Hubballi: ನಕಲಿ ದಾಖಲೆ ಪಡೆದು ಸಾಲ: ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್
* ಎಸ್‌ಬಿಐ ಶಾಖೆಯ ಹಿಂದಿನ ವ್ಯವಸ್ಥಾಪಕಿ ಸಂಧ್ಯಾ ಟಿ.ಸಿ. ಬಂಧನ
* ನಕಲಿ ಸಹಿ ಮಾಡಿದ ವೇತನ ಪ್ರಮಾಣ ಪತ್ರ ಪಡೆದು ಸಾಲ ಮಂಜೂರು ಮಾಡಿದ್ದ ಸಂಧ್ಯಾ
* ಆರೋಪಿಯನ್ನು ಹಾಸನದಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಪೊಲೀಸರು
ಹುಬ್ಬಳ್ಳಿ(ಮಾ.08): ನಕಲಿ ದಾಖಲೆ(Fake Documents) ಪಡೆದು 35 ಲಕ್ಷ ರು. ಸಾಲ ಮಂಜೂರು ಮಾಡಿದ್ದ ಆರೋಪದಡಿ ಮಧುರಾ ಕಾಲನಿ ಎಸ್‌ಬಿಐ(SBI) ಶಾಖೆಯ ಹಿಂದಿನ ವ್ಯವಸ್ಥಾಪಕಿ ಸಂಧ್ಯಾ ಟಿ.ಸಿ. ಅವರನ್ನು ಕೇಶ್ವಾಪುರ ಠಾಣೆ ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ.
ಸಂಧ್ಯಾ ಟಿ.ಸಿ. 2019ರಲ್ಲಿ ನಕಲಿ ಸಹಿ ಮಾಡಿದ ವೇತನ ಪ್ರಮಾಣ ಪತ್ರ ಪಡೆದು ಸಾಲ ಮಂಜೂರು ಮಾಡಿದ್ದರು. ಸುಮಿತ್ರಾ ಕೊಂಡಪಲ್ಲಿ, ಲಕ್ಷ್ಮೀ ಯರಗುಂಟಿ, ವಿದ್ಯಾವತಿ ಹೊಲ್ಲೂರ, ಪರಮೇಶ್ವರಪ್ಪ ಮೇಲಿನಮನಿ, ಮಾರೆಪ್ಪ ಮಾದರ, ನಾಗಮ್ಮ ಕರೆಪ್ಪ ಮತ್ತು ಅಜಾಜ್ ಅಹ್ಮದ್ ಶೇಖ್ ಎಂಬುವರಿಗೆ ತಲಾ 5 ಲಕ್ಷ ರು.ನಂತೆ ಒಟ್ಟು 35 ಲಕ್ಷ ರು. ಸಾಲ(Loan) ಮಂಜೂರು ಮಾಡಿದ್ದರು ಎಂದು ಕೇಶ್ವಾಪುರ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಆರೋಪಿಯನ್ನು ಶನಿವಾರ ಹಾಸನದಲ್ಲಿ(Hassan) ಬಂಧಿಸಿ(Arrest), ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
Crime News: ಬಾಡಿಗೆ ನೆಪದಲ್ಲಿ ಕ್ಯಾಮರಾ ಎಗರಿಸುತ್ತಿದ್ದ ಕಿಡಿಗೇರಿ ಸೆರೆ
ಯುವ ಜೋಡಿ ಸೇರಿ ಮೂವರ ಬಂಧನ: 7.76 ಕೋಟಿ ರು. ಡ್ರಗ್ಸ್ ವಶ
ಬೆಂಗಳೂರು: ನಗರದಲ್ಲಿ ಮಾದಕವಸ್ತು ಹಾಶೀಶ್ ಆಯಿಲ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಯುವ ಜೋಡಿ ಸೇರಿದಂತೆ ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು(Drugs Peddlers) ಹುಳಿಮಾವು ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಮಡಿವಾಳದ ವಿಕ್ರಂ ಅಲಿಯಾಸ್ ವಿಕ್ಕಿ(23), ಕೇರಳದ(Kerala) ಕೊಟ್ಟಾಯಂನ ಸಿಗಿಲ್ ವರ್ಗಿಸ್ ಮಂಪರಾಂಪಿಲ್(23) ಹಾಗೂ ಕೊಯಮತ್ತೂರಿನ ವಿಷ್ಣುಪ್ರಿಯ(22) ಬಂಧಿತರು(Arrest). ಆರೋಪಿಗಳಿಂದ(Accused) ಸುಮಾರು 7.76 ಕೋಟಿ ರು. ಮೌಲ್ಯದ 12 ಕೆ.ಜಿ. 940 ಗ್ರಾಂ ತೂಕದ ಹಾಶೀಶ್ ಆಯಿಲ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾ.5ರಂದು ಬೆಳಗ್ಗೆ 8.30ರ ಸುಮಾರಿಗೆ ಬಿಟಿಎಂ ಲೇಔಟ್ 4ನೇ ಹಂತದ ಅರಕೆರೆ ಗ್ರಾಮದ ಕಾರ್ ಪಾರ್ಕ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಇದರ ಆಧಾರದ ಮೇಲೆ ಹುಳಿಮಾವು ಠಾಣೆ ಇನ್ಸ್‌ಪೆಕ್ಟರ್ ಎಲ್.ಟಿ.ಚಂದ್ರಕಾಂತ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ಕೈಗೊಂಡು ವಿಕ್ರಂನನ್ನು ಬಂಧಿಸಿ, 80 ಗ್ರಾಂ ತೂಕದ ಹಾಶೀಶ್ ಆಯಿಲ್ ಜಪ್ತಿ ಮಾಡಿದೆ. ಬಳಿಕ ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಮನೆಯಲ್ಲಿ ಬಚ್ಚಿಟ್ಟಿದ್ದ 2 ಕೆ.ಜಿ. 360 ಗ್ರಾಂ ತೂಕದ ಹಾಶೀಶ್ ಆಯಿಲ್ ಜಪ್ತಿ ಮಾಡಲಾಗಿದೆ. ಅಂತೆಯೇ ಈತ ನೀಡಿದ ಮಾಹಿತಿ ಆಧರಿಸಿ ಉಳಿದಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Theft Cases in Bengaluru: ಬೀಗ ಹಾಕಿದ್ದ ಮನೆಗಳಿಗೆ ಕನ್ನ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್
ಪ್ರೇಮಿಗಳ ದಂಧೆ:
ಆರೋಪಿಗಳಾದ ಕೇರಳ ಮೂಲದ ಸಿಗಿಲ್ ಮತ್ತು ತಮಿಳುನಾಡು(Tamil Nadu) ಮೂಲದ ವಿಷ್ಣುಪ್ರಿಯ ಪ್ರೇಮಿಗಳಾಗಿದ್ದು, ಕಳೆದ ಮೂರು ತಿಂಗಳಿಂದ ನಗರದ ಕೊತ್ತನೂರಿನ ಕುವೆಂಪು ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಂನಿಂದ ಹಾಶೀಶ್ ಆಯಿಲ್ ತರಿಸಿಕೊಂಡು ಪ್ಲಾಸ್ಟಿಕ್‌ನ ಸಣ್ಣ ಕಂಟೈನರ್‌ಗಳಲ್ಲಿ ತುಂಬಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ವಿಚಾರಣೆ ವೇಳೆ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ 10.5 ಕೆ.ಜಿ. ಗ್ರಾಂ ತೂಕದ ಹಾಶೀಶ್ ಆಯಿಲ್ ಜಪ್ತಿ ಮಾಡಲಾಗಿದೆ.
ಆರೋಪಿ ವಿಕ್ರಂ ಇವರ ಬಳಿಯೇ ಹಾಶೀಶ್ ಆಯಿಲ್ ಖರೀದಿಸಿ ಮಾರಾಟ ಮಾಡುತ್ತಿದ್ದ. ಇದೇ ರೀತಿ ಹಲವರು ಗಿರಾಕಿಗಳಿಗೆ ಈ ಆರೋಪಿಗಳು ಹಾಶೀಶ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯಿದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟುಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.