ಇಮ್ಮಡಿಹಳ್ಳಿ ಸಾನ್ವಿ ಸಂಕಲ್ಪ ಅಪಾರ್ಟ್‌ಮೆಂಟಲ್ಲಿ ಕಳ್ಳತನಕ್ಕೆ ಯತ್ನ ಕಲ್ಲೆಸೆದು, ಚಾಕು ತೋರಿದರೂ ಜಗ್ಗದ ಜಗತ್‌, ಪದಂಗೆ ಪ್ರಶಂಸೆ ಆರೋಪಿಯಿಂದ 100 ಶೂಗಳನ್ನು ಜಪ್ತಿ

ಬೆಂಗಳೂರು(ಫೆ.03): ಅಪಾರ್ಟ್‌ಮೆಂಟ್‌ನಲ್ಲಿ ಶೂ ಕದ್ದು ಪರಾರಿಯಾಗುತ್ತಿದ್ದ ಕಳ್ಳರ(thief) ತಂಡವನ್ನು ಬೆನ್ನುಹತ್ತಿದ ಸೆಕ್ಯೂರಿಟಿ ಗಾರ್ಡ್‌ಗಳು(Security Guard) ಓರ್ವ ಕಳ್ಳನನ್ನು ಹಿಡಿದಿದ್ದಾರೆ. ಬನ್ನೇರುಘಟ್ಟನಿವಾಸಿ ಅಯ್ಯನಾರ್‌ ಎಸ್‌.ರಾಜು ಬಂಧಿತ. ಇತ್ತೀಚೆಗೆ ಇಮ್ಮಡಿಹಳ್ಳಿಯ ಕೈ ತೋಟ ಸಮೀಪ ಸಾನ್ವಿ ಸಂಕಲ್ಪ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಸಹಚರರ ಜತೆ ಬ್ರಾಂಡೆಡ್‌ ಶೂಗಳನ್ನು(Branded Shoe) ಕದ್ದು ಪರಾರಿಯಾಗುತ್ತಿದ್ದ. ಆತನನ್ನು ಸೆಕ್ಯೂರಿಟಿ ಗಾರ್ಡ್‌ಗಳಾದ ಜಗತ್‌ ಬೋರಾ ಹಾಗೂ ಪದಮ್‌ ಬೋರಾ ಸೆರೆ ಹಿಡಿದಿದ್ದಾರೆ. ಆರೋಪಿಯಿಂದ 100 ಶೂಗಳನ್ನು ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಶರವಣ, ಶಂಕರ್‌ ಹಾಗೂ ಅಲ್ಲೂರು ಪತ್ತೆಗೆ ತನಿಖೆ ನಡೆದಿದೆ ಎಂದು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ರಾಜು ಮೂಲತಃ ತಮಿಳುನಾಡು(Tamilnadu) ರಾಜ್ಯದವನಾಗಿದ್ದು, ಹಲವು ದಿನಗಳಿಂದ ಬನ್ನೇರುಘಟ್ಟದಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ. ಅಪಾರ್ಟ್‌ಮೆಂಟ್‌ಗಳಲ್ಲಿ(Appartment) ಬ್ರಾಂಡೆಡ್‌ ಶೂಗಳನ್ನು ಕದ್ದು ಬಳಿಕ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ರಾಜು ವಿರುದ್ಧ ಮೈಕೋ ಲೇಔಟ್‌ ಹಾಗೂ ಉಪ್ಪಾರಪೇಟೆ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.

Altroz Test Drive ಟೆಸ್ಟ್ ಡ್ರೈವ್ ನೆಪದಲ್ಲಿ ಟಾಟಾ ಅಲ್ಟ್ರೋಜ್ ಕಳ್ಳತನ, ತಂತ್ರಜ್ಞಾನದಿಂದ ಕಾರು ಸುರಕ್ಷಿತವಾಗಿ ವಾಪಸ್!

ಜ.27ರಂದು ರಾತ್ರಿ ಇಮ್ಮಡಿಹಳ್ಳಿಯ ಕೈ ತೋಟದ ಸಮೀಪದ ಸಾನ್ವಿ ಅಪಾರ್ಟ್‌ಮೆಂಟ್‌ಗೆ ಶೂ ಕದಿಯಲು ರಾಜು ತಂಡ, ಅಪಾರ್ಟ್‌ಮೆಂಟ್‌ ಹಿಂಭಾಗದ ಕಾಂಪೌಂಡ್‌ ಜಿಗಿದು ಒಳ ನುಗ್ಗಿದೆ. ಅದೇ ಅಪಾರ್ಟ್‌ಮೆಂಟ್‌ನ ಮುಖ್ಯದ್ವಾರದಲ್ಲಿ ರಾತ್ರಿ ಭದ್ರತೆಯಲ್ಲಿ ತೊಡಗಿದ್ದ ಜಗತ್‌ ಹಾಗೂ ಪದಮ್‌, ರಾತ್ರಿ 1.30ರ ಸುಮಾರಿಗೆ ಸಿಸಿಟಿವಿ ಗಮನಿಸಿದಾಗ ಫ್ಲ್ಯಾಟ್‌ಗಳ ಬಳಿ ನಾಲ್ವರು ಅಪರಿತರು ಶಂಕಾಸ್ಪದವಾಗಿ ಓಡುತ್ತಿದ್ದನ್ನು ನೋಡಿದ್ದಾರೆ. ತಕ್ಷಣವೇ ಆರೋಪಿಗಳನ್ನು ಹಿಡಿಯಲು ಕಾವಲುಗಾರರು ಮುಂದಾಗಿದ್ದಾರೆ. ಆಗ ಕಾವಲುಗಾರರನ್ನು ಕಂಡ ಕೂಡಲೇ ಕಳ್ಳರು, ಕಲ್ಲು ಎಸೆದು ಕಾಲ್ಕಿತ್ತಿದ್ದಾರೆ. ಈ ವೇಳೆ ಕಾವಲುಗಾರರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಜಗ್ಗದೆ ಕಾವಲುಗಾರರು, ಖದೀಮರ ಬೆನ್ನಹತ್ತಿ ಕೊನೆಗೆ ರಾಜುನನ್ನು ಸೆರೆ ಹಿಡಿದು ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯ ಹೊಯ್ಸಳ ಸಿಬ್ಬಂದಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ಗಳನ್ನು ವೈಟ್‌ಫೀಲ್ಡ್‌ ಡಿಸಿಪಿ ಎಸ್‌.ಗಿರೀಶ್‌ ಅಭಿನಂದಿಸಿದ್ದಾರೆ.

