Asianet Suvarna News Asianet Suvarna News

ರೇಪ್ ಮಾಡಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಮೂರ್ನಾಲ್ಕು ಜನರಾದ್ರೂ ಬೇಕು: ಮಾಜಿ ಶಾಸಕ ಬಯ್ಯಾಪುರ ಕೀಳು ಹೇಳಿಕೆ ವೈರಲ್

 ‘ಕೇವಲ ಒಬ್ಬ ವ್ಯಕ್ತಿಯಿಂದ ಮಹಿಳೆಯ ರೇಪ್‌ ಮಾಡಲು ಸಾಧ್ಯವಿಲ್ಲ, ಮೂರ್ನಾಲ್ಕು ಜನರಾದರೂ ಬೇಕಾಗುತ್ತದೆ’ ಎಂಬುದಾಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆನ್ನಲಾಗಿದ್ದು ಈ ಬಗ್ಗೆ ಆಡಿಯೋ ವೈರಲ್‌ ಆಗಿದೆ.

Rape case Former MLA Amaregowda Biyapur who made a low-level statement at kushtagi rav
Author
First Published Nov 21, 2023, 4:58 AM IST

ಕುಷ್ಟಗಿ (ನ.21): ‘ಕೇವಲ ಒಬ್ಬ ವ್ಯಕ್ತಿಯಿಂದ ಮಹಿಳೆಯ ರೇಪ್‌ ಮಾಡಲು ಸಾಧ್ಯವಿಲ್ಲ, ಮೂರ್ನಾಲ್ಕು ಜನರಾದರೂ ಬೇಕಾಗುತ್ತದೆ’ ಎಂಬುದಾಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆನ್ನಲಾಗಿದ್ದು ಈ ಬಗ್ಗೆ ಆಡಿಯೋ ವೈರಲ್‌ ಆಗಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ ಕಳೆದ ತಿಂಗಳು ಅತ್ಯಾಚಾರದ ಘಟನೆ ನಡೆದಿತ್ತು. ಕಾಂಗ್ರೆಸ್‌ ಮುಖಂಡ, ಬಯ್ಯಾಪುರ ಅವರ ಆಪ್ತನ ಹೆಸರು ಇದರಲ್ಲಿ ಕೇಳಿ ಬಂದಿದ್ದು, ಈ ಕುರಿತು ದೂರು ದಾಖಲಾಗಿದ್ದರೂ ಪೊಲೀಸ್ ಅಧಿಕಾರಿಗಳು ಆರೋಪಿ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಉದ್ಯಮಿ ಮನೆ ದರೋಡೆಗೆ ಬಂದೋರು ಕಳ್ಳತನದ ಜತೆಗೆ ಮನೆಯೊಡತಿಯ ಸಾಮೂಹಿಕ ಅತ್ಯಾಚಾರ ಮಾಡಿದ್ರು!

ಈ ಮಧ್ಯೆ, ಸಂತ್ರಸ್ತೆಯ ಮಾವ ನ್ಯಾಯ ಒದಗಿಸಿಕೊಡುವಂತೆ ಸಹಾಯ ಕೋರಿ ಬಯ್ಯಾಪುರಗೆ ಕರೆ ಮಾಡಿದ್ದರು. ಈ ವೇಳೆ, ಬಯ್ಯಾಪುರ ಅವರು, ಸಂತ್ರಸ್ತೆಯ ಮಾವನ ಬಳಿ ಮಾತನಾಡುತ್ತಾ, ಕೇವಲ ಓರ್ವ ವ್ಯಕ್ತಿಯಿಂದ ರೇಪ್‌ ಮಾಡಲು ಸಾಧ್ಯವಿಲ್ಲ, ಮೂರ್ನಾಲ್ಕು ಜನರಾದರೂ ಬೇಕಾಗುತ್ತದೆ. ಬ್ರಹ್ಮನ ಹತ್ತಿರವೂ ಒಬ್ಬನಿಂದ ಅತ್ಯಾಚಾರ ಮಾಡಲಾಗದು. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುತ್ತದೆ. ಈಗ ರೇಪ್‌ ಕುರಿತು ವಿಚಾರ ಪ್ರಸ್ತಾಪಿಸಿದರೆ, ನಿಮ್ಮ ಗ್ರಾಮದ ಮಹಿಳೆಯರೇ ಅದನ್ನು ಪ್ರಸ್ತಾಪಿಸಿ ಮುಜುಗರ ಮಾಡುತ್ತಾರೆ ಎಂದಿದ್ದು, ಈ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Follow Us:
Download App:
  • android
  • ios