Shivamogga: ಮೂವರು ಬೈಕ್ ಕಳ್ಳರ ಬಂಧನ: ಸಾಗರ ಪೋಲಿಸರ ಕಾರ್ಯಾಚರಣೆ

ಶಿವಮೊಗ್ಗ ದಾವಣಗೆರೆ ಮತ್ತು ಹಾಸನ ಜಿಲ್ಲೆಯ ಹಲವೆಡೆ ಬೈಕ್ ಕಳವು ಮಾಡುತ್ತಿದ್ದ, ಮೂವರು ಕಳ್ಳರನ್ನು ಸಾಗರ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳಿಂದ ಆರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

sagara police arrested 3 accused for bike theft gvd

ಶಿವಮೊಗ್ಗ (ಜೂ.29): ಶಿವಮೊಗ್ಗ ದಾವಣಗೆರೆ ಮತ್ತು ಹಾಸನ ಜಿಲ್ಲೆಯ ಹಲವೆಡೆ ಬೈಕ್ ಕಳವು ಮಾಡುತ್ತಿದ್ದ, ಮೂವರು ಕಳ್ಳರನ್ನು ಸಾಗರ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳಿಂದ ಆರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಶಿಕಾರಿಪುರ ತಾಲೂಕು ಅಂಜನಾಪುರದ ಸಮೀರ್, ಶಿವಮೊಗ್ಗದ ಶಾಂತಿನಗರದ ಸೊಹೇಲ್, ಟ್ಯಾಂಕ್ ಮೊಹಲ್ಲಾದ ಡ್ರೈವರ್ ಜುನೈದ್ ಖಾನ್ ಬಂಧಿತ ಆರೋಪಿಗಳು. ಈ ಹಿಂದೆ ಹೊಸನಗರ ತಾಲೂಕು ಮಾರುತಿಪುರದ ವ್ಯಕ್ತಿಯ ಬೈಕ್‌ನ್ನು ಆರೋಪಿಗಳು ಸಾಗರದ ಗಾಂಧಿ ನಗರದಲ್ಲಿ ಕಳುವು ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳು ಪತ್ತೆಹಚ್ಚಿ ಬಂಧಿಸಿದ್ದಾರೆ. ಇನ್ನು ಸಾಗರ, ಭದ್ರಾವತಿ, ಹರಿಹರ, ದಾವಣಗೆರೆಯ ವಿದ್ಯಾನಗರ, ಬಡಾವಣಿ ಠಾಣೆ ಸೇರಿದದಂತೆ ಹಾಸನದಲ್ಲಿ ಆರೋಪಿಗಳು ಬೈಕ್ ಕಳವು ಮಾಡಿದ್ದರು.

ಬೈಕ್‌ ವೀಲಿಂಗ್ ಮಾಡುತ್ತಿದ್ದವರ ಬಂಧನ: ಟ್ರಾಫಿಕ್ ನಿಯಮ ಪಾಲಿಸದೇ ಬೈಕ್‌ನಲ್ಲಿ ಶೋಕಿ ಮಾಡುವ ಪುಂಡರಿಗೆ ಕಾಫಿನಾಡಿನಲ್ಲಿ ಪೊಲೀಸರು ಚುರುಕು ಮುಟ್ಟಿಸಿದ್ದಾರೆ. ರಸ್ತೆಯಲ್ಲಿ ವೀಲಿಂಗ್ ಮಾಡಲು ಹೋಗಿ ಎಷ್ಟೋ ಯುವಕರು ತಮ್ಮ ಪ್ರಾಣ ಕಳೆದುಕೊಂಡಿರುವ ದೃಶ್ಯಗಳು ನಮ್ಮ ಕಣ್ಣ ಮುಂದೆ ಜರುಗಿದರೂ ಕೂಡ ಯುವ ಜನತೆ ಇನ್ನೂ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿಲ್ಲ. ಚಿಕ್ಕಮಗಳೂರು _ಕಡೂರು ರಾಷ್ಟ್ರೀಯ ಹೆದ್ದಾರಿಯ ನಡು ರಸ್ತೆಯಲ್ಲಿ  ಯುವಕರು ಬೈಕ್ ವೀಲಿಂಗ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆಫ್ ಹೆಲ್ಮೆಟ್, ಶೋಕಿ ಸೈಲೆನ್ಸರ್: ಪುಡಿ-ಪುಡಿ ಮಾಡಿದ ರೋಡ್‌‌ ರೋಲರ್

