಾವು ಕಡಿದು ಸಾವು!

ಕಾರಿಗೆ ಅಡ್ಡ ಬಂದು ಕಾರಿನ ಮೇಲೆ, ಗಾಜಿನ ಮೇಲೆ ರಾಡಿನಿಂದ ದಾಳಿ ಮಾಡಿದ್ದಾನೆ. ಬಳಿಕ ಕಾರಿನ ಡೋರ್ ಒಪನ್ ಮಾಡಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ನಡು ರಸ್ತೆಯಲ್ಲಿನ ದಾಳಿಯಿಂದ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳು ಭಯದಿಂದ ಚೀರಾಡಿದ್ದಾರೆ. ತಂದೆಗೆ ಹೊಡೆಯಬೇಡಿ ಎಂದು ಮಕ್ಕಳು ಅತ್ತೂ ಕರೆದರೂ ಕಟುಕ ಮಾತ್ರ ಕೇಳಲೇ ಇಲ್ಲ. ನಡು ರಸ್ತೆಯಲ್ಲಿ ಕ್ರಿಕೆಟ್ ಬ್ಯಾಟಿಂಗ್ ಮಾಡುವ ಶೈಲಿಯಲ್ಲಿ ದಾಳಿ ನಡೆಸಿ ಪೋಸ್ ನೀಡಿದ್ದಾನೆ.

 

 

ಘಟನೆ ಕುರಿತು ಶಾಸಕ ಮಹೇಂದ್ರ ತೋರ್ವೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಉದ್ದವ್ ಠಾಕ್ರೆ ಬಣ ರಾಜಕೀಯಕ್ಕಾಗಿ ಈ ವಿಡಿಯೋ ಬಳಸುತ್ತಿದೆ. ಈ ಮೂಲಕ ನನ್ನ ತೇಜೋವಧೆ ಮಾಡಲು ಯತ್ನಿಸುತ್ತಿದೆ ಎಂದಿದ್ದಾರೆ. ಆದರೆ ತೋರ್ವೆ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಗಿದೆ.

12 ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ: ವೃದ್ಧೆ ಸಾವು
 

Latest Videos
Follow Us:
Download App:
  • android
  • ios