ಹುಬ್ಬಳ್ಳಿ(ಜೂ.13): ಅತ್ಯಂತ ದೊಡ್ಡ ಪರಂಪರೆ ಹೊಂದಿದ ಮಠದ ಸ್ವಾಮಿ ಮಹಿಳೆಯೊಬ್ಬಳ ಜೊತೆ ರಾಸಲೀಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಠರ ಭಕ್ತರ ಆಕ್ರೋಶ ಭುಗಿಲೆದ್ದಿದೆ.

ಹೌದು ನವಲಗುಂದ ತಾಲೂಕು‌ ಮಣಕವಾಡ ಗ್ರಾಮದ‌ ಮಠವೊಂದರ ರಾಸಲೀಲೆ ಬಯಲಿಗೆ ಬಂದಿದೆ. ಮಠದ ಶ್ರೀ ಸಿದ್ದರಾಮ ದೇವರ ನಿರಂಜನ ಸ್ವಾಮಿ ಗೋವಾದಲ್ಲಿ ಮಹಿಳೆಯೊಬ್ಬಳೊಂದಿಗೆ ನಡೆಸಿದ ಸೆಕ್ಸ್ ವಿಡಿಯೋ ಲೀಕ್ ಆಗಿದೆ. 

ಹೈ ಪ್ರೊಫೈಲ್ ಸೆಕ್ಸ್‌ ರಾಕೆಟ್‌ನಿಂದ ನಟಿ ಪಾರು..!

ಇನ್ನು ಕಳೆದ ಐದು ವರ್ಷದ ಹಿಂದೆಯಷ್ಟೇ ಈ ಸ್ವಾಮೀಜಿ ಮಠಕ್ಕೆ ಬಂದಿದ್ದು, ಕಳೆದ ಒಂದು ವರ್ಷದ ಹಿಂದಷ್ಟೇ ಅಂದರೆ 2019ರ ಜನವರಿ 18ರಂದು ಶ್ರೀ ಸಿದ್ದರಾಮ ದೇವರ ನಿರಂಜನ ಸ್ವಾಮಿ ಪಟ್ಟಾಧಿಕಾರ ನಡೆದಿತ್ತೆಂಬುವುದು ಉಲ್ಲೇಖನೀಯ. 

ಎಸ್ಸೆಸ್ಸೆಲ್ಸಿವರೆಗೆ ಕಲಿತಿರುವ ಈ ಸ್ವಾಮೀಜಿ ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. ಕೆಲ ವರ್ಷ ಮಹಾರಾಷ್ಟ್ರದಲ್ಲಿ ನೆಲೆಸಿ ಅಧ್ಯಯನ ನಡೆಸಿದ್ದರಂತೆ. ಪ್ರವಚನ ಪ್ರವೀಣ ಎಂದು ಕೂಡ ಇವರನ್ನು ಭಕ್ತರು ಕರೆಯುತ್ತಾರೆ. ರಾಸಲೀಲೆ ಬಯಲಿಗೆ ಬರುತ್ತಿದ್ದಂತೆ, ಭಕ್ತರ ಸಮೂಹ ಮಠದ ಆವರಣದಲ್ಲಿ ‌ಜಮಾವಣೆಯಾಗಿದೆ. ಸ್ವಾಮೀಜಿ ತಮ್ಮ ಕೊಠಡಿಯಲ್ಲಿ ಉಳಿದು ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ನಡುವೆ ಮಠಕ್ಕೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸೆಕ್ಸ್‌ ವಿಡಿಯೋ 30 ಕೋಟಿಗೆ ಸೇಲ್‌ ಮಾಡಲು ಯತ್ನ

ಅತ್ಯಂತ ಪುರಾತನ ಮಠವಾಗಿರುವ ಮಣಕವಾಡ ಮಠ, ಅನ್ನದಾಸೋಹಕ್ಕೆ ಪ್ರಸಿದ್ಧ. ನಿರಂತರ ಅನ್ನದಾಸೋಹ ಇಲ್ಲಿನ ವಿಶೇಷ.

ಇನ್ನು ಸುವರ್ಣನ್ಯೂಸ್.ಕಾಮ್ ಬಳಿ ವೀಡಿಯೋ ಲಭ್ಯವಿದ್ದು, ಸಭ್ಯತೆಯ ದೃಷ್ಟಿಯಿಂದ ಪೋಸ್ಟ್ ಮಾಡುತ್ತಿಲ್ಲ.