Asianet Suvarna News Asianet Suvarna News

100 ಮನೆಗಳಲ್ಲಿ ಕಳ್ಳತನ ಮಾಡಿ ದೆಹಲಿಯಲ್ಲಿ ಮನೆಯನ್ನೇ ಕಟ್ಟಿದ ಚಾಲಾಕಿ ಕಳ್ಳಿ ಬಂಧನ..!

ಉತ್ತರ ಪ್ರದೇಶದ ಗಾಜಿಯಾಬಾದ್‌ ಪೊಲೀಸರು ಚಾಲಾಕಿ ಕಳ್ಳಿಯೊಬ್ಬರನ್ನು ಬಂಧಿಸಿದ್ದಾರೆ. ಈಕೆ ಕನಿಷ್ಠ 100 ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಹೇಳಲಾಗಿದೆ. 

serial burglar posed as help robbed 100 houses and built home in delhi arrested ash
Author
Bangalore, First Published Aug 18, 2022, 5:11 PM IST

ಮನೆಗಳಲ್ಲಿ ಮನೆಗೆಲಸದವರನ್ನು ಇಟ್ಟುಕೊಳ್ಳುವುದು ಸಾಮಾನ್ಯ ಸಂಗತಿಯಾಗುತ್ತಿದೆ. ಆದರೆ, ಆ ಮನೆಗೆಲಸದವರ ಬಗ್ಗೆ ವಿಚಾರಿಸದೆ ಸೇರಿಸಿಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ. ಸುಮಾರು 100 ಮನೆಗಳಲ್ಲಿ ಮನೆಗೆಲಸದವಳಾಗಿ ಸೇರಿಕೊಂಡ ಮಹಿಳೆಯೊಬ್ಬರು ನೂರು ಮನೆಗಳಲ್ಲಿ ಮನೆ ಕಳ್ಳತನ ಮಾಡಿ ರಾಷ್ಟ್ರ ರಾಜಧಾನಿಯಲ್ಲಿ ಸ್ವತ ಮನೆಯನ್ನೇ ಕಟ್ಟಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಚಾಲಾಕಿ ಕಳ್ಳಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ಉತ್ತರ ಪ್ರದೇಶದ ಗಾಜಿಯಾಬಾದ್‌ ಪೊಲೀಸರು, ಸರಣಿ ಕಳ್ಳತನ ಮಾಡಿರುವ ಶಂಕೆಯ ಮೇರೆಗೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಈಕೆ ತಾನು ಕೆಲಸ ಮಾಡುವ ಮನೆಗಳಲ್ಲಿ ಕಳ್ಳತನ ಮಾಡಿ, ಆ ಅಪರಾಧದ ಹಣದಿಂದ ದೆಹಲಿಯಲ್ಲಿ ತನ್ನದೇ ಮನೆ ಕಟ್ಟಿಸಿಕೊಂಡಿದ್ದಾರೆ ಎಂದೂ ಗಾಜಿಯಾಬಾದ್‌ ಪೊಲೀಸರು ತಿಳಿಸಿದ್ದಾರೆ. ಸುಮಾರು 100 ಮನೆಗಳಲ್ಲಿ ಈಕೆ ಬಂಗಾರದ ಒಡವೆಗಳನ್ನು ಕದ್ದಿದ್ದಾರೆ, ಈ ಪೈಕಿ ಎನ್‌ಸಿಆರ್‌ ಪ್ರದೇಶದ ಜಿಲ್ಲೆಗಳಲ್ಲೇ 26 ಪ್ರಕರಣಗಳನ್ನು ಈಕೆ ಎದುರಿಸುತ್ತಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ. 

Mysuru: ಸಾಂಸ್ಕೃತಿಕ ನಗರಿಯಲ್ಲಿ ಖತರ್ನಾಕ್ ಮನೆ ಕಳ್ಳಿಯ ಬಂಧನ

ಬಿಹಾರ ಮೂಲದ ಭಗಲಪುರ ಜಿಲ್ಲೆ ಮೂಲದ ಪೂನಂ ಶಾ ಅಲಿಯಾಸ್‌ ಕಾಜಲ್‌, ದೆಹಲಿ, ಜೋಧಪುರ, ಕೋಲ್ಕತ್ತ ಹಾಗೂ ಗಾಜಿಯಾಬಾದ್‌ ನಗರಗಳು ಸೇರಿ ಇತರೆ ನಗರಗಳಲ್ಲಿ ಕೆಲಸ ಮಾಡಿ ಅವರ ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಅಲ್ಲದೆ, ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿ ಕಳ್ಳತನ ಮಾಡುತ್ತಿದ್ದ ಆಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದೂ ಗಾಜಿಯಾಬಾದ್‌ ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ವಿಪುಲ್‌ ಗೋಯಲ್‌ ಎಂಬ ಮನೆಯಲ್ಲಿ 10 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಆರೋಪಿ ಕಾಜಲ್‌ ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
 
