ಭೂಪಾಲ್(ಅ. 16) ಪಬ್ ಜಿ ಹುಚ್ಚಾಟ ಬ್ಯಾನ್ ಆಗಿದ್ದರೂ ಅದರಿಂದಾಗುತ್ತಿರುವ ಪರಿಣಾಮಗಳು ಮಾತ್ರ ಲೆಕ್ಕಕ್ಕೆ ಇಲ್ಲ. ಪಬ್ ಜಿ ನೆಪದಲ್ಲಿ  ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಪಬ್ ಜಿ ಗೇಮ್ ಅಡುವಾಗ ಆನ್ ಲೈನ್ ಮೂವರು ಬಾಲಕಿಗೆ ಸ್ನೇಹಿತರಾಗಿದ್ದರು. ಕಳೆದ ತಿಂಗಳು ಬಾಲಕಿಯನ್ನು ರಂಭಾನಗರಕ್ಕೆ ಕರೆಸಿಕೊಂಡ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿಕೊಂಡಿದ್ದರು.

ಸಹಪಾಠಿ ಮೇಲೆ ಅತ್ಯಾಚಾರ ಎಸಗಿ ಹಣ ದೋಚಿದ್ದ ಖದೀಮರು ಅಂದರ್

ಅತ್ಯಾಚಾರದ ವಿಷಯವನ್ನು ಬಹಿರಂಗ ಪಡಿಸಿದರೇ ವಿಡಿಯೋವನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಂಧಿತ ಮೂವರು ಆರೋಪಿಗಳು 18 ರಿಂದ 19 ವರ್ಷದವರಾಗಿದ್ದು, ರಂಭಾ ನಗರದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳು ಪದೇ ಪದೇ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾರೆ.   ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ. ಈ ವಿಚಾರವನ್ನು  ಅಪ್ರಾಪ್ತೆ ತನ್ನ ತಾಯಿಗೆ  ತಿಳಿಸಿದ್ದಾಳೆ. ತಾಯಿ ನಂತರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಫುಜೈಲ್, ರಿಜ್ವಾನ್ ಖಾನ್ ಮತ್ತು ಫರ್ಹಾನ್ ಅಹ್ಮದ್ ಎಂದು ಗುರುತಿಸಲಾಗಿದೆ.