ತಲಪಾಡಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿ ಮುವಾದ್ ಬಂಧನ
ಅಪ್ರಾಪ್ತೆ ಮೇಲೆ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ಸ್ಟ್ಯಾಂಡ್ ಬಳಿ ಇಂದು ಸಂಜೆ ವೇಳೆ ನಡೆದಿದ್ದು, ಆರೋಪಿ ಮುಡಿಪು ದರ್ಖಾಸು ಸೈಟ್ ನಿವಾಸಿ ಮುವಾದ್ (35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಉಳ್ಳಾಲ (ಆ.1) : ಅಪ್ರಾಪ್ತೆ ಮೇಲೆ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ಸ್ಟ್ಯಾಂಡ್ ಬಳಿ ಇಂದು ಸಂಜೆ ವೇಳೆ ನಡೆದಿದ್ದು, ಆರೋಪಿ ಮುಡಿಪು ದರ್ಖಾಸು ಸೈಟ್ ನಿವಾಸಿ ಮುವಾದ್ (35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಮುವಾದ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಗಾಂಜಾ ಸಹಿತ ಇತರೆ ಎರಡು ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇಂದು ಸಂಜೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಶಾಲೆಯಿಂದ ವಾಪಸ್ಸಾಗಿ ತಲಪಾಡಿ ಬಸ್ ನಿಲ್ದಾಣದಲ್ಲಿ ಬಸ್ಸಿಳಿದು ಸಹೋದರಿಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತ ನಿಂತಿದ್ದಳು. ಇದೇ ವೇಳೆ ಅದೇ ನಿಲ್ದಾಣದಲ್ಲಿ ನಿಂತಿದ್ದ ಮುವಾದ್ ವಿದ್ಯಾರ್ಥಿನಿ ಜತೆಗೆ ಅನುಚಿತವಾಗಿ ವರ್ತಿಸಿ, ಮನೆಗೆ ಬಿಡುವುದಾಗಿ ಹೇಳಿ ಕೈಹಿಡಿದು ಎಳೆದಿದ್ದಾನೆ. ತಕ್ಷಣ ವಿದ್ಯಾರ್ಥಿನಿ ಬೊಬ್ಬಿಡಲು ಆರಂಭಿಸಿದಾಗ ಸ್ಥಳೀಯ ರಿಕ್ಷಾ ಚಾಲಕರು ಮುವಾದ್‌ನನ್ನು ಹಿಡಿದು, ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
Mangaluru crimes: ಪ್ರೀತಿಸುವುದಾಗಿ ನಂಬಿಸಿ ಕೇರಳ ಮೂಲದ ಯುವಕರಿಂದ ಅಪ್ರಾಪ್ತೆಯ ಅತ್ಯಾಚಾರ
ಬುದ್ದಿಮಾಂದ್ಯಳ ಮೇಲೆ ಅತ್ಯಾಚಾರ; ಆರೋಪಿ ಬಂಧನ
ನಂಜನಗೂಡು: ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ಬುದ್ದಿಮಾಂದ್ಯಳ ಮೇಲೆ ಕಿಡಿಗೇಡಿ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಜರುಗಿದ್ದು, ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆ ಇಲ್ಲದ ಬುದ್ದಿಮಾಂದ್ಯಳು ತಾಯಿಯ ಆಶ್ರಯದಲ್ಲಿದ್ದಾಳೆ. ತಾಯಿಯು ಕೂಲಿ ಕೆಲಸಕ್ಕೆ ತೆರಳಿದ ವೇಳೆ ಮನೆಗೆ ನುಗ್ಗಿದ ಗ್ರಾಮದ ಗಿರೀಶ್ ಎಂಬ ಯುವಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ, ಆತನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿ ನ್ಯಾಯಕ್ಕೆ ಹಾಜರುಪಡಿಸಿದ್ದಾರೆ. ನಂತರ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಬುದ್ದಿ ಮಾಂದ್ಯಳ ತಾಯಿ ದೂರು ನೀಡಿದ್ದಾರೆ.
ಅಪ್ತಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಪಾದ್ರಿ ಬಂಧನ-ಸಂಘಟನೆಗಳು ಆಕ್ರೋಶ
ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕವಲಂದೆ ಪೊಲೀಸ್ ಠಾಣೆಯ ಎಸ್‌ಐ ಕೃಷ್ಣಕಾಂತ್ ಕೋಳಿ ಮುಂದಿನ ತನಿಖೆ ಕೈಗೊಂಡಿದ್ದಾರೆ.