Bank Theft Case: ಸಾಲ ತೀರಿಸಲು ಬ್ಯಾಂಕಿಗೇ ಕನ್ನ ಹಾಕಿದ್ದ ಖದೀಮನ ಬಂಧನ

ಸರ ಕದಿಯಲು ಯತ್ನಿಸಿ ಸಿಕ್ಕಿಬಿದ್ದ ಭೂಪ
ಕುರಿ ಮೇಯಿಸುತ್ತಿದ್ದ ವೇಳೆ ಮಹಿಳೆಯ ಸರ ಕಸಿದು ಪರಾರಿಯಾಗಲು ಯತ್ನಿಸಿದ ಇಬ್ಬರು ಕಳ್ಳರ ಪೈಕಿ ಒಬ್ಬ ಅಸಾಮಿ ಸ್ಥಳೀಯರಿಗೆ ಸಿಕ್ಕಿಬಿದ್ದು ಮತ್ತೊಬ್ಬ ಎಸ್ಕೇಪ್‌ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಗೊರ್ತಪಲ್ಲಿ ಸಮೀಪ ನಡೆಸಿದೆ. ಗ್ರಾಮದ ಲಕ್ಷ್ಮೇ ನರಸಮ್ಮ ಎಂಬುವರು ತಮ್ಮ ಗ್ರಾಮದಿಂದ ಶ್ರೀರಾಮಪುರಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಮುಸ್ತಾಫ ಎಂಬುವರ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಗೊರ್ತಪಲ್ಲಿ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ಮಹಿಳೆ ಇದ್ದ ಸ್ಥಳಕ್ಕೆ ಹೋದರಲ್ಲದೆ, ಗಮನ ಬೇರೆಡೆ ಸೆಳೆದು, ಕತ್ತಿನಲ್ಲಿದ್ದ ಕರಿಮಣಿ ಸರದಲ್ಲಿ ಇರುವ ತಾಳಿ, ಲಕ್ಷ್ಮೀಕಾಸು, ಕನ್ಯಾದಾನ ಬೊಟ್ಟು ಇರುವ ಸರವನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಸ್ಥಳೀಯರು ಅವರನ್ನು ಹಿಡಿಯಲು ಯತ್ನಿಸಿದರು. ಆದರೆ, ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆಂದು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ಸದ್ಯ ಸಿಕ್ಕಿಬಿದ್ದಿರುವ ಆರೋಪಿಯನ್ನು ವಿಚಾರಣೆ ಮಾಡಿದಾಗ ಮಹಮದಾಬಾದ್‌ ಆದಿನಾರಾಯಣ ಎಂದು ತಿಳಿದು ಬಂದಿದೆ.

ಕಾನ್ಪುರದ ಮನೆಯಲ್ಲಿ ಕಳ್ಳತನ, ಅಮೆರಿಕದಿಂದ CCTVಯಲ್ಲಿ ಲೈವ್ ನೋಡಿದ ಮಾಲೀಕ, ಮುಂದೆ ನಡೆದಿದ್ದೇ ಬೇರೆ!

ದೂರವಾಣಿ ಕೇಬಲ್‌ ಕಳವು ಯತ್ನ: ಮೂವರ ಸೆರೆ
ದೂರವಾಣಿ ಕೇಬಲ್‌ ಕಳವಿಗೆ ಯತ್ನಿಸಿದ ತಂಡವೊಂದನ್ನು ಗ್ರಾಮಸ್ಥರೇ ಪೊಲೀಸರಿಗೊಪ್ಪಿಸಿದ ಘಟನೆ ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ನಡೆದಿದೆ. ನೆಕ್ಕಿಲಾಡಿ ಗ್ರಾಮದ ಬೋಳಂತಿಲ ಎಂಬಲ್ಲಿ ಅಳವಡಿಸಲಾಗಿದ್ದ ದೂರವಾಣಿ ಕೇಬಲನ್ನು ಕದಿಯಲು ಗೂಡ್ಸ್‌ ರಿಕ್ಷಾವೊಂದರಲ್ಲಿ ಬಂದಿದ್ದ ಮೂವರ ತಂಡವೊಂದು ಪ್ರಯತ್ನಿಸುತ್ತಿದ್ದ ವೇಳೆ ಕಳ್ಳರ ಮೇಲೆ ಕಣ್ಣಿರಿಸಿದ ಗ್ರಾಮಸ್ಥರು, ಪ್ರಕರಣವನ್ನು ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳಾದ ಸಿನಾನ್‌, ಚಂದ್ರಹಾಸ ಹಾಗೂ 17ರ ಹರೆಯದ ಬಾಲಪರಾಧಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಬಳಸಿದ್ದ ಗೂಡ್ಸ್‌ ರಿಕ್ಷ್ಷಾವನ್ನೂ ವಶಕ್ಕೆ ಪಡೆಯಲಾಗಿದೆ