ಕೇರಳ: ಥೂ ಇವಳೆಂಥಾ ತಾಯಿ: ಅಮ್ಮನ ಪ್ರೇಮಿಗಳಿಂದ ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ: ಸಹಕರಿಸಿದ ತಾಯಿ
ಕೇರಳದ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಮಹಿಳೆಯೋರ್ವಳಿಗೆ 40 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ. ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ರಕ್ಷಣೆ ಕಾಯ್ದೆಯಡಿ ಕೇರಳದ ನ್ಯಾಯಾಲಯ ಈ ಶಿಕ್ಷೆ ವಿಧಿಸಿದ್ದು, ಈ ಪ್ರಕರಣದ ಹಿನ್ನೆಲೆ ಅರಿತರೇ ನಿಜಕ್ಕೂ ನಾಗರಿಕ ಸಮಾಜ ಗಾಬರಿಯಾಗುವುದು ಪಕ್ಕಾ.
ತಿರುವನಂತಪುರ: ಕೇರಳದ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಮಹಿಳೆಯೋರ್ವಳಿಗೆ 40 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ. ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ರಕ್ಷಣೆ ಕಾಯ್ದೆಯಡಿ ಕೇರಳದ ನ್ಯಾಯಾಲಯ ಈ ಶಿಕ್ಷೆ ವಿಧಿಸಿದ್ದು, ಈ ಪ್ರಕರಣದ ಹಿನ್ನೆಲೆ ಅರಿತರೇ ನಿಜಕ್ಕೂ ನಾಗರಿಕ ಸಮಾಜ ಗಾಬರಿಯಾಗುವುದು ಪಕ್ಕಾ.
ಈ ಪ್ರಂಪಚದಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಮಾತ್ರ ಇರಲಾರಳು ಎಂಬ ಲೋಕೋಕ್ತಿ ಇದೆ. ಯಾರ ಋಣ ತೀರಿಸಿದರೂ ತಾಯಿ ಋಣ ತೀರಿಸಲಾಗದು ಎಂಬ ಮಾತಿದೆ. ಇದಕ್ಕೆ ಕಾರಣ ಮಕ್ಕಳಿಗಾಗಿ ತಾಯಿ ಮಾಡುವ ತ್ಯಾಗ ಹಾಗೂ ಕರುಳ ಕುಡಿಯ ಮೇಲೆ ಇರುವ ಆಕೆಯ ನಿಷ್ಕಲ್ಮಶ ಪ್ರೇಮ ಆದರೆ ಕೇರಳದಲ್ಲಿ ಇದೆಲ್ಲದ್ದಕ್ಕೆ ತದ್ವಿರುದ್ಧವಾದ ಘಟನೆ 2018ರಲ್ಲಿ ನಡೆದಿತ್ತು. ತಾಯಿಯೊಬ್ಬಳು ತನ್ನ ಗೆಳೆಯರಿಂದಲೇ ತನ್ನದೇ ಅಪ್ರಾಪ್ತ ಮಕ್ಕಳಿಬ್ಬರ ಮೇಲೆ ಅತ್ಯಾಚಾರವೆಸಗಲು ಸಹಕರಿಸಿದ್ದಳು.. ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳದ ಫಸ್ಟ್ ಟ್ರ್ಯಾಕ್ ನ್ಯಾಯಾಲಯ ಈ ಕೆಟ್ಟ ತಾಯಿಗೆ 20 ಸಾವಿರ ದಂಡದ ಜೊತೆಗೆ 40 ವರ್ಷದ ಕಠಿಣ ಸಜೆಗೆ ಆದೇಶಿಸಿದೆ.
ಅಂದು ಆಗಿದ್ದೇನು?
ವರದಿಯ ಪ್ರಕಾರ ಮಾರ್ಚ್ 2018ರಿಂದ ಸೆಪ್ಟೆಂಬರ್ 2019ರ ನಡುವೆ ಈ ಘಟನೆ ನಡೆದಿತ್ತು. ಆರೋಪಿ ತಾಯಿ ತನ್ನ ಮಾನಸಿಕ ಅಸ್ವಸ್ಥ ಗಂಡನನ್ನು ತೊರೆದು ಹೋಗಿ ತನ್ನ ಗೆಳೆಯ ಶಿಶುಪಾಲನ್ ಎಂಬಾತನೊಂದಿಗೆ ವಾಸ ಮಾಡಲು ಶುರು ಮಾಡಿದ್ದಳು. ಈ ಸಮಯದಲ್ಲೇ ತಾಯಿಯ ಪ್ರೇಮಿ ಶಿಶುಪಾಲ ಮಕ್ಕಳ ಪಾಲಿಗೆ ಶಿಶುಕಾಮಿಯಾಗಿದ್ದ. ಮಹಿಳೆಯ ಮಗಳ ಮೇಲೆ ಆತ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದ. ಇದರಿಂದ ಮಗುವಿನ ಗುಪ್ತಾಂಗದಲ್ಲಿ ಗಂಭೀರ ಗಾಯಗಳಾಗಿದ್ದರು. ಆತನಿದ್ದಲ್ಲಿಗೆ ಈ ಕಿರಾತಕಿ ತಾಯಿ ಆಗಾಗ ತನ್ನ ಮಗಳನ್ನು ಕರೆದೊಯ್ಯುತ್ತಿದ್ದಳು. ಅಲ್ಲಿ ಆ ಮಗುವಿನ ಮೇಲೆ ಈ ಕಾಮುಕ ಶಿಶುಪಾಲ ತಾಯಿ ಎದುರೇ ಹಲ್ಲೆ ಮಾಡುತ್ತಿದ್ದ.
