Asianet Suvarna News Asianet Suvarna News

Belagavi: ಸೈನಿಕ ಸತ್ಯಪ್ಪನ ಮಾನಸಿಕ ಅಸ್ವಸ್ಥತೆ BSF ಯೋಧರ ಹತ್ಯೆಗೆ ಕಾರಣ?

*  ರಜೆಯಲ್ಲಿ ಬಂದಾಗ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟು
*  ಇದರಿಂದ ಆತನ ನಡವಳಿಕೆಯಲ್ಲಿ ಬದಲಾವಣೆ
*  ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ 
 

Satyappa Mental Illness is the Cause of the Murder of BSF Soldiers grg
Author
First Published Mar 8, 2022, 12:35 PM IST

ಶ್ರೀಶೈಲ ಮಠದ

ಬೆಳಗಾವಿ(ಮಾ.08):  ಪಂಜಾಬಿನ(Pujab) ಅಮೃತಸರ ಅಟ್ಟಾರಿ ಗಡಿಯ ಖೇಸರ್‌ನಲ್ಲಿ ಭಾನುವಾರ ಬೆಳಗ್ಗೆ ಬಿಎಸ್‌ಎಫ್‌ ಶಿಬಿರದಲ್ಲಿ ಕರ್ತವ್ಯನಿರತ ಸಶಸ್ತ್ರ ಸಜ್ಜಿತ ತನ್ನ ಸಹಚರರ ಮೇಲೆಯೇ ಗುಂಡಿನ ದಾಳಿ ನಡೆಸಿ, ತಾನೂ ಗುಂಡಿಗೆ ಬಲಿಯಾದ ಬೆಳಗಾವಿ(Belagavi) ಜಿಲ್ಲೆಯ ಹಳೆವಂಟಮೂರಿಯ ಯೋಧ(Soldier) ಸತ್ಯಪ್ಪ ಸಿದ್ದಪ್ಪ ತಿಲಾರಗಿ (33) ಕರ್ತವ್ಯಕ್ಕೆ ಹೋಗುವ ಮುಂಚೆ ಕಾಲು ಜಾರಿ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಇದರಿಂದ ಆತನ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಸತ್ಯಪ್ಪ 13 ವರ್ಷದಿಂದ ಬಿಎಸ್‌ಎಫ್‌ನಲ್ಲಿದ್ದ(BSF) ಮೂರು ತಿಂಗಳ ಹಿಂದಷ್ಟೇ ಆತ 1 ತಿಂಗಳು ರಜೆ ಮೇಲೆ ಊರಿಗೆ ಬಂದಿದ್ದ. ಈ ಸಂದರ್ಭದಲ್ಲಿ ಆತ ಕಾಲು ಜಾರಿ ಬಿದ್ದಿದ್ದ. ಇದರಿಂದಾಗಿ ತಲೆಗೆ ತೀವ್ರ ಪೆಟ್ಟಾಗಿತ್ತು. ಈ ಘಟನೆ ಬಳಿಕ ಆತನ ನಡುವಳಿಕೆಯಲ್ಲಿ ಬದಲಾವಣೆಯಾಯಿತು. ಆತನಿಗೆ ಬೆಳಗಾವಿಯ ವಿವಿಧ ಆಸ್ಪತ್ರೆ, ಧಾರವಾಡದ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ(Treatment) ಕೊಡಿಸಲಾಯಿತು. ಆದರೆ, ಆತನ ಮಾನಸಿಕ ಆರೋಗ್ಯದಲ್ಲಿ(Mental Health) ಸುಧಾರಣೆ ಕಂಡುಬರಲಿಲ್ಲ ಎನ್ನುತ್ತಾರೆ ಕುಟಂಬಸ್ಥರು.

ಸವದತ್ತಿ: ಪ್ರೀತಿಗಾಗಿ ಸಿಆರ್‌ಪಿಎಫ್‌ ಯೋಧ ಆತ್ಮಹತ್ಯೆ

ರಜೆ ಪೂರ್ಣಗೊಂಡರೂ ಕರ್ತವ್ಯಕ್ಕೆ ತೆರಳಿರಲಿಲ್ಲ. ಆತನ ವೈದ್ಯಕೀಯ ವರದಿಗಳನ್ನು ಬಿಎಸ್‌ಎಫ್‌ ಗಮನಕ್ಕೆ ತರಲಾಗಿತ್ತು. ಆತನಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೂ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಸತ್ಯಪ್ಪ ಸಹೋದರ ಕೆಂಪಣ್ಣ ತಿಲಾರಗಿ ತಿಳಿಸಿದರು.

ಶ್ರೀನಗರದಲ್ಲಿ ಹಿಮಪಾತದಡಿ ಸಿಲುಕಿ ವಿರಾಜಪೇಟೆ ಯೋಧ ಸಾವು

ವಿರಾಜಪೇಟೆ: ಸೇನೆಯಿಂದ ನಿವೃತ್ತಿಯಾಗಿ, ಮರಳಿ ದೇಶ ಸೇವೆಗೆ ಗಡಿಕಾಯಲು ಹೋಗಿದ್ದ ವಿರಾಜಪೇಟೆಯ ಯೋಧರೊಬ್ಬರು(Soldier) ಶ್ರೀನಗರದಲ್ಲಿ ಕರ್ತವ್ಯನಿರತರಾಗಿದ್ದಾಗ ಹಿಮಪಾತದಲ್ಲಿ(Snowfall) ಸಿಲುಕಿ ಮೃತಪಟ್ಟ ಘಟನೆ ಫೆ.23ನ ರಂದು ನಡೆದಿತ್ತು.

ವಿರಾಜಪೇಟೆ(Virajpet) ಮೀನುಪೇಟೆಯ ಹುಲ್ಲು ವ್ಯಾಪಾರಿ ದಿವಂಗತ ಉಮ್ಮರ್‌ ಮತ್ತು ಆಶಿಯಾ ದಂಪತಿ ಪುತ್ರ ಹವಲ್ದಾರ್‌ ಯು.ಅಲ್ತಾಫ್‌ ಅಹಮ್ಮದ್‌ (37)(Altaf Ahmed) ಮೃತ ಯೋಧ. ವಿರಾಜಪೇಟೆಯ ಕಾಲೇಜಲ್ಲಿ ಪಿಯುಸಿ ಮುಗಿಸಿದ್ದ ಅಲ್ತಾಫ್‌ ನಂತರ ಸೇನೆ(Army) ಸೇರಿಕೊಂಡಿದ್ದರು. 

ಎಓಸಿ ರೆಜಿಮೆಂಟ್‌ನಲ್ಲಿ(AOC Regiment) ಕರ್ತವ್ಯದಲ್ಲಿದ್ದ ಅಲ್ತಾಫ್‌ ಅವರು 16 ವರ್ಷ ಸೇವೆ ಸಲ್ಲಿಸಿ ನಂತರ ನಿವೃತ್ತರಾಗಿದ್ದರು. ಬಳಿಕ ವಿರಾಜಪೇಟೆ ಪೆರುಂಬಾಡಿಯಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಾಣಕ್ಕೂ ಮುಂದಾಗಿದ್ದರು. ಈ ಮಧ್ಯೆ ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ಮರು ಸೇರ್ಪಡೆಗೊಂಡು ಶ್ರೀನಗರದಲ್ಲಿ(Srinagar) ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ತಾಫ್‌ ಅವರಿಗೆ ಇಬ್ಬರು ಪುಟ್ಟಮಕ್ಕಳಿದ್ದಾರೆ. ಅಲ್ತಾಫ್‌ ಅವರ ಅಂತಿಮ ವಿಧಿ-ವಿಧಾನಗಳು ವಿರಾಜಪೇಟೆಯ ಮಲಬಾರ್‌ ರಸ್ತೆಯಲ್ಲಿರುವ ಖಬರಿಸ್ತಾನದಲ್ಲಿ ಗುರುವಾರ ನೆರವೇರಲಿವೆ ಎಂದು ಹೇಳಲಾಗಿತ್ತು. 

ಅಳ್ನಾವರ: ನೀರೆಂದು ವಿಷ​ ಸೇ​ವಿಸಿ ಯೋಧ ಸಾವು

ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾದಾಮಿ ಯೋಧ ಸಾವು

ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ(Jammu- Kashmir) ಹಾವು ಕಚ್ಚಿ ಬಾಗಲಕೋಟೆ(Bagalkot) ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಯೋಧನೊಬ್ಬ ಮೃತಪಟ್ಟ ಘಟನೆ ಸೆ.08 ರಂದು ನಡೆದಿತ್ತು. ಚಿದಾನಂದ್ ಹಲಕುರ್ಕಿ(25) ಎಂಬುವರೇ ಕಾವು ಕಡಿತದಿಂದ ಸಾವನ್ನಪ್ಪಿದ ಯೋಧ.   ಮೃತಯೋಧ ಕಳೆದ 6 ವರ್ಷಗಳಿಂದ ಮರಾಠಾ ರೆಜಿಮೆಂಟ್ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯದ ಮೇಲಿದ್ದಾಗ ಹಾವು ಕಚ್ಚಿದ ಪರಿಣಾಮ ಚಿದಾನಂದ್ ಸಾವನ್ನಪ್ಪಿದ್ದರು. 

ಬಾದಾಮಿ ಯೋಧ ಅಮೃತಸರದಲ್ಲಿ ಸಾವು

ಬಾದಾಮಿ(Badami): ಕಳೆದ ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ರಜೆಯ ಮೇಲೆ ಬಂದು ಕರ್ತವ್ಯಕ್ಕೆ ಮರಳಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಬಿಎಸ್‌ಎಫ್‌ ಯೋಧ ಅನಾರೋಗ್ಯದಿಂದ ಪಂಜಾಬ್‌ನ ಅಮೃತಸರದ ಬಿಎಸ್‌ಎಫ್‌ ಕ್ಯಾಂಪ್‌ನಲ್ಲಿ ಮೃತಪಟ್ಟ ಘಟನೆ ಕಳೆದ ವರ್ಷದ ಆ.03 ರಂದು ನಡೆದಿತ್ತು. 
 

Follow Us:
Download App:
  • android
  • ios