Asianet Suvarna News Asianet Suvarna News

ಬೆಂಗಳೂರಲ್ಲಿ ಗಂಡ- ಮಂಡ್ಯದಲ್ಲಿ ಹೆಂಡ್ತಿ: ಶೀಲ ಶಂಕೆಯಿಂದ ಕೊಂದೇಬಿಟ್ಟ ಪತಿರಾಯ

ಬೆಂಗಳೂರಲ್ಲಿ ಗಂಡ, ಮಂಡ್ಯದಲ್ಲಿ ಹೆಂಡ್ತಿ 15 ದಿನಕ್ಕೊಮ್ಮೆ ಮನೆಗೆ ಹೋಗುತ್ತಿದ್ದಗಂಡ ಹೆಂಡ್ತಿ ಮೇಲೆ ಶೀಲ ಶಂಕಿಸಿ ಕೊಲೆ ಮಾಡಿ ಪರಾರಿಯಾದ.

Bengaluru Husband mandya Wife killed on suspicion of having an illegal affair sat
Author
First Published Aug 16, 2023, 12:03 PM IST

ಮಂಡ್ಯ (ಆ.16): ಮಂಡ್ಯದಲ್ಲಿ ಜೀವನ ಮಾಡುತ್ತಿದ್ದ ಕುಟುಂಬದಲ್ಲಿ ಗಂಡ ಜೀವನಾಧಾರಕ್ಕೆ ಬೆಂಗಳೂರಿನಲ್ಲಿ ಬಂದು ಕೆಲಸ ಮಾಡುತ್ತಿದ್ದನು. ಇನ್ನು ಪತ್ನಿ ಮನೆಯಲ್ಲಿಯೇ ಮಗುವನ್ನು ಪೋಷಣೆ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದಳು. ಆದರೆ, ಮನೆಯಲ್ಲಿರುವ ಪತ್ನಿಯ ಮೇಲೆ ಶೀಲಶಂಕಿಸಿ ಜಗಳ ಆರಂಭಿಸಿದ ಗಂಡ, ತನ್ನ ಪತ್ನಿತನ್ನು ಹಲ್ಲೆ ಮಾಡಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.

ಹೌದು, ಅಗ್ನಿಸಾಕ್ಷಿಯಾಗಿ ತಾಳಿಕಟ್ಟಿ, ಸಾವಿನವರೆಗೂ ಜೊತೆಯಾಗಿರುವುದಾಗಿ ಸಪ್ತಪದಿ ತುಳಿದ ಗಂಡ ಐದು ವರ್ಷ ಜೀವನವನ್ನೂ ಮಾಡಿದ್ದಾನೆ. ಇವರ ಸಂಸಾರಕ್ಕೆ ಸಾಕ್ಷಿಯಾಗಿ ಒಂದು ಗಂಡುಮಗು ಕೂಡ ಇದೆ. ಆದರೆ, ಜೀವನ ನಿರ್ವಹಣೆಗಾಗಿ ಗಂಡ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದನು. ಇನ್ನು ಮನೆಯಲ್ಲಿ ಮಗುವನ್ನು ಪೋಷಣೆ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಪತ್ನಿಯ ಮೇಲೆ ಗಂಡ ಆಗಿಂದಾಗ್ಗೆ ಶೀಲ ಶಂಕಿಸಿ ಜಗಳ ಮ ಮಾಡುತ್ತಿದ್ದನು. ಇನ್ನು ನಿನ್ನೆಯೂ ಕೂಡ ಮನೆಗೆ ಹೋಗಿದ್ದ ಗಂಡ ಹೆಂಡತಿಯೊಂದಿಗೆ ಇದೇ ವಿಚಾರಕ್ಕೆ ಜಗಳ ಆರಂಭಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಪತ್ನಿಯನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ದಲಿತ ವಿರೋಧಿ ಹೇಳಿಕೆ: ನಟ ಉಪೇಂದ್ರ ವಿರುದ್ಧ ಎಫ್‌ಐಆರ್‌: ಸಚಿವ ಮಲ್ಲಿಕಾರ್ಜುನ ವಿರುದ್ಧ ಕೇವಲ ಎನ್‌ಸಿಆರ್

