ಕಾರಿನೊಳಗೆ ಧೂಮಪಾನ ಮಾಡಿದ ಅಧಿಕಾರಿಗೆ ಬೆದರಿಕೆ ಹಾಕಿ ಹಣ,ಚಿನ್ನ ದೋಚಿದ ಬೈಕ್ ವಾಹನ ಸವಾರ!
ದ್ವಿಚಕ್ರ ವಾಹನ ಸವಾರ ಕಾರಿನೊಳಗೆ ಧೂಮಪಾನ ಮಾಡುವುದನ್ನು ವಿರೋಧಿಸಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿ 95,000 ಹಣ ಮತ್ತು 30 ಗ್ರಾಂ ಬಂಗಾರವನ್ನು ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ಬೆನ್ನಿಗಾನಹಳ್ಳಿ ಅಂಡರ್‌ಪಾಸ್‌ನಲ್ಲಿ ನಡೆದಿದೆ.
ಬೆಂಗಳೂರು (ಫೆ.25): ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರು ಕಾರಿನೊಳಗೆ ಧೂಮಪಾನ ಮಾಡುವುದನ್ನು ವಿರೋಧಿಸಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿ 95,000 ಹಣ ಮತ್ತು 30 ಗ್ರಾಂ ಬಂಗಾರವನ್ನು ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ಬೆನ್ನಿಗಾನಹಳ್ಳಿ ಅಂಡರ್‌ಪಾಸ್‌ನಲ್ಲಿ ನಡೆದಿದೆ. ಬಹುರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ಕ್ರೆಡಿಟ್ ಅಸೆಸ್‌ಮೆಂಟ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ನಾಗವಾರ ಪಾಳ್ಯದ ನಿವಾಸಿ ಧನಂಜಯ್ ನಾಯರ್ ಎಂಬವರು ತಮ್ಮ ಕಾರಿನಲ್ಲಿ ಕಚೇರಿಗೆ ತೆರಳುತ್ತಿದ್ದರು. ವಾಹನ ಚಲಾಯಿಸುವಾಗ ನಾಯರ್ ತನ್ನ ವಾಹನದೊಳಗೆ ಸಿಗರೇಟ್ ಸೇದುತ್ತಿದ್ದುದನ್ನು ದುಷ್ಕರ್ಮಿ ಗಮನಿಸಿದ್ದಾನೆ. ಸ್ಕೂಟರ್ ಸವಾರರು ಅವರ ಕಾರನ್ನು ಹಿಂಬಾಲಿಸಿ ಬೆನ್ನಿಗಾನಹಳ್ಳಿ ಅಂಡರ್‌ಪಾಸ್‌ನಲ್ಲಿ ಸುತ್ತುವರಿದಿದ್ದಾರೆ.
ಕಾರಿನಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಪೊಲೀಸರು ಬಂಧಿಸುತ್ತಾರೆ ಎಂದು ಬೆದರಿಕೆ ಹಾಕಿ ದುಷ್ಕರ್ಮಿಗಳು ನಾಯರ್ ಇದ್ದ ಕಾರಿನ ಬಾಗಿಲು ಬಲವಂತವಾಗಿ ತೆರೆದು ಅದರಲ್ಲಿ ಹತ್ತಿದರು. ದುಷ್ಕರ್ಮಿಗಳು ಕೆಲವು ಗುರುತಿನ ಚೀಟಿಗಳನ್ನು ತೋರಿಸಿ ತನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿ ಬೆದರಿಕೆಯೊಡ್ಡಿದ್ದಾರೆ. ಇದಲ್ಲದೆ, ದುಷ್ಕರ್ಮಿಗಳು ತಮ್ಮ ಬಳಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದೇವೆ ಎಂದು ನಾಯರ್‌ಗೆ ತಿಳಿಸಿದ್ದರು ಮತ್ತು ಸುರಕ್ಷಿತವಾಗಿರಲು ತಮ್ಮ ಸೂಚನೆಗಳನ್ನು ಅನುಸರಿಸುವಂತೆ ಗದರಿಸಿದ್ದರು.
ಆಂಧ್ರದಲ್ಲಿ 'ಮರ್ಯಾದೆಗೇಡು ಹತ್ಯೆ', ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!
ಇದಾದ ನಂತರ ದುಷ್ಕರ್ಮಿಗಳು ನಾಯರ್ ಅವರ ಮೊಬೈಲ್ ಫೋನ್ ಮತ್ತು ವ್ಯಾಲೆಟ್ ಅನ್ನು ಕಸಿದುಕೊಂಡು, ಎಟಿಎಂ ಬಳಿ ಅವರ ಕಾರನ್ನು ನಿಲ್ಲಿಸಿ ಹಣ ಡ್ರಾ ಮಾಡಿ ಕೊಡುವಂತೆ ಒತ್ತಾಯಿಸಿದರು. ನಾಯರ್ ಕ್ರೆಡಿಟ್ ಕಾರ್ಡ್ ಬಳಸಿ 50,000 ಮತ್ತು ಡೆಬಿಟ್ ಕಾರ್ಡ್‌ನಿಂದ 45,000 ರೂ. ಒಟ್ಟು 95,000 ಸುಲಿಗೆ ಮಾಡಿದ ದುಷ್ಕರ್ಮಿ ನಾಯರ್ ಅವರಿಂದ ಸುಮಾರು 30 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಸಿದುಕೊಂಡಿದ್ದಾನೆ ಎನ್ನಲಾಗಿದೆ.
BENGALURU CRIME: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ: ಪೊಲೀಸ್ ಠಾಣೆ ಶವವಿಟ್ಟು ಪ್ರತಿಭಟನೆ
ಮಾತ್ರವಲ್ಲ ದುಷ್ಕರ್ಮಿಗಳು ನಾಯರ್‌ಗೆ ಕೊಲೆ ಬೆದರಿಕೆ ಹಾಕಿದ್ದಾನೆ ಮತ್ತು ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಕುಟುಂಬಕ್ಕೂ ಹಾನಿ ಮಾಡುವುದಾಗಿ ಎಚ್ಚರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಯರ್ ಈ ಘಟನೆಯನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದು, ಅವರು ಪೊಲೀಸ್ ದೂರು ದಾಖಲಿಸಲು ಬೆಂಬಲಿಸಿದ್ದರು. ಘಟನೆ ಬಗ್ಗೆ ರಾಮಮೂರ್ತಿನಗರ ಪೊಲೀಸರು ಐಪಿಸಿ ಸೆಕ್ಷನ್ 384 ರ ಅಡಿಯಲ್ಲಿ ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾರೆ. ಅವರು ಅಂಡರ್‌ಪಾಸ್ ಮತ್ತು ಎಟಿಎಂ ನಡುವಿನ ಅಂತರದಲ್ಲಿ ಇರುವ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರೂ, ದುಷ್ಕರ್ಮಿ ಸಿಸಿಟಿವಿ ಯಲ್ಲಿ ಸೆರೆಯಾಗಿಲ್ಲ. ಆರೋಪಿಯನ್ನು ಪತ್ತೆಹಚ್ಚಿ, ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.