ಕಳ್ಳತನ ಮಾಡಿ ಎಸ್ಕೇಪ್ ಆದವ ಗಿರವಿ ಅಂಗಡಿಯಲ್ಲಿ ಸಿಕ್ಕಿ ಬಿದ್ದ, ಆರೋಪಿಗಾಗಿ 150 ಸಿಸಿಟಿವಿ ಚೆಕ್!

ಮನೆ ಕಳ್ಳತನ ಮಾಡಿ ಎಸ್ಕೇಪ್ ಆದವನು ಗಿರವಿ ಅಂಗಡಿಯಲ್ಲಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮನೆಯಲ್ಲಿದ್ದ 220 ಗ್ರಾಂ ಚಿನ್ನಾಭರಣದಲ್ಲಿ ಈತ ಗಡಿಬಿಡಿಯಲ್ಲಿ ಕದ್ದಿದ್ದು 70 ಗ್ರಾಂ ಚಿನ್ನಾಭರಣ.

seshadripuram police arrested Gold theft in bengaluru gow

ಬೆಂಗಳೂರು (ಫೆ.26): ಮನೆ ಕಳ್ಳತನ ಮಾಡಿ ಎಸ್ಕೇಪ್ ಆದವನು ಗಿರವಿ ಅಂಗಡಿಯಲ್ಲಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮನೆಯಲ್ಲಿದ್ದ 220 ಗ್ರಾಂ ಚಿನ್ನಾಭರಣದಲ್ಲಿ ಈತ ಗಡಿಬಿಡಿಯಲ್ಲಿ ಕದ್ದಿದ್ದು 70 ಗ್ರಾಂ ಚಿನ್ನಾಭರಣ. ಚಿನ್ನ ಇದ್ದ ಕಬೋರ್ಡ್ ಗೆ ಕೈ ಹಾಕಿದವನಿಗೆ ಮೊದಲಿಗೆ ಸಿಕ್ಕ 70 ಗ್ರಾಂ ಚಿನ್ನಾಭರಣ ಸಮೇತ ಪರಾರಿಯಾಗಿದ್ದ. ಅಲ್ಲೆ ಪಕ್ಕದ ಬ್ಯಾಗ್ ನಲ್ಲಿ 150 ಗ್ರಾಂ ಚಿನ್ನ ಮತ್ತು 1 ಲಕ್ಷ ಹಣ ಇತ್ತೆಂಬುದು ಆರೋಪಿಗೆ ಗಮನಕ್ಕೆ ಬಂದಿರಲಿಲ್ಲ. ಆರೋಪಿ ಪ್ರಶಾಂತ್ ಯಾನೆ ಪಚ್ಚಿಯನ್ನ ಶೇಷಾದ್ರಿ ಪುರಂ ಪೊಲೀಸರು ಬಂಧಿಸಿದ್ದಾರೆ. 

ಮನೆ ಕಳ್ಳತನ ಮಾಡಿದ ಆರೋಪಿ ಪ್ರಶಾಂತ ಪೊಲೀಸರ ದಿಕ್ಕು ತಪ್ಪಿಸಲು ಗಲ್ಲಿ ಗಲ್ಲಿಯಲ್ಲಿ ಸದಾಶಿವನಗರದವರೆಗೂ  ನಡೆದುಕೊಂಡು ಹೋಗಿದ್ದ ಕೊನೆಗೆ ಆಟೋದಲ್ಲಿ ಹೋಗಿ ಮತ್ತಿಕೆರೆ ಸಮೀಪದ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನ ಅಡವಿಟ್ಟಿದ್ದ. ಪ್ರಕರಣ ನಡೆದ ಬಳಿಕ ಆರೋಪಿ ಪ್ರಶಾಂತ್‌ ಗಾಗಿ ಬರೋಬ್ಬರಿ 150 ಸಿಸಿಟಿವಿ  ಪೊಲೀಸರು ಹುಡುಕಾಡಿದ್ದರು.

ಕೊನೆಗೆ ಜ್ಯೂವೆಲ್ಲರಿ ಶಾಪ್ ನಲ್ಲಿ ಚಿನ್ನ ಅಡವಿಟ್ಟಾಗ ಪ್ರಶಾಂತ್‌ ಕೊಟ್ಟ ಆಧಾರ್ ಕಾರ್ಡ್ ನಿಂದ ಆರೋಪಿಯ ಸುಳಿವು ಸಿಕ್ಕಿತ್ತು. ಈ ಹಿಂದೆ ಯಶವಂತಪುರ ಸೇರಿ ಹಲವು ಠಾಣೆಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿದ್ದ ಬಗ್ಗೆ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯಿಂದ 70 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಶೇಷಾದ್ರಿ ಪುರಂ ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಮನೆಗೆ ನುಗ್ಗಿ ಗನ್‌ ತೋರಿಸಿ ದರೋಡೆ
ಯಾದಗಿರಿ: ಕಳ್ಳರ ಗುಂಪೊಂದು ಮನೆಗೆ ನುಗ್ಗಿ ಕುಟುಂಬಸ್ಥರಿಗೆ ಗನ್‌ ತೋರಿಸಿ ಬೆಳ್ಳಿ , ಬಂಗಾರ, ನಗದು ದೋಚಿರುವ ಘಟನೆ ಶುಕ್ರವಾರ ರಾತ್ರಿ ಸುಮಾರು 9.30 ಗಂಟೆಗೆ ರಾಜೀವ್‌ ಗಾಂಧಿ ನಗರದಲ್ಲಿ ಘಟನೆ ನಡೆದಿದೆ.

