Asianet Suvarna News Asianet Suvarna News

ಚರ್ಚ್‌ನಲ್ಲಿ ಚಾಕು ತೋರಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ವಿಲಿಯಂ ಪ್ರಕಾಶ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲು 

Sexual Harassment on Women at Church in Bengaluru grg
Author
First Published Sep 17, 2022, 8:14 AM IST

ಬೆಂಗಳೂರು(ಸೆ.17):   ಚರ್ಚ್‌ನಲ್ಲಿ ಲೈಟ್‌ ಆಫ್‌ ಮಾಡಲು ಹೋಗಿದ್ದ ಮಹಿಳೆಗೆ ಚಾಕು ತೋರಿಸಿ ದುರುಳನೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ಅಶೋಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ವಿಲಿಯಂ ಪ್ರಕಾಶ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಅಶೋಕ ನಗರದ ಶಾಂತಲಾ ನಗರದಲ್ಲಿ ಸೆ.10ರಂದು ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯ ಸಮೀಪದ ಚರ್ಚ್‌ನಲ್ಲಿ ಸಂತ್ರಸ್ತೆಯ ಪತಿ ಕೆಲಸ ಮಾಡುತ್ತಿದ್ದು, ಸೆ.10ರ ಸಂಜೆ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು.

ರೇಪ್‌ ಮಾಡಿ ಇನ್ನಷ್ಟು ಮಂದಿ ಜೊತೆ ಸೆಕ್ಸ್‌ ಮಾಡುವಂತೆ ಹಿಂಸೆ, ಯುವತಿ ಖಾಸಗಿ ಫೋಟೊ ಲೀಕ್‌

ಪತಿಯ ಸೂಚನೆ ಮೇರೆಗೆ ರಾತ್ರಿ ಸಂತ್ರಸ್ತೆ, ಚರ್ಚ್‌ ಲೈಟ್‌ ಆಫ್‌ ಮಾಡಲು ಒಬ್ಬರೇ ಹೋಗಿದ್ದಾರೆ. ಈ ವೇಳೆ ಹಿಂಬಾಲಿಸಿಕೊಂಡು ಬಂದಿರುವ ಆರೋಪಿ ವಿಲಿಯಂ, ಏಕಾಏಕಿ ಮಹಿಳೆಯನ್ನು ಒಳಗೆ ಎಳೆದು ಚಾಕು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಮಹಿಳೆ ಕೂಗಲು ಮುಂದಾದಾಗ, ಕೊಲೆ ಬೆದರಿಕೆ ಹಾಕಿದ್ದಾನೆ. ಬಳಿಕ ಮಹಿಳೆ ಆತನನ್ನು ತಳ್ಳಿ ಓಡಿ ಬಂದಿದ್ದಾರೆ. ಪತ್ನಿಯ ಚೀರಾಟ ಕೇಳಿ ಪತಿ ಮನೆಯಿಂದ ಹೊರ ಬಂದಿದ್ದು, ವಿಲಿಯಂನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
 

Follow Us:
Download App:
  • android
  • ios