ಐದು ಬೈಕ್‌ಗಳಲ್ಲಿ 10 ಯುವಕರು ವೀಲಿಂಗ್: ಚಿಕ್ಕಮಗಳೂರು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಮಾಡಿದ್ದ ಐದು ಬೈಕ್‌ಗಳನ್ನ ಸಖರಾಯಪಟ್ಟಣ ಪೊಲೀಸರು ಸೀಜ್ ಮಾಡಿದ್ದಾರೆ. ನಗರದ ಮಧ್ಯಾಹ್ನ 12 ಗಂಟೆಗೆ ಐದು ಬೈಕ್‌ಗಳಲ್ಲಿ 10 ಯುವಕರು ನಡುರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದಾರೆ. ಆ ಬೈಕ್‌ಗಳು ಚಿಕ್ಕಮಗಳೂರು ನಗರ ದಾಟಿ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣಾ ವ್ಯಾಪ್ತಿಗೆ ಹೋಗುವಷ್ಟರಲ್ಲಿ ಸಖರಾಯಪಟ್ಟಣ ಪೊಲೀಸರು ಹಿಡಿದು ಸೀಜ್ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿ, ಎಐಟಿ ವೃತ್ತ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ಯುವಕರು ರೇಸ್‌ನಲ್ಲಿ ವೀಲಿಂಗ್ ಮಾಡಿದ್ದರು. 

ಮಂಡ್ಯ: ಆಯತಪ್ಪಿ ಬಿದ್ದ ಸ್ಕೂಟರ್‌ಗೆ ಬೆಂಕಿ, ಬೈಕ್ ಸವಾರ ಸಾವು

ನಡು ರಸ್ತೆಯಲ್ಲಿ ವೀಲಿಂಗ್: ನಡು ರಸ್ತೆಯಲ್ಲಿ ಯುವಕರು ರೈಡ್ ಮಾಡುತ್ತಿದ್ದ ಬೈಕ್ಗಳ ವೇಗ ಹಾಗೂ ಅಬ್ಬರ ಕಂಡ ಇತರೆ ವಾಹನಗಳ ಸವಾರರು ಆತಂಕದಿಂದ ತಮ್ಮ ವಾಹನಗಳನ್ನ ರಸ್ತೆ ಬದಿಗೆ ನಿಲ್ಲಿಸಿಕೊಂಡು ಅವರು ಹೋದ ಮೇಲೆ ಹೋಗಿದ್ದಾರೆ. ಯುವಕರು ಈ ಬೈಕ್ ವೀಲಿಂಗ್ ದೃಶ್ಯವನ್ನ ಸ್ಥಳಿಯ ವಾಹನ ಸವಾರರು ರೆಕಾರ್ಡ್ ಮಾಡಿದ್ದರು. ನಡು ಮಧ್ಯಾಹ್ನ ರಸ್ತೆ ಮಧ್ಯೆಯೇ ಈ ರೀತಿ ಬೈಕ್ ವೀಲಿಂಗ್ ಮಾಡುವುದನ್ನ ಕಂಡು ಸಾರ್ವಜನಿಕರು ಇವರಿಗೆ ಯಾರ ಭಯವೂ ಇಲ್ಲ. ಹೇಳೋರು-ಕೇಳೋರು ಯಾರಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಯುವಕರ ಇಂತಹಾ ಮೋಜು-ಮಸ್ತಿನ ಹುಚ್ಚಾಟದಿಂದ ಯಾರಿಗಾದರೂ ಡಿಕ್ಕಿಯೊಡೆದರೆ ಏನಾಗಬಹುದು ಎಂದು ಗಾಬರಿಯಾಗಿದ್ದರು.

Latest Videos
Follow Us:
Download App:
  • android
  • ios