ನಾಗಮಂಗಲದ ಟಿ.ಬಿ. ಬಡಾವಣೆಯಲ್ಲಿ ಕೊಲೆ ಮಾಡಿ ಪರಾರಿ: ಇನ್ನು ಘಟನೆಯು ಮಂಡ್ಯ ಜಿಲ್ಲೆ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ನಡೆದಿದೆ. ಕೊಲೆಯಾದ ಗೃಹಿಣಿಯನ್ನು ಮಧುಶ್ರೀ (25) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ವ್ಯಕ್ತಿ ಮೃತಳ ಪತಿ ಮಂಜುನಾಥ್ ಆಗಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ವಾಸವಾಗಿದ್ದರು. ಇವರಿಗೆ ನಾಲ್ಕು ವರ್ಷ ಗಂಡು ಮಗು ಕೂಡ ಇತ್ತು. ಇನ್ನು ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ಮಂಜುನಾಥ್ ವಾರದಲ್ಲಿ 2 ಬಾರಿಗೆ ಮನೆಗೆ ಬರ್ತಿದ್ದರು. ನಿನ್ನೆ ಮಧ್ಯಾಹ್ನ ಮನೆಗೆ ಬಂದಿದ್ದ ಮಂಜುನಾಥ್ ಹಾಗೂ ಮಧುಶ್ರೀ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಶೀಲ ಶಂಕಿಸಿ ಕೊಲೆಗೈದ ಮಂಜುನಾಥ್ ಪರಾರಿ ಆಗಿದ್ದಾನೆ. ಈ ಘಟನೆಯು ನಾಗಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಷ್ಟದಲ್ಲಿದ್ದಾಗ ನೆರವು ನೀಡಿದವನ ಮಂಚಕ್ಕೆ ಆಹ್ವಾನಿಸಿ 82 ಲಕ್ಷ ರೂ. ವಸೂಲಿ: ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೀವನ ಮಾಡುತ್ತಿದ್ದ ಮಹಿಳೆಗೆ ಕಷ್ಟ ಎಂದಾಗ ಸರ್ಕಾರಿ ನೌಕರನೊಬ್ಬ ಆರ್ಥಿಕ ಸಹಾಯ ಮಾಡಿದ್ದಾನೆ. ಈ ಋಣ ತೀರಿಸುವುದಾಗಿ ಓಯೋ ರೂಮಿಗೆ ಕರೆಸಿಕೊಂಡು ವೀಡಿಯೋ ಮಾಡಿಕೊಂಡು, ಹನಿಟ್ರ್ಯಾಪ್‌ ಮೂಲಕ ಬರೋಬ್ಬರಿ 82 ಲಕ್ಷ ರೂ. ವಸೂಲಿ ಮಾಡಿದ ದುರ್ಘಟನೆ ನಡೆದಿದೆ. ಇನ್ನು ಎಲ್ಲ ಹಣವನ್ನೂ ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದಾಗ ಪೊಲೀಸರಿಗೆ ದೂರು ಕೊಡಲಾಗಿದ್ದು, ಈಗ ಹನಿಟ್ರ್ಯಾಪ್‌ ಮಾಡಿದ ಗ್ಯಾಂಗ್‌ ಜೈಲುಕಂಬಿ ಎಣಿಸುತ್ತಿದೆ.

ಕಷ್ಟಕ್ಕೆ ನೆರವಾದ ಸರ್ಕಾರಿ ನೌಕರನನ್ನೇ ಹನಿಟ್ರ್ಯಾಪ್‌ ಮಾಡಿದ ಅಣ್ಣಮ್ಮ ಗ್ಯಾಂಗ್‌: 82 ಲಕ್ಷ ರೂ. ವಸೂಲಿ

ಹನಿಟ್ರ್ಯಾಪ್‌ಗೆ ಒಳಗಾದ ವ್ಯಕ್ತಿಯನ್ನು ಸುಧೀಂದ್ರ (ನಿವೃತ್ತ ಸರ್ಕಾರಿ ನೌಕರ) ಆಗಿದ್ದಾರೆ. ಹನಿಟ್ರ್ಯಾಪ್‌ ಮಾಡಿದವರು ರೀನಾ ಅಣ್ಣಮ್ಮ, ಸ್ನೇಹಾ ಮತ್ತು ಲೋಕೇಶ್‌ ಎನ್ನುವವರಾಗಿದ್ದಾರೆ.  ಬೆಂಗಳೂರಿನಲ್ಲಿ ಜೀವನ ನಡೆಸುವುದೇ ಕಷ್ಟವಾಗಿರುತ್ತದೆ. ಹೀಗಾಗಿ, ಮಹಿಳೆಯೊಬ್ಬಳು ಕಷ್ಟದ ಜೀವನ ನಡೆಸುತ್ತಿದ್ದ ವೇಳೆ ಸರ್ಕಾರಿ ನೌಕರನೊಬ್ಬ 5 ಸಾವಿರ ರೂ. ಆರ್ಥಿಕ ಸಹಾಯವನ್ನು ಮಾಡಿದ್ದಾನೆ. ಇನ್ನು ನಿಮ್ಮ ಆರ್ಥಿಕ ಸಹಾಯದ ಋಣ ತೀರಿಸುವುದಾಗಿ ತಿಳಿಸಿದ ಮಹಿಳೆ ಆತನನ್ನು ಖಾಸಗಿ ಹೋಟೆಲ್‌ನ ಓಯೋ ರೂಮಿಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಆತ ಬೇಡವೆಂದರೂ ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ನಂತರ, ಇಬ್ಬರೂ ಲೈಂಗಿಕ ಕ್ರಿಯೆ ನಡೆಸುವುದನ್ನು ಅವರಿಗೆ ಗೊತ್ತಾಗದಂತೆ ವೀಡಿಯೋ ಮಾಡಿಕೊಂಡಿದ್ದಾಳೆ.

Follow Us:
Download App:
  • android
  • ios