ಉಡುಪಿ(ಜು. 12) ಸಿನಿಮಾ ಹೂಡಿಕೆದಾರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ  ನಾಗೇಶ್ ಕುಮಾರ್ (64) ನೇಣಿಗೆ ಶರಣಾಗಿದ್ದಾರೆ.

ಡೆತ್ ನೋಟ್ ಬರೆದಿಟ್ಟು ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  'ನನ್ನನ್ನು  ಕ್ಷಮಿಸಿ. ಎಲ್ಲರಿಗೂ ಒಳ್ಳೆಯದಾಗಲಿ.  ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಡೆತ್  ನೋಟ್ ಬರೆದಿಟ್ಟಿದ್ದಾರೆ.

ದುನಿಯಾ ವಿಜಯ್ ಸಲಗದ ಯುವ ನಟ ಸುಶೀಲ್ ಗೌಡ  ಆತ್ಮಹತ್ಯೆ

ಚಲನಚಿತ್ರ ನಿರ್ದೇಶನಕ್ಕೆ 28 ಲಕ್ಷ ರೂ. ನಾಗೇಶ್ ಹೂಡಿದ್ದರು. ಭೂಮಿಕ ಪ್ರೊಡಕ್ಷನ್’ ಹೆಸರಿನ ಭರತ್ ನಾವುಂದ ನಿರ್ದೇಶನದ  ಚಲನಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದರು.  ಹಣ ವಾಪಾಸ್ ಬಾರದ ಹಿನ್ನಲೆಯಲ್ಲಿ ನಿರ್ಮಾಪಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬೀಜಾಡಿ ಗ್ರಾಮದ ಲಕ್ಷ್ಮೀ ಗ್ಲಾಸ್ ಫ್ಲೈವುಡ್ ಅಂಗಡಿ ಹೊರಗಡೆ ನಾಗೇಶ್ ನೇಣು ಹಾಕಿಕೊಂಡಿದ್ದಾರೆ. ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.