Big Breaking: ಉತ್ತರಪ್ರದೇಶ ಪ್ರವಾಸಕ್ಕೆ ತೆರಳಿದ್ದ ಬೀದರ್‌ನ 7 ಮಂದಿ ದುರ್ಮರಣ

Family of 7 killed in road accident: ಪ್ರವಾಸಕ್ಕೆಂದು ಉತ್ತರಪ್ರದೇಶಕ್ಕೆ ತೆರಳಿದ್ದ ರಾಜ್ಯದ ಬೀದರ್‌ನ ಒಂದೇ ಕುಟುಂಬದ ಏಳು ಮಂದಿ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಒಂದೇ ಕುಟುಂಬದ ಒಟ್ಟು 16 ಮಂದಿ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.

seven of a family from bidar died in fatal accident in uttar pradesh

ಬೀದರ್: ಉತ್ತರ ಪ್ರದೇಶ ಪ್ರವಾಸಕ್ಕೆ ತೆರಳಿದ್ದ ಬೀದರ್‌ನ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ. ಭೀಕರ ಅಪಘಾತದಲ್ಲಿ ರಾಜ್ಯದ 7 ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಅದೇ ಕುಟುಂಬದ ಇನ್ನೂ 9 ಜನ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಬೀದರ್‌ ಮೂಲದ ಒಂದೇ ಕುಟುಂಬದ 16 ಜನ ಉತ್ತರಪ್ರದೇಶ ಪ್ರವಾಸಕ್ಕೆಂದು ಟಿಟಿ ಮಾಡಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಲಾರಿ ಮತ್ತು ಟೂರ್ ಟ್ರಾವೆಲ್ಸ್ ಮಧ್ಯ ಭೀಕರ ಅಪಘಾತವಾಗಿದೆ. ಸ್ಥಳದಲ್ಲೇ ಏಳು ಮಂದಿ ಮೃತಪಟ್ಟಿದ್ದಾರೆ. 

ಉತ್ತರ ಪ್ರದೇಶದ ಮೋದಿಪುರದಲ್ಲಿ ಈ ಭೀಕರ ಅಪಘಾತ ಇಂದು ಬೆಳಗ್ಗೆ ನಡೆದಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ರಾಮಭೂಮಿ ಅಯೋಧ್ಯೆ ಭೇಟಿಗೆಂದು ಇಡೀ ಕುಟುಂಬ ಹೋಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಉತ್ತರಪ್ರದೇಶದ ಖೇರಿ - ನಾಗಪುರ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಲಾರಿ ಮತ್ತು ಟಿಟಿ ನಡುವೆ ಅಪಘಾತ ಸಂಭವಿಸಿದೆ. ಘಟನೆ ನಡೆದ ಸ್ಥಳ ಲಖಿಮ್ಪುರ್- ಮೋತಿಪುರ್ ಬಳಿ ಬರುವ ರಾಷ್ಟ್ರೀಯ ಹೆದ್ದಾರಿಯ ಸನಿಹವಿದೆ. ಬೆಳಿಗ್ಗೆ ಸುಮಾರು ಒಂಭತ್ತು ಗಂಟೆಗೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಶಿವಕುಮಾರ್ (28), ಜಗದಂಬಾ (52), ಮನ್ಮಥ (36), ಅನಿಲ್ (30), ಸಂತೋಷ, ಶಶಿಕಲಾ (38), ಸರಸ್ವತಿ (42) ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಚಿಂತಾಚನಕವಾಗಿದ್ದು, ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರು ಸಹೋದರಿಯರು ತಮ್ಮಿಬ್ಬರ ಮಕ್ಕಳೊಂದಿಗೆ ಬಾವಿಗೆ ಬಿದ್ದು ಆತ್ಮಹತ್ಯೆ!

ಸಿಎಂ ಯೋಗಿ ಆದಿತ್ಯನಾಥ್‌ ಸಂತಾಪ:

ಘಟನೆ ಸಂಬಂಧ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. "ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಅಗಲಿದ ಆತ್ಮಗಳ ಕುಟುಂಬಕ್ಕೆ ನಾನು ಶಾಂತಿಯನ್ನು ಬಯಸುತ್ತೇನೆ," ಎಂದು ಖಾಸಗಿ ಮಾಧ್ಯಮದ ಮೂಲಕ ಸಿಎಂ ಆದಿತ್ಯನಾಥ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ಹಾವೇರಿ ಮಹಿಳೆ ಮೇಲಿನ ಶೂಟೌಟ್‌ ಕೇಸ್‌: ಇಬ್ಬರ ಬಂಧನ

ತೀರ್ಥ ಯಾತ್ರೆಗೆಂದು ಹೊರಟ ಕುಟುಂಬ ತೀರ್ಥಪ್ರದೇಶಗಳಿಗೆ ಭೇಟಿ ಕೊಡುವ ಮುನ್ನವೇ ಅಪಘಾತದಲ್ಲಿ ಮೃತಪಟ್ಟಿರುವುದು ಬೇಸರದ ಸಂಗತಿಯಾದರೆ, ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಲಾರಿ ಮತ್ತು ಟಿಟಿ ಎರಡೂ ನೇರಾನೇರ ಗುದ್ದಿಕೊಂಡ ಕಾರಣ, ಸ್ಥಳದಲ್ಲೇ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. 

Latest Videos
Follow Us:
Download App:
  • android
  • ios