ನಾರಿಯ ಸೀರೆ ಕದ್ದ, ರಾಧೆಯ ಮನ ಗೆಲ್ಲೋ ಮುನ್ನ ಸೆಕ್ಯೂರಿಟಿಯ ಕ್ರೋಧಕ್ಕೆ ತುತ್ತಾಗಿ ಸತ್ತೇ ಹೋದ!
ಮಹಾಭಾರತದಲ್ಲಿ ಒಂದು ಸೀರೆಯಿಂದಾಗಿ ಯದ್ಧವೇ ನಡೆದುಹೋಗಿದೆ. ಇದಾದ ಬಳಿಕ ಆಧುನಿಕ ಭಾರತದಲ್ಲಿ ಸೀರೆ ವಿಚಾರದಲ್ಲಿ ಕೊಲೆ, ದರೋಡೆ, ದೌರ್ಜನ್ಯಗಳು ನಡೆದು ಹೋಗಿದೆ. ಇದೀಗ ಸೀರೆ ಸೆಕ್ಯೂರಿಟಿ ಗಾರ್ಡ್ ಪ್ರಾಣವನ್ನೇ ಬಲಿಪಡೆದಿದೆ. ಅಷ್ಟಕ್ಕೂ ಏನಿದು ಸೀರೆ ಗಲಾಟೆ!

ಗುರುಗ್ರಾಂ(ಆ.18) ಸೀರೆ ಮೇಲೆ ಕಣ್ಣು ಹಾಕಿದರೆ ಪರಿಸ್ಥಿತಿ ಏನಾಗಬಹುದು ಅನ್ನೋದಕ್ಕೆ ಹಲವು ನಿದರ್ಶನಗಳಿವೆ. ಇದೀಗ ಪಕ್ಕದ ಸೆಕ್ಯೂರಿಟಿ ಗಾರ್ಡ್ ಪತ್ನಿಯ ಸೀರೆ ಕದ್ದ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ತನ್ನ ಪತ್ನಿಯ ಮನವ ಗೆದ್ದನೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಆದರೆ ಪಕ್ಕದ ಸೆಕ್ಯೂರಿಟಿ ಗಾರ್ಡ್ ಆಕ್ರೋಶಕ್ಕೆ ತುತ್ತಾಗಿ ಕೊಲೆಯಾಗಿದ್ದಾನೆ. ಗುರುಗ್ರಾಂನ ನಾಥುಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ನಾಥುರ್ ಗ್ರಾಮದಲ್ಲಿ ಅಜಯ್ ಸಿಂಗ್ ಹಾಗೂ ಪಿಂಟು ಕುಮಾರ್ ಇಬ್ಬರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರದ್ದು ಅಕ್ಕ ಪಕ್ಕ ಮನೆ. ಅಜಯ್ ಸಿಂಗ್ ಮನೆಗೆ ವಾಪಾಸ್ಸಾಗುತ್ತಿದ್ದಂತೆ ಪತ್ನಿ ರೀನಾ ಆಕ್ರೋಶದಿಂದ ಪಕ್ಕದ ಮನೆಯ ಪಿಂಟು ಕುಮಾರ್ ನನ್ನ ಸೇರಿ ಕದ್ದಿದ್ದಾನೆ ಎಂದು ದೂರಿದ್ದಾಳೆ. ಇದು ಅಜಯ್ ಸಿಂಗ್ ಪಿತ್ತ ನೆತ್ತಿಗೇರಿಸಿದೆ. ನನ್ನ ಪತ್ನಿಯ ಸೇರಿಯೆನ್ನೇ ಕದಿಯುವಷ್ಟು ಧೈರ್ಯ ಎಲ್ಲಿಂದ ಬಂತು? ಈ ವಿಚಾರ ಇಲ್ಲಿಗೆ ಸುಮ್ಮನೆ ಬಿಡಲ್ಲ ಎಂದು ಪತ್ನಿಯನ್ನು ಸಮಾಧಾನ ಮಾಡಿದ್ದಾನೆ. ಆದರೆ ಪತ್ನಿ ಅಷ್ಟಕ್ಕೆ ಸುಮ್ಮನಾಗಬೇಕಲ್ಲ. ಪಿಂಟು ಕುಮಾರ್ ಮೇಲೆ ಆಕ್ರೋಶ ಹೊರಹಾಕಿ ಗಂಡನ ಬಳಿ ಪುರಾಣ ಕತೆ ಬಿಚ್ಚಿಟ್ಟಿದ್ದಾಳೆ.