ನಗರದ ಗಾಂಧಿನಗರದ ದೀಪಕ್‌ ಕುಮಾರ್‌ ಎಂಬುವವರ ಮನೆಯಲ್ಲಿ ಕಳ್ಳತನ ಜರುಗಿದ್ದು, ಮನೆಯಲ್ಲಿನ ಬೀರು ಮುರಿದು 4 ತೊಲೆ ಬಂಗಾರ, 3 ತೊಲೆ ಬೆಳ್ಳಿ ಹಾಗೂ 5 ಸಾವಿರ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ರಾತ್ರಿ ವೇಳೆ 9.30ಕ್ಕೆ ಮುಖಕ್ಕೆ ಮುಸುಕು ಧರಿಸಿ ದರೋಡೆಕೋರರು ಬಂದಿದ್ದಾರೆ. ಹೊರಗಡೆ ಹೋಗಿದ್ದ ತನ್ನ ತಮ್ಮ ಆನಂದನ ಬರುವಿಕೆಗಾಗಿ ದೀಪಕ್‌ ಕುಟುಂಬ ಕಾಯ್ತಾ ಇತ್ತು. ಮನೆ ಮುಖ್ಯ ಬಾಗಿಲು ಬಡಿದಾಗ ತಮ್ಮನೆಂದು ಬಂದಿದ್ದಾನೆ ಎಂದು ಬಾಗಿಲು ತೆರೆದಿದ್ದಾರೆ. ತಕ್ಷಣವೇ ಏಕಾಏಕಿ ಮನೆಯೊಳಗೆ ನುಗ್ಗಿದ ಮೂವರು ದರೋಡೆಕೋರರು ಮನೆ ಕುಟುಂಬಸ್ಥರಿಗೆ ನಕಲಿ ಗನ್‌, ಚಾಕೂ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ಮನೆ ಮಂದಿಯನ್ನೆಲ್ಲಾ ಒಂದೆಡೆ ಕೂರಿಸಿ, ಟಿವಿ ವ್ಯಾಲ್ಯೂಮ್‌ ಹೆಚ್ಚಿಸಿ, ಕಳ್ಳತನ ಮಾಡಿದ್ದಾರೆ.

ಕಾರಿನೊಳಗೆ ಧೂಮಪಾನ ಮಾಡಿದ ಅಧಿಕಾರಿಗೆ ಬೆದರಿಕೆ ಹಾಕಿ ಹಣ,ಚಿನ್ನ ದೋಚಿದ ಬೈ

ಆಗ ಕಳ್ಳರ ಕೈಯಲ್ಲಿದ್ದ ಗನ್‌ ಅನ್ನು ಆನಂದನ ಮತ್ತೊಬ್ಬ ತಮ್ಮ ಮನೋಜಕುಮಾರ್‌ ಕಿತ್ತುಕೊಂಡಿದ್ದಾರೆ. ತಕ್ಷಣವೇ ಸಿಟ್ಟಿಗೆದ್ದ ದರೋಡೆಕೋರರು ಮನೋಜನ ಕಣ್ಣಿಗೆ ಕಾರದ ಪುಡಿ ಎರಚಿ ವಿಕೃತಿ ಮೆರೆದಿದ್ದಾರೆ.

ಮಸಣವಾಯ್ತು ಜೇನುಗೂಡು: ಆಸ್ತಿಗಾಗಿ ನಾಲ್ವರ ಕೊಲೆ

ಕಾರದ ಪುಡಿ ಎರಚಿದರೂ ಕಳ್ಳರ ಕೈಯಿಂದ ತಪ್ಪಿಸಿಕೊಂಡು ಓಡಲೆತ್ನಿಸಿದ್ದ ಮನೋಜಕುಮಾರ ನಿಯಂತ್ರಣ ತಪ್ಪಿ ಕಂಪೌಂಡ್‌ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ. ಮನೋಜ್‌ ಕುಮಾರ್‌ ಚೀರಾಟ ಕಂಡು ಏರಿಯಾದ ಜನರು ಜಮವಣೆಗೊಂಡಿದ್ದಾರೆ. ಅಷ್ಟರಲ್ಲಾಗಲೇ ಮನೆಯಿಂದ ದರಡೆಕೋರರು ಪರಾರಿಯಾಗಿದ್ದಾರೆ. ಮನೆಯ ಯಜಮಾನ ದೀಪಕ್‌ ಅವರು ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ದೂರು ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios