ಸಿಡಿ ಪ್ರಕರಣ/ ಕಾಂಗ್ರೆಸ್ ವರ್ಸಸ್ ಬಿಜೆಪಿ/ ಕಾಂಗ್ರೆಸ್ ಸರಣಿ ಟ್ವೀಟ್ ಗೆ ಬಿಜೆಪಿ ಠಕ್ಕರ್/ ಈ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತ ಎಂದು ಆರೋಪ/ ವಿಡಿಯೋವನ್ನು ಶೇರ್ ಮಾಡಿದ ಬಿಜೆಪಿ

ಬೆಂಗಳೂರು(ಮಾ. 30) ಸಿಡಿ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವೇದಿಕೆಯಾಗಿದ್ದು ಹಳೆ ಕತೆ. ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಆರೋಪಿ ಸ್ಥಾನದಲ್ಲಿರುವ ರಮೇಶ್ ಜಾರಕಿಹೊಳಿ ಅವರನ್ನು ಯಾವಾಗ ಬಂಧನ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿತ್ತು.

ಇದಕ್ಕೆ ಠಕ್ಕರ್ ಕೊಟ್ಟಿರುವ ಬಿಜೆಪಿ ವಿಡಿಯೋ ಸಮೇತ ಕೆಲ ವಿಚಾರಗಳನ್ನು ಹೇಳಿ ಕಾಂಗ್ರೆಸ್ ಗೆ ಮರುಪ್ರಶ್ನೆ ಮಾಡಿದೆ ಸಿಡಿ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತ ಎಂದು ಸಾಬೀತಾಗುತ್ತಿದೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರು ಯುವತಿ ಹೇಳಿಕೆ ದಾಖಲು ಮಾಡುವ ಸಂದರ್ಭದಲ್ಲಿ ಹಾಜರಿದ್ದು ಸಹಾಯ ಮಾಡುತ್ತಾರೆ ಎಂದರೆ ಏನರ್ಥ? ಕೆಪಿಸಿಸಿ ಕಚೇರಿಯಿಂದಲೇ ಈ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ನಿಜವೇ? ಎಂದು ಪ್ರಶ್ನೆ ಮಾಡಿದೆ.

ಬೆಚ್ಚಿ ಬೀಳಿಸಿದ ಯುವತಿಯ ಟ್ರಾವೆಲ್ ಹಿಸ್ಟರಿ; ಜತೆಗಿದ್ದವರು ಎಲ್ಲಿ ಹೋದ್ರು? 

ಇನ್ನೊಂದು ಕಡೆ ಗಣಿತದ ವರ್ಗಮೂಲ ಸೂತ್ರವನ್ನು ಹಾಕಿದೆ. √ ಮಹಾನಾಯಕ √ ಮಹಾನಾಯಕಿ √ ಮಾಸ್ಟರ್ ಮೈಂಡ್ √ ಕೆಪಿಸಿಸಿ ಕಾನೂನು ಘಟಕದ ಸದಸ್ಯ ಜಾಯಿನ್ ದ ಡಾಟ್ಸ್... ಎಂದು ಹೇಳಿದ್ದು ಡಿಕೆಶಿ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದೆ. 

Scroll to load tweet…
Scroll to load tweet…