Asianet Suvarna News Asianet Suvarna News

ನಮ್ಮ ಮೆಟ್ರೋ: ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿ ಮೆಟ್ರೋ ಭದ್ರತಾ ಸಿಬ್ಬಂದಿ

ಬಿಎಂಟಿಸಿಗೆ ಹೋಲಿಸಿದರೆ ನಮ್ಮ ಮೆಟ್ರೋ ಮಹಿಳೆಯರಿಗೆ ಬಹಳ ಸುರಕ್ಷಿತ ಎಂಬ ಮಾತಿದೆ. ಹೀಗಾಗಿ ಹೆಚ್ಚಾಗಿ ಮಹಿಳೆಯರು ಮೆಟ್ರೋದಲ್ಲಿ ಪ್ರಯಾಣಿಸುವುದು. ಆದರೆ ಇತ್ತೀಚೆಗೆ ಮೆಟ್ರೋ ರೈಲಿನಲ್ಲೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದ ಭದ್ರತಾ ಸಿಬ್ಬಂದಿ ಮಹಿಳೆಯರ ಸುರಕ್ಷಿತ ಕುರಿತಂತೆ ಇನ್ನಷ್ಟು ಭದ್ರತೆ ವಹಿಸಬೇಕು ಎಂಬುದು ನಿನ್ನೆ ನಡೆದ ಲೈಂಗಿಕ ಕಿರುಕುಳ ಘಟನೆ ತೋರಿಸಿದೆ

Sexually harassing woman accused arrested in namma metro bengaluru rav
Author
First Published Dec 8, 2023, 11:17 AM IST

ಬೆಂಗಳೂರು (ಡಿ.8):  ನಮ್ಮ ಮೆಟ್ರೋ ರೈಲಿನಲ್ಲಿ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಕೆಂಪೇಗೌಡ  ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬಂಧಿಸಿ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಲೋಕೇಶ್ ಆಚಾರ್ ಬಂಧಿತ ಆರೋಪಿ. 

ಪ್ರಕರಣದ ಹಿನ್ನೆಲೆ

ನಿನ್ನೆ ಬೆಳಗ್ಗೆ(ಡಿ.7) 9.40 ಕ್ಕೆ 22 ವರ್ಷದ ಮಹಿಳೆ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ. ಮಹಿಳೆ ಪ್ರತಿನಿತ್ಯ ರಾಜಾಜಿನಗರ ದಿಂದ ಎಂಜಿ ರೋಡ್ ವರೆಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ ಪೀಕ್ ಅವರ್ ರಶ್ ಇದ್ದಿದ್ದರಿಂದ ಇದನ್ನೆ ಬಂಡವಾಳ ಮಾಡಿಕೊಂಡ ಕಾಮುಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆಯನ್ನ ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿದ್ದಾನೆ.

ಕರ್ತವ್ಯನಿರತ ಪೊಲೀಸ್ ಪೇದೆ ನಿಗೂಢವಾಗಿ ಕಣ್ಮರೆ!

ಎರಡು ಮೆಟ್ರೋ ಕಾರ್ಡ್‌ಗಳನ್ನು ಬಳಸ್ತಿರೋ ಕಾಮುಕ. ಹೆಚ್ಚಾಗಿ ರಶ್ ಇರುವ ಸಮಯ ನೋಡಿಕೊಂಡು ಮೆಟ್ರೋ ಹತ್ತುವ ಸೈಕೋ. ಬೆಳಗ್ಗೆ, ಸಾಯಂಕಾಲ ಪ್ರಯಾಣಿಕರಿಂದ ರಶ್ ಆಗಿರುವ ಮೆಟ್ರೋ ಹತ್ತುವ ಕಾಮುಕ ಮಹಿಳೆ, ಕಾಲೇಜು ಹುಡುಗಿಯರಿಗೆ ಹಿಂದೆ ಮುಂದೆ ನಿಂತು ತಳ್ಳಾಟ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ. ನಿನ್ನೆಯೂ ಹಾಗೆ ಮಾಡಿದ್ದಾನೆ. ಆದರೆ ಯುವತಿ ತಕ್ಷಣ ಕೂಗಿಕೊಂಡಿದ್ದಾಳೆ. 

ಯುವತಿ ಕೂಗಿಕೊಳ್ತಿದ್ದಂತೆ ಇದರಿಂದ ಗಾಬರಿಗೊಂಡು ಆರೋಪಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೆಂಪೆಗೌಡ ಮೆಟ್ರೋ ನಿಲ್ದಾಣದಲ್ಲಿ ಇಳಿದು ಓಡುತ್ತಿರುವಾದ ಹಿಡಿದ ಭದ್ರತಾ ಸಿಬ್ಬಂದಿ. ಆರೋಪಿ ಎಸ್ಕಲೇಟರ್ ಬಳಸಿ ವೇಗವಾಗಿ ಮುಂದೆ ಹೋದಾಗ ಮಹಿಳಾ ಪ್ರಯಾಣಿಕರು ಹಿಡಿದುಕೊಳ್ಳುವಂತೆ ಕೂಗಿದ್ದಾರೆ. ಗಲಾಟೆ ಕೇಳಿಸಿಕೊಂಡ ಭದ್ರತಾ ಅಧಿಕಾರಿ ಪುಟ್ಟಮಾದಯ್ಯ ಹಾಗೂ ದಿವಾಕರ್ ತಕ್ಷಣ ಸ್ಥಳಕ್ಕೆ ಆಗಮಿಸಿ. ಲೋಕೇಶ್ ಆಚಾರ್ ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಬೆಂಗಳೂರಲ್ಲಿ ರಾಪಿಡೋ ಹತ್ತಿದ ಯುವತಿಗೆ ಲೈಂಗಿಕ ಕಿರುಕುಳ, ವಿರೋಧಿಸಿದ್ದಕ್ಕೆ ಹೊರದಬ್ಬಿದ ಚಾಲಕ!

ಆರೋಪಿ ಹಿನ್ನೆಲೆ: 

30 ವರ್ಷ ವಯಸ್ಸಿನ ಲೋಕೇಶ್ ಆಚಾರ್ ನೆಲಮಂಗಲದ ನೇಕಾರರ ಕಾಲೋನಿ ನಿವಾಸಿಯಾಗಿದ್ದಾನೆ. ಈ ಹಿಂದೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯೋರ್ವಳ ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದ ಆರೋಪಿ. ಈ ಪ್ರಕರಣಕ್ಕೆ ಸಂಬಂಧ ಏಪ್ರಿಲ್ 2023.ರಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಆರೋಪಿ. ಇದೀಗ ಮತ್ತೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ. 

Follow Us:
Download App:
  • android
  • ios