Asianet Suvarna News

ಹೈ ಪ್ರೊಫೈಲ್ ಸೆಕ್ಸ್‌ ರಾಕೆಟ್‌ನಿಂದ ನಟಿ ಪಾರು..!

ಹೈ ಪ್ರೊಫೈಲ್‌ ಸೆಕ್ಸ್ ರಾಕೆಟ್‌ನಿಂದ ಸಾವ್‌ಧಾನ್‌ ಇಂಡಿಯಾ ನಟಿ ಸೇರಿದಂತೆ ಮೂವರನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ. ಅಂಧೇರಿ ಉಪನಗರದ ತ್ರೀ ಸ್ಟಾರ್‌ ಹೋಟೆಲ್‌ ಒಂದರಲ್ಲಿ ನಡೆಯುತ್ತಿದ್ದ ದಂಧೆಯನ್ನು ಮುಂಬೈ ಪೊಲೀಸರು ಬೇಧಿಸಿದ್ದು, ದಂಧೆ ನಡೆಸುತ್ತಿದ್ದ ಪ್ರಿಯಾ ಶರ್ಮಾ ಎಂಬಾಕೆಯನ್ನು ಬಂಧಿಸಿದ್ದಾರೆ.

three rescued from high profile sex racket including Savdhaan actress in mumbai
Author
Bangalore, First Published Jan 17, 2020, 2:26 PM IST
  • Facebook
  • Twitter
  • Whatsapp

ಮುಂಬೈ(ಜ.17): ಹೈ ಪ್ರೊಫೈಲ್‌ ಸೆಕ್ಸ್ ರಾಕೆಟ್‌ನಿಂದ ಸಾವ್‌ಧಾನ್‌ ಇಂಡಿಯಾ ನಟಿ ಸೇರಿದಂತೆ ಮೂವರನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ. ಅಂಧೇರಿ ಉಪನಗರದ ತ್ರೀ ಸ್ಟಾರ್‌ ಹೋಟೆಲ್‌ ಒಂದರಲ್ಲಿ ನಡೆಯುತ್ತಿದ್ದ ದಂಧೆಯನ್ನು ಮುಂಬೈ ಪೊಲೀಸರು ಬೇಧಿಸಿದ್ದು, ದಂಧೆ ನಡೆಸುತ್ತಿದ್ದ ಪ್ರಿಯಾ ಶರ್ಮಾ ಎಂಬಾಕೆಯನ್ನು ಬಂಧಿಸಿದ್ದಾರೆ.

ಸಿಟಿ ಪೊಲೀಸ್‌ ವಿಭಾಗದ ಸೋಷಿಯಲ್ ಸರ್ವೀಸ್‌ ಬ್ರಾಂಚ್‌ ಗುರುವಾರ ಅಂಧೇರಿಯಲ್ಲಿರುವ ತ್ರೀ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಹೈ ಪ್ರೊಫೈಲ್ ಸೆಕ್ಸ್‌ ರಾಕೆಟ್‌ ಜಾಲವನ್ನು ಮಂಬೈ ಪೊಲೀಸರು ಬೇಧಿಸಿದ್ದಾರೆ. ದಂಧೆ ನಡೆಸುತ್ತಿದ್ದ 29 ವರ್ಷದ ಮಹಿಳೆ ಪ್ರಿಯಾ ಎಂಬಾಕೆಯನ್ನು ಅರೆಸ್ಟ್ ಮಾಡಲಾಗಿದೆ. ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದ ಒಬ್ಬ ಅಪ್ರಾಪ್ತೆ ಸೇರಿದಂತೆ ಮೂವರು ಮಹಿಳಾ ನಟಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

ತೇಜಸ್ವಿ- ಸೂಲಿಬೆಲೆ ಹತ್ಯೆಗೆ ಸ್ಕೆಚ್: ಗೋ ಮಧುಸೂದನ್ ಪ್ರತಿಕ್ರಿಯೆಯಿದು!

ರೈಡ್‌ ನಡೆಸಿದ ಬ್ರಾಂಚ್‌ನ ಹಿರಿಯ ಪೊಲೀಸ್ ಅಧಿಕಾರಿ ಸಂದೇಶ್ ರೆವಲೆ ಘಟನೆ ಬಗ್ಗೆ ಮಾಹಿತಿ ನೀಡಿ, ದಾಳಿ ನಡೆಸಿದ ಸಂದರ್ಭ ಅಪ್ರಾಪ್ತೆ ಸೇರಿ ಮೂವರು ನಟಿಯರನ್ನು ವ್ಯಭಿಚಾರಕ್ಕೆ ಬಳಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಅವರನ್ನು ರಕ್ಷಿಸಿ ಸೆಕ್ಸ್‌ ರಾಕೆಟ್‌ ನಡೆಸುತ್ತಿದ್ದ ಮಹಿಳೆ ಪ್ರಿಯಾ ಶರ್ಮಾಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಶರ್ಮಾ ಅವರು ಕಂಡೀವಲಿಯಲ್ಲಿ ಟೂರ್ಸ್ & ಟ್ರಾವೆಲ್ಸ್‌ ನಡೆಸುತ್ತಿದ್ದರು. ಹಾಗೆಯೇ ಅನೈತಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. ಸೆಕ್ಸ್‌ ರಾಕೆಟ್‌ನಿಂದ ರಕ್ಷಿಸಲಾದ ಒಬ್ಬ ಯುವತಿ ಸಾವ್‌ಧಾನ್‌ ಇಂಡಿಯಾ ಕ್ರೈಂ ಶೋನಲ್ಲಿ ನಟಿಸಿದ್ದರು. ಇನ್ನೊಬ್ಬಾಕೆ ಮರಾಠಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅಪ್ರಾಪ್ತೆ ವೆಬ್‌ ಸಿರೀಸ್‌ಗಳಲ್ಲಿ ನಟಿಸುತ್ತಿದ್ದರು.

ಸಿಎಎ ಪರ ಪ್ರತಿಭಟನೆ: ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಸ್ಕೆಚ್!
ಜನವರಿ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios