Asianet Suvarna News Asianet Suvarna News

ಲೈಂಗಿಕ ಕಿರುಕುಳ ಆರೋಪ: ತಮಿಳುನಾಡಿನ ರಾಮೇಶ್ವರಂನಲ್ಲಿ ಪಾದ್ರಿ ಬಂಧನ

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆ ತಮಿಳುನಾಡಿನ ರಾಮೇಶ್ವರಂನಲ್ಲಿ ಪಾದ್ರಿಯೊಬ್ಬರನ್ನು ಬಂಧಿಸಲಾಗಿದೆ. ಇದೇ ರೀತಿ, ಟ್ರೈನಿ ಪಾದ್ರಿಯಾಗಿದ್ದ ಮತ್ತೊಬ್ಬರ ವಿರುದ್ಧವು ಕೇಸ್‌ ದಾಖಲಿಸಲಾಗಿದೆ. 

pastor arrested for sexually harassing girls at tamilnadu rameswaram ash
Author
Bangalore, First Published Aug 9, 2022, 3:31 PM IST

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನಲ್ಲಿ ಚರ್ಚ್‌ವೊಂದರ ಪ್ಯಾಸ್ಟರ್‌ ಅನ್ನು ಬಂಧಿಸಲಾಗಿದೆ. ಚರ್ಚ್‌ಗೆ ಬರುತ್ತಿದ್ದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಜಾನ್‌ ರಾಬರ್ಟ್‌ ಎಂಬ ಪ್ಯಾಸ್ಟರ್‌ ಅನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ರಾಮೇಶ್ವರಂನ ಮಂಡಪಂ ಪ್ರದೇಶದ ಪುನೀಥರ್‌ ಅರುಲ್‌ ಆನಂಧರ್‌ ಚರ್ಚ್‌ನಲ್ಲಿ ಇವರು ಪ್ಯಾಸ್ಟರ್‌ ಆಗಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರು ಮಕ್ಕಳ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.  ಇದನ್ನು ಆಧರಿಸಿ, ಮಕ್ಕಳ ಕಲ್ಯಾಣ ಅಧಿಕಾರಿಗಳು ಜಾನ್ ರಾಬರ್ಟ್ ವಿರುದ್ಧದ ಆರೋಪಗಳ ಮೇಲೆ ಗೌಪ್ಯ ತನಿಖೆ ನಡೆಸಿದರು ಎಂದು ತಿಳಿದುಬಂದಿದೆ.

ಚರ್ಚ್‌ನಲ್ಲಿ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದ ಜಾನ್ ರಾಬರ್ಟ್ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ತನಿಖೆಯಿಂದ ದೃಢಪಟ್ಟ ನಂತರ, ಮಕ್ಕಳ ಕಲ್ಯಾಣ ಅಧಿಕಾರಿಗಳು ಮಂಡಪಂ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಪಾದ್ರಿಯನ್ನು ಬಂಧಿಸಿ ಪೋಕ್ಸೋ (Protection of Children from Sexual Offences Act ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆ ಮೇಲೆ ಹಲ್ಲೆ ಪ್ರಕರಣ: ಬಿಜೆಪಿಯ ಶ್ರೀಕಾಂತ್‌ ತ್ಯಾಗಿ ಬಂಧಿಸಿದ ಪೊಲೀಸರು

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ ಮತ್ತೊಬ್ಬರು ಪಾದ್ರಿಯ ಬಂಧನ..!
ಇನ್ನೊಂದೆಡೆ, ವಿವಾಹವಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ  ಪ್ರಶಿಕ್ಷಣಾರ್ಥಿ ಕ್ರೈಸ್ತ ಪಾದ್ರಿಯನ್ನು ಬಂಧಿಸಲಾಗಿದೆ. ಅಲ್ಲದೆ, ಅವರು ಬೇರೊಬ್ಬರು ಹುಡುಗಿಯನ್ನು ಮದುವೆಯಾಗಲು ಯತ್ನಿಸಿದ್ದು, ಸಂತ್ರಸ್ತೆ ಇದನ್ನು ಪ್ರಶ್ನಿಸಿದಾಗ ಆಕೆಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಳಯಂಕೊಟ್ಟೈ ನಿವಾಸಿ ಮಿಲ್ಟನ್ ಕನಕರಾಜ್ (26) ಸೆಮಿನರಿಯಲ್ಲಿ ಬಿ.ಥಿಯಾಲಜಿ ಓದಿದ್ದು, ಕ್ರಿಸ್ಟಿಯಾ ನಗರ್ ಸಿಎಸ್‌ಐ (ಚರ್ಚ್ ಆಫ್ ಸೌತ್ ಇಂಡಿಯಾ) ಚರ್ಚ್‌ನಲ್ಲಿ ಟ್ರೈನಿ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಚರ್ಚ್ ಬಳಿ, ಅವರು ಬಾಲ್ಯದ ನೆರೆಹೊರೆಯವರಾದ ಕಾಲೇಜು ಹುಡುಗಿಯನ್ನು ಭೇಟಿಯಾದರು. ತಮ್ಮ ಹಳೆಯ ಸಂಪರ್ಕವನ್ನು ಮನಸ್ಸಿನಲ್ಲಿಟ್ಟುಕೊಂಡು, ಅವರು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ದರು ಮತ್ತು ಆಗಾಗ್ಗೆ ಖಾಸಗಿಯಾಗಿ ಭೇಟಿಯಾಗುತ್ತಿದ್ದರು ಎಂದು ಹೇಳಲಾಗಿದೆ.

ರಿಯಲ್ ಎಸ್ಟೇಟ್ ವ್ಯಾಪಾರಿ ಕೊಲೆಗೆ ರೋಚಕ ಟ್ವಿಸ್ಟ್: ಅಪ್ರಾಪ್ತ ಮಗನಿಂದಲೇ ಹತ್ಯೆ

ಮಿಲ್ಟನ್ ಹುಡುಗಿಗಾಗಿ ಹೊಸ ಫೋನ್ ಖರೀದಿಸಿದರು ಮತ್ತು ಅವರು ತಮ್ಮ ಕುಟುಂಬಗಳಿಗೆ ತಿಳಿಯದೆ ತಮ್ಮ ಸಂಬಂಧವನ್ನು ಮುಂದುವರೆಸಿದರು. ಇತ್ತೀಚೆಗೆ ಮಿಲ್ಟನ್ ಅವರ ಪೋಷಕರು ವರನನ್ನು ಹುಡುಕಲು ಪ್ರಾರಂಭಿಸಿದರು. ಈ ವಿಷಯ ತಿಳಿದ ಬಾಲಕಿ ಮಿಲ್ಟನ್‌ನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಆಕೆಯ ಕುಟುಂಬವನ್ನು ನಿಂದಿಸಿದ್ದ ಮಿಲ್ಟನ್‌, ತನಗೆ ಏನಾದರೂ ತೊಂದರೆ ನೀಡಿದರೆ ಜೀವಂತವಾಗಿ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ವಿವಾಹದ ನೆಪವೊಡ್ಡಿ ಒಂದೂವರೆ ವರ್ಷಗಳ ಕಾಲ ಪಾದ್ರಿ ತನ್ನನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಎಂದು ಆರೋಪಿಸಿ ಯುವತಿಯ ಪೋಷಕರು ಪಳಯಂಕೊಟ್ಟೈ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಮಿಲ್ಟನ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
 
ತಮಿಳುನಾಡು ಸೇರಿ ದೇಶಾದ್ಯಂತ ಇಂತಹ ಹಲವು ಘಟನೆಗಳು ವರದಿಯಾಗಿದ್ದು, ಹಲವರ ವಿರುದ್ಧ ತನಿಖೆಗಳು ನಡೆದಿವೆ. ಬಾಲಕಿಯರನ್ನು ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಹಲವರ ವಿರುದ್ಧ ಪೋಕ್ಸೋ ಕೇಸ್‌ ಅನ್ನು ಸಹ ದಾಖಲಿಸಲಾಗಿದೆ.

Follow Us:
Download App:
  • android
  • ios