ಇದೇ ಸಮಯದಲ್ಲಿ ಅಲ್ಲಿಗೆ ಬಂದಿದ್ದ, ಆ ಮಗುವಿನ 11 ವರ್ಷದ ಹಿರಿಯ ಸಹೋದರಿಗೆ ಈ ವಿಚಾರವನ್ನು ಮಗು ತಿಳಿಸಿತ್ತು. ಆದರೆ ಈ ಪಾಪಿಗಳು ಆ 11 ವರ್ಷದ ಬಾಲಕಿ ಮೇಲೆ ಕೂಡ ದೌರ್ಜನ್ಯವೆಸಗಿದ್ದರು. ಅಲ್ಲದೇ ಈ ವಿಚಾರವನ್ನು ಯಾರಿಗಾದರು ಹೇಳಿದರೆ ಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು. ಹೀಗಾಗಿ ಮಕ್ಕಳಿಬ್ಬರು ಈ ವಿಚಾರವನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ, ಇದಾದ ಸ್ವಲ್ಪ ದಿನದಲ್ಲಿ ಈ 11 ವರ್ಷದ ಹಿರಿಯ ಸಹೋದರಿ ತನ್ನ ಪುಟಾಣಿ ತಂಗಿಯನ್ನು ಕರೆದುಕೊಂಡು ಆ ಮನೆಯಿಂದ ತಪ್ಪಿಸಿಕೊಂಡು ಬಂದು ಅಜ್ಜಿ ಮನೆ ಸೇರಿದ್ದಳು. ಅಲ್ಲಿ ಅಜ್ಜಿಗೆ ವಿಚಾರ ತಿಳಿದು ಆ ಅಜ್ಜಿ ಆ ಮಕ್ಕಳನ್ನು ಮಕ್ಕಳ ರಕ್ಷಣಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಳು.
ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಮಕ್ಕಳು ಈ ಭಯಾನಕ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ತಾಯಿಗೆ 40 ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಲಾಗಿದೆ ಮಕ್ಕಳಿಬ್ಬರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ. ಮಹಿಳೆ ಹಾಗೂ ಆಕೆಯ ಗೆಳೆಯ ಈ ಮಕ್ಕಳಿಬ್ಬರ ಮೇಲೆ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾರೆ. ಈ ಮಹಿಳೆಯ ನಿಜವಾದ ಗಂಡ ಮಾನಸಿಕ ಅಸ್ವಸ್ಥನಾಗಿದ್ದಾನೆ. ಇದೇ ಕಾರಣಕ್ಕೆ ಆಕೆ ಆತನನ್ನು ತೊರೆದು ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಗೆಳೆಯನ ಬಳಿ ಬಂದು ಜೀವನ ಮಾಡುತ್ತಿದ್ದಳು. ಈಕೆಗೆ ಇಬ್ಬರು ಪ್ರೇಮಿಗಳಿದ್ದರು.
ಮನ್ಸೂರ್ ಥರದವರು ಮನುಕುಲಕ್ಕೇ ಕೆಟ್ಟ ಹೆಸರು : ನಟಿ ತ್ರಿಶಾ ಕೆಂಡಾಮಂಡಲ
ಮೊದಲನೇ ಪ್ರೇಮಿ ಶಿಶುಪಾಲ ಒಂದನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕ್ರೌರ್ಯ ಮೆರೆದಿದ್ದ. ಈ ವಿಚಾರವನ್ನು ಮಗು ತಾಯಿಗೆ ಹೇಳಿದರೂ ಆಕೆ ಅದಕ್ಕೆ ವಿರೋಧ ವ್ಯಕ್ತಪಡಿಸದೇ ಮತ್ತೊಬ್ಬ ಗೆಳೆಯನಿಗೂ ತನ್ನ ಮಗುವಿನ ಮೇಲೆ ಅತ್ಯಾಚಾರವೆಸಗಲು ಸಹಕರಿಸಿದ್ದಳು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಮೊದಲ ಆರೋಪಿ ಶಿಶುಪಾಲನ್ ಆತ್ಮಹತ್ಯೆ ಮಾಡಿಕೊಂಡಿದ್ದ ಹೀಗಾಗಿ ಈಕೆಯ ವಿರುದ್ಧವೇ ವಿಚಾರಣೆ ನಡೆದಿದ್ದು, ನ್ಯಾಯಾಲಯ ತಾಯಿಗೆ ಕಠಿಣ ಶಿಕ್ಷೆ ವಿಧಿಸಿದೆ. ಈಕೆಯ ಮಕ್ಕಳು ಪ್ರಸ್ತುತ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ವಾಸ ಮಾಡುತ್ತಿದ್ದಾರೆ.
ಅಲುವಾದಲ್ಲಿ 5 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ ಕೇಸ್: ಅಪರಾಧಿಗೆ ಗಲ್ಲು ಶಿಕ್ಷೆ ನೀಡಿದ ಕೋರ್ಟ್
ಈ ತೀರ್ಪು ನೀಡಿದ ನ್ಯಾಯಾಧೀಶರು ಈ ತಾಯಿ ತಾಯ್ತನಕ್ಕೆ ದೊಡ್ಡ ಅವಮಾನ, ಈಕೆಗೆ ಯಾವುದೇ ಕ್ಷಮೆ ಇಲ್ಲ ಎಂದು ಹೇಳಿ ಆಕೆಗೆ ಕಠಿಣ ಶಿಕ್ಷೆಗೆ ಆದೇಶಿಸಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 22 ಸಾಕ್ಷಿಗಳು ಹಾಗೂ 33 ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು.