PUBG ಗೇಮ್ ದುರಂತ, ಇಬ್ಬರು ವಿದ್ಯಾರ್ಥಿಗಳು ಸಾವು PUBG  ಆಡುತ್ತಾ ಮೈಮರೆತ ವಿದ್ಯಾರ್ಥಿಗಳಿಗೆ ರೈಲು ಡಿಕ್ಕಿ ಮತ್ತೊಂದು ಪಬ್‌ಜಿ ದುರ್ಘಟನೆ ವರದಿ

ಮುಥುರಾ(ನ.21): ಪಬ್‌ಜಿ ಗೇಮ್ ವಿದ್ಯಾರ್ಥಿಗಳು, ಯುವ ಸಮೂಹವನ್ನು ಅದೆಷ್ಟು ಮೋಡಿ ಮಾಡಿದೆ ಅನ್ನೋದು ಈಗಾಗಲೇ ಬಹಿರಂಗವಾಗಿದೆ. ಈ PUBG ಆಟದೊಳಗೆ ಮುಳುಗಿದರೆ ಹೊರಗಿನ ಪ್ರಪಂಚದ ಅರಿವೆ ಇರುವುದಿಲ್ಲ. ಹೀಗೆ ಪಬ್‌ಜಿ ಆಡುತ್ತಾ ವಾಕಿಂಗ್ ಮಾಡುತ್ತಿದ್ದ ವಿದ್ಯಾರ್ಥಿಗಳ(Students) ಮೇಲೆ ರೈಲು(train) ಹರಿದ ಘಟನೆ ಉತ್ತರ ಪ್ರದೇಶ(Uttar Pradesh) ಮಥುರಾದಲ್ಲಿ ನಡೆದಿದೆ. 

10ನೇ ತರಗತಿ ವಿದ್ಯಾರ್ಥಿಗಳಾದ ಕಪಿಲ್(18 ವರ್ಷ) ಹಾಗೂ ರಾಹುಲ್ (16 ವರ್ಷ) ಇಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆ ಪಬ್‌ಜಿ ಆಟದಲ್ಲಿ ಮುಳುಗಿದ್ದಾರೆ. ವಾಕಿಂಗ್ ದಾರಿ ತಪ್ಪಿದೆ. ಗಮನ ಪಬ್‌ಜಿಯಲ್ಲಿ ಕೇದ್ರೀಕೃತವಾಗಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳ ಮೇಲೆ ರೈಲು ಹರಿದು(Accident) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ನಿನ್ನೆ(ನ.22) ಭಾನುವಾರ ಶಾಲೆಗೆ(School) ರಜೆ. ಹೀಗಾಗಿ ಬೆಳಗ್ಗೆ ಇಬ್ಬರು ವಿದ್ಯಾರ್ಥಿಗಳು ವಾಕಿಂಗ್ ತೆರಳಿದ್ದಾರೆ. ವಾಕಿಂಗ್ ವೇಳೆ ಪಬ್‌ಜಿ ಗೇಮ್ ಆಡುತ್ತಾ ಮುಂದೆ ಸಾಗಿದ್ದಾರೆ. ಹಾಗಂತ ಈ ಇಬ್ಬರು ವಿದ್ಯಾರ್ಥಿಗಳು ದಿನವಿಡಿ ಪಬ್‌ಜಿ ಆಡುತ್ತೂ ಕೂತವರಲ್ಲ. ವಿದ್ಯಾಭ್ಯಾಸದಲ್ಲೂ ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಿದ್ದ ವಿದ್ಯಾರ್ಥಿಗಳು. ಬಿಡುವಿನ ವೇಳೆಯಲ್ಲಿ ಮಾತ್ರ ಪಬ್‌ಜಿ ಆಡುತ್ತಾರೆ. ಹೀಗೆ ಭಾನುವಾರ ಆದ ಕಾರಣ ಪಬ್‌ಜಿ ಆಡುತ್ತಾ ವಾಕಿಂಗ್ ಮಾಡಿದ್ದಾರೆ.

ಉತ್ತರಾಖಂಡ ಹುಡುಗ-ವಿಜಯಪುರ ಹುಡುಗಿ.. ಬೆತ್ತಲೆ ಪೋಟೋ..ಪಬ್ ಜಿ ಸ್ಟೋರಿ!

ಉತ್ತರ ಪ್ರದೇಶದ ಮಥುರಾದಲ್ಲಿನ ಲಕ್ಷಿನಗರ ನಿವಾಸಿಗಳಾಗಿರುವ ಇಬ್ಬರು ವಿದ್ಯಾರ್ಥಿಗಳು, ವಾಕಿಂಗ್ ವೇಳೆ ಪಬ್‌ಜಿಯಲ್ಲಿ ಮುಳುಗಿ ಹೋಗಿದ್ದಾರೆ. ಪರಿಣಾಮ ಘೋರ ದುರಂತವೇ ನಡೆದುಹೋಗಿದೆ. ಕಿವಿಗೆ ಹೆಡ್‌ಫೋನ್ ಹಾಕಿ ಪಬ್‌ಜಿ ಆಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ರೈಲು ಹಳಿ ಬಳಿ ತೆರಳಿದ್ದು ಗೊತ್ತೆ ಆಗಿಲ್ಲ. ಅತ್ತ ರೈಲಿನ ಶಬ್ದ ಕೂಡ ಕೇಳಿಸಿಲ್ಲ. ಹೆಡ್‌ಫೋನ್ ಕಾರಣ ಪಬ್‌ಜಿ ಕಿವಿಯಲ್ಲಿ ಸದ್ದು ಮಾಡುತ್ತಿತ್ತು. 

ಅತ್ತ ವೇಗವಾಗಿ ಬಂದ ರೈಲು ಕ್ಷಣಾರ್ಧದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒರ್ವನ ಮೊಬೈಲ್ ಸಂಪೂರ್ಣ ಪುಡಿ ಪುಡಿಯಾಗಿದ್ದರೆ, ಮತ್ತೊಬ್ಬ ವಿದ್ಯಾರ್ಥಿಯ ಮೊಬೈಲ್‌ನಲ್ಲಿ ಪಬ್‌ಜಿ ಗೇಮ್ ಮುಂದುವರಿಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಮುನಾಪಾರ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಓರ್ವನ ಮೊಬೈಲ್‌ನಲ್ಲಿ ಪಬ್‌ಜಿ ಗೇಮ್ ಮುಂದುವರಿದಿತ್ತು ಎಂದಿದ್ದಾರೆ. 

ಪಬ್‌ಜಿ ಫ್ರೆಂಡ್ಸ್ ಮಾಡಿದ ಪುಂಡಾಟ; ಗ್ಯಾಂಗ್‌ರೇಪ್‌ನಿಂದ ಅಪ್ರಾಪ್ತೆ ಗರ್ಭಿಣಿ

ಪಬ್‌ಜಿ ಆಟದಿಂದ ಹಲವು ಅವಾಂತರಗಳು ಸಂಭವಿಸಿದೆ. ಹಲವು ಅವಘಡಗಳು ನಡೆದಿದೆ. ಯುವ ಸಮೂಹ ಹಾಗೂ ಮಕ್ಕಳು ದಾರಿ ತಪ್ಪುತ್ತಿರುವ ಅನೇಕ ಊದಾಹರಣೆಗಳಿವೆ. ಪಬ್‌ಜಿ ಮೂಲಕ ಪರಿಚಯವಾಗಿ ಲವ್ ಮಾಡಿ ಮೋಸ ಮಾಡಿದ ಘಟನೆಯೂ ನಡೆದಿದೆ. ವಿಜಯಪುರದ ಹುಡುಗಿ ಪಬ್‌ಜಿ ಆಟದಲ್ಲಿ ಪರಿಚಯವಾದ ಹುಡುಗ ಗೆಳೆತನ ಮಾಡಿ ಕೆಟ್ಟ ಘಟನೆ ನಡೆದಿದೆ. ಇನ್ನು ಪಬ್‌ಜಿಯಿಂದ 12 ವರ್ಷದ ಬಾಲಕನನ್ನು ಕೊಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಬ್‌ಜಿ ಆಟದಲ್ಲಿ ಸೋಲುಂಡ ಕಾರಣ ಜಗಳ ತಾರಕಕ್ಕೇರಿ 12 ವರ್ಷದ ಬಾಲಕನನ್ನು ಕೊಲೆ ಮಾಡಲಾಗಿತ್ತು. 

ಪಬ್‌ಜಿಯಲ್ಲಿ ಸೇಹ್ನಿತರಾದ ಬಳಿಕ ಬಾಲಕಿಯನ್ನು ಕರೆಸಿ ಅತ್ಯಾಚಾರ ಎಸಗಿದ ಪ್ರಕರಣ, ಪಬ್‌ಜಿ ಆಡಲು ಇಂಟರ್ನೆಟ್ ಹಾಕಿಸಿಕೊಡದ ಕಾರಣ ಬಾಲಕನ ಆತ್ಮಹತ್ಯೆ ಸೇರಿದಂತೆ ಹಲವು ದುರಂತ ಘಟನೆಗಳು ಪಬ್‌ಜಿಯಿಂದ ನಡೆದಿದೆ. ಪಬ್‌ಜಿ ಆಟದಿಂದ ಗೆಳೆಯರ ಜಗಳ ಬಳಿಕ ಹೊಡೆದಾಟ, ಜಟಾಪಟಿ, ಪೊಲೀಸ್ ಕೇಸ್ ದಾಖಲಾದ ಹಲವು ಘಟನೆಗಳು ರಾಜ್ಯದಲ್ಲಿ ನಡೆದಿದೆ. ಹೀಗಾಗಿ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಪಬ್‌ಜಿ ಬಳಕೆಯನ್ನು ಮಿತವಾಗಿ, ಹಿತವಾಗಿ ಮಾಡಿದರೆ ಒಳಿತು.