30 ರಿಂದ 40 ವರ್ಷ ವಯಸ್ಸಿನ ಕಾಜಲ್‌ರನ್ನು ಉತ್ತರ ಪ್ರದೇಶದ ಆಮ್ರಪಾಲಿ ಗ್ರಾಮ ಸೊಸೈಟಿಯಿಂದ ಆಕೆಯನ್ನು ಬಂಧಿಸಲಾಗಿದೆ ಎಂದು ಇಂದಿರಾಪುರಂ ಸರ್ಕಲ್‌ ಆಫೀಸರ್‌ ಅಭಯ್‌ ಮಿಶ್ರಾ ಹೇಳಿದ್ದಾರೆ. ಸಿಸಿ ಕ್ಯಾಮೆರಾ ಫೂಟೇಜ್‌ ಅನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಈ ವೇಳೆ ಆಕೆ ಬಳಿಯಿದ್ದ 3 ಲಕ್ಷ ರೂ. ಮೌಲ್ಯದ ಕದ್ದ ಚಿನ್ನದ ಆಭರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು, ವಿಚಾರಣೆ ವೇಳೆ ಸಹಚರೆ ಬಂಟಿ ಎಂಬುವವರ ನೆರವಿನಿಂದ ಆ ಮನೆಯ ಕಳ್ಳತನ ಮಾಡುವ ಪ್ಲಾನ್‌ ಮಾಡಲಾಗಿತ್ತು ಎಂದು ವಿಚಾರಣೆ ವೇಲೆ ಕಾಜಲ್‌ ಬಾಯಿಬಿಟ್ಟಿದ್ದಾರೆ ಎಂದೂ ಅಭಯ್‌ ಮಿಶ್ರಾ ತಿಳಿಸಿದ್ದಾರೆ. 

ವಿಪುಲ್‌ ಗೋಯಲ್‌ ಅವರ ಹೆಂಡತಿ ಜತೆ ತಾನು ಮಾತನಾಡುತ್ತಿದ್ದೆ. ಆ ವೇಳೆ ಬಂಟಿ ಅವರ ಮನೆಯ ವಾರ್ಡ್‌ರೋಬ್‌ನಲ್ಲಿದ್ದ ಆಭರಣಗಳನ್ನು ಕದ್ದಿದ್ದಾಳೆ ಎಂದು ಕಾಜಲ್ ತಮ್ಮ ಪ್ಲಾನ್‌ ಬಗ್ಗೆ ಹೇಳಿಕೊಂಡಿದ್ದಾರೆ. ನಂತರ ಕಳ್ಳತನ ಮಾಡಿದ ಸೊಸೈಟಿಯಿಂದ ಆಟೋದಲ್ಲಿ ಅವರಿಬ್ಬರೂ ಎಸ್ಕೇಪ್‌ ಆಗಿದ್ದು, ನಂತರ ಚಿನ್ನದ ಒಡವೆಗಳನ್ನು ಇಬ್ಬರೂ ಹಂಚಿಕೊಂಡಿದ್ದರು, ಹಾಗೂ ಮನೆ ಕೆಲಸದವಳಾಗಿ ಗಾಜಿಯಾಬಾದ್‌ನಲ್ಲಿ ಕೆಲಸ ಮಾಡುವ ಮೊದಲು ಕಾಜಲ್‌ ದೆಹಲಿಯ ಉತ್ತಮ್‌ ನಗರದಲ್ಲಿ ವಾಸ ಮಾಡುತ್ತಿದ್ದರು ಎಂದೂ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಚಿನ್ನದ ಅಂಗಡಿಯಲ್ಲಿ ಕಳ್ಳಿಯ ಕರಾಮತ್ತು: ವಿಡಿಯೋ ವೈರಲ್

ಅಲ್ಲದೆ, ಕಳ್ಳತನ ಮಾಡಿದ ಚಿನ್ನದ ಒಡವೆಗಳಿಂದ ಬಂದ ಹಣದಿಂದ ತಾನು ರಾಷ್ಟ್ರ ರಾಜಧಾನಿಯ ಉತ್ತಮ್‌ ನಗರದಲ್ಲಿ ಸೈಟು ಖರೀದಿಸಿ, ನಂತರ ಮನೆ ಕಟ್ಟಿಸಿದೆ ಎಂದೂ ಕಾಜಲ್‌ ತಪ್ಪೊಪ್ಪಿಕೊಂಡಿರುವ ಬಗ್ಗೆಯೂ ಉತ್ತರ ಪ್ರದೇಶ ಗಾಜಿಯಾಬಾದ್‌ನ ಇಂದಿರಾಪುರಂ ಸರ್ಕಲ್‌ ಆಫೀಸರ್‌ ಅಭಯ್‌ ಮಿಶ್ರಾ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕನಿಷ್ಠ 100 ಮನೆಗಳಲ್ಲಿ ಕಳ್ಳತನ ಮಾಡಿದ್ದು, ಎನ್‌ಸಿಆರ್‌ ಜಿಲ್ಲೆಗಳಲ್ಲೇ 26 ಕೇಸ್‌ಗಳಿವೆ ಹಾಗೂ ಇತರೆ ನಗರಗಳಿಗೆ ಹೋಗಿ ಕಳ್ಳತನ ಮಾಡಲು ತಾನು ವಿಮಾನದದಲ್ಲಿ ಹೋಗುತ್ತಿದ್ದೆ ಎಂದೂ ಕಾಜಲ್‌ ಹೇಳಿರುವುದಾಗಿಯೂ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

Follow Us:
Download App:
  • android
  • ios