ಬೆಂಗಳೂರಲ್ಲಿ ಗಂಡ- ಮಂಡ್ಯದಲ್ಲಿ ಹೆಂಡ್ತಿ: ಶೀಲ ಶಂಕೆಯಿಂದ ಕೊಂದೇಬಿಟ್ಟ ಪತಿರಾಯ
ಇವೆಲ್ಲವನ್ನು ಕೇಳಿಸಿಕೊಂಡ ಪತಿ ಅಜಯ್ ಸಿಂಗ್ ಕೆರಳಿದ್ದಾನೆ. ರಾತ್ರಿ 8 ಗಂಟೆ ಹೊತ್ತಿಗೆ ಪಿಂಟು ಕುಮಾರ್ ತನ್ನ ಸೆಕ್ಯೂರಿಟಿ ಗಾರ್ಡ್ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ಸಾಗಿದ್ದಾನೆ. ಪಿಂಟು ಕುಮಾರ್‌ಗಾಗಿ ಕಾಯುತ್ತಿದ್ದ ಅಜಯ್ ಸಿಂಗ್, ತಡೆದು ನಿಲ್ಲಿಸಿ ಪತ್ನಿಯ ಸೀರೆ ಕದ್ದು ನಾಟಕಾಡುತ್ತಿಯಾ? ತಕ್ಷಣವೇ ಸೀರೆ ವಾಪಸ್ ತಂದುಕೊಡು ಎಂದು ಗದರಿಸಿದ್ದಾನೆ.
ಅಜಯ್ ಸಿಂಗ್ ಮಾತು ಕೇಳಿದ ಪಿಂಟು ಕುಮಾರ್‌ಗೆ ಅಚ್ಚರಿಯಾಗಿದೆ. ನಾನು ಸೀರೆ ಕದ್ದಿಲ್ಲ.ನಾನು ಕಳ್ಳನಲ್ಲ. ನನಗೆ ನಿಮ್ಮ ಸೀರೆ ಬೇಕಿಲ್ಲ. ನಾನು ಪುರುಷ, ನಿಮ್ಮ ಪತ್ನಿಯ ಸೀರೆ ಉಡುವವ ನಾನನಲ್ಲ . ಯಾರು ಕದ್ದಿದ್ದಾರೋ ಅವರನ್ನು ಕೇಳಿ. ಇಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ತಿರುಗೇಟು ನೀಡಿದ್ದಾರೆ. ಅಜಯ್ ಸಿಂಗ್ ಹಾಗೂ ಪಿಂಟು ಕುಮಾರ್ ವಾಗ್ವಾದ ಜೋರಾಗಿದೆ. ಈ ವೇಳೆ ಪಿಂಟು ಕುಮಾರ್ ರೂಮ್‌ಮೇಟ್ ಓಡೋಡಿ ಬಂದು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾನೆ. ಆಕ್ರೋಶದಿಂದಲೇ ಮನೆಯೊಳಗೆ ಪ್ರವೇಶಿಸಿದ ಅಜಯ್ ಸಿಂಗ್ ಕೆಲ ಹೊತ್ತು ಸುಳಿವೇ ಇರಲಿಲ್ಲ.
ಬೀದಿಯಲ್ಲಿರುವ ದನಗಳ ಹಿಡಿದು ಮಾರಾಟ, ಕೇರಳ ಮೆಡಿಕಲ್ ಕಾಲೇಜು ಸಿಬ್ಬಂದಿ ಬಂಧನ!
ಇತ್ತ ಪಿಂಟು ಕುಮಾರ್ ಪೊಲೀಸ್ ಅಂದ ತಕ್ಷಣ ಭಯ ಎಂದು ಮನೆಯೊಳಗೆ ಓಡಿ ಹೋಗಿದ್ದಾನೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಇದೀಗ ಬಿಲ ಸೇರಿದ್ದಾನೆ ಎಂದು ಕೂಗಾಡಿದ್ದಾನೆ. ಮನೆಯೊಳಗೆ ಹೋಗಿದ್ದ ಅಜಯ್ ಸಿಂಗ್ ಅಷ್ಟರಲ್ಲೇ ತನ್ನ ಡಬಲ್ ಬ್ಯಾರೆಲ್ ಗನ್ ಹಿಡಿದು ಹೊರಬಂದಿದ್ದಾನೆ. ನನ್ನ ಪತ್ನಿಯ ಸೀರೆ ಕದ್ದು ಇಷ್ಟು ಮಾತನಾಡುತ್ತಿಯಾ ಎಂದು ನೇರವಾಗಿ ಗುಂಡು ಹಾರಿಸಿದ್ದಾನೆ.
ಅಜಯ್ ಸಿಂಗ್ ಗುರಿ ಪಿಂಟು ಕುಮಾರ್ ಹೊಟ್ಟೆಯನ್ನು ಸೀಳಿದೆ. ಅಜಯ್ ಸಿಂಗ್ ಅಲ್ಲಿಂದ ಕಾಲ್ಕಿತ್ತರೆ, ಇತ್ತ ಪಿಂಟು ಕುಮಾರ್ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಪಿಂಟು ಕುಮಾ್ರ್ ರೂಮ್‌ಮೇಟ್ ತಕ್ಷಣವೇ ತೀವ್ರಗಾಯಗೊಂಡ ಪಿಂಟು ಕುಮಾರ್‌ನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಪಿಂಟು ಕುಮಾರ್ ಬದುಕಿ ಉಳಿಯಲಿಲ್ಲ. ಈ ಪ್ರಕರಣ ಸಂಬಂಧ ಅಜಯ್ ಸಿಂಗ್‌ನನ್ನುು ಪೊಲೀಸರು ಬಂಧಿಸಿದ್ದಾರೆ.