ಕಡಿಮೆ ಬೆಲೆ ಅಂತಾ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವ ಮುನ್ನ ಎಚ್ಚರ ಎಚ್ಚರ!

ನಗರದ ಸಾರ್ವಜನಿಕ ಸ್ಥಳ, ಪಾರ್ಕಿಂಗ್, ಬಸ್ ನಿಲ್ದಾಣ, ರಸ್ತೆಬದಿ ನಿಲ್ಲಿಸಿದ ಬೈಕ್‌ಗಳ ಹ್ಯಾಂಡ್‌ಲಾಕ್ ಮುರಿದು ಕ್ಷಣ ಮಾತ್ರದಲ್ಲಿ ಕದ್ದು ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಕಳ್ಳರನ್ನ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

bike thieves arrested by chikkamagaluru police rav

ಚಿಕ್ಕಮಗಳೂರು (ಜು.2): ನಗರದ ಸಾರ್ವಜನಿಕ ಸ್ಥಳ, ಪಾರ್ಕಿಂಗ್, ಬಸ್ ನಿಲ್ದಾಣ, ರಸ್ತೆಬದಿ ನಿಲ್ಲಿಸಿದ ಬೈಕ್‌ಗಳ ಹ್ಯಾಂಡ್‌ಲಾಕ್ ಮುರಿದು ಕ್ಷಣ ಮಾತ್ರದಲ್ಲಿ ಕದ್ದು ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಕಳ್ಳರನ್ನ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಬೈಕ್ ಕಾಣೆಯಾದ ಬಗ್ಗೆ ದೂರುಗಳು ಬಂದ ಹಿನ್ನೆಲೆ ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸ್ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು. ಕಾರ್ಯಾಚರಣೆ ವೇಳೆ ಖಯೂಮ್ ಪಾಷಾ ಅಲಿಯಾಸ್ ಅಬ್ದುಲ್ ರೆಹಮಾನ್, ಧನು ಶೆಟ್ಟಿ, ಉಮರ್ ಬೆಗ್ ಆರೋಪಿಗಳನ್ನ ಬಂಧಿಸಿದ ಪೊಲೀಸರು. ಬಂಧಿತರಿಂದ ಬರೋಬ್ಬರಿ 30ಕ್ಕೂ ಹೆಚ್ಚು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೈಕ್ ಗಳನ್ನ ವಶಕ್ಕೆ ಪಡೆದ ಪೊಲೀಸರು. ದಾವಣಗೆರೆ, ಚಿಕ್ಕಮಗಳೂರು, ಹೊನ್ನಳ್ಳಿ, ಕಡೂರು ಸೇರಿದಂತೆ ರಾಜ್ಯದ ಹಲವೆಡೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್. ರಸ್ತೆ ಬದಿ ನಿಲ್ಲಿಸುತ್ತಿದ್ದ ಬೈಕ್‌ ಗಳೇ ಕಳ್ಳರ ಟಾರ್ಗೆಟ್. 

ಸ್ನೇಹಿತನ ಮದುವೆಗೆ ರಾಮಮಂದಿರ ಹಾಡು ಹಾಕಿದ್ದಕ್ಕೆ ಅನ್ಯಕೋಮಿನ ಗುಂಪಿನಿಂದ ಯುವಕನ ಮೇಲೆ ಹಲ್ಲೆ?

ಮೊದಲು ಬೈಕ್‌ಗಳನ್ನ ಕದಿಯುತ್ತಿದ್ದ ಖದೀಮರು. ಬಳಿಕ ಕದ್ದ ಬೈಕ್‌ಗಳನ್ನ ಭದ್ರಾವತಿಯ ಗುಜರಿ ಅಂಗಡಿ ನಡೆಸುವ ಉಮರ್ ಬೇಗ್ ಎಂಬುವವನಿಗೆ ಮಾರುತ್ತಿದ್ದ ಆರೋಪಿಗಳು. ಉಮರ್ ಬೇಗ್ ಬೈಕ್ ಖರೀದಿಸಿ ಬೈಕ್‌ನ ಬಿಡಿಭಾಗಗಳನ್ನು ಬೇರ್ಪಡಿಸಿ ಗುಜುರಿವಸ್ತುಗಳನ್ನಾಗಿ ಮಾಡುತ್ತಿದ್ದಖದೀಮ. ಬಳಿಕ ಅದೇ ಗುಜುರಿ ವಸ್ತುಗಳನ್ನ ಒಟ್ಟುಗೂಡಿಸಿ  ಸೆಕೆಂಡ್ ಹ್ಯಾಂಡ್ ಬೈಕ್ ರೆಡಿ ಮಾಡುತ್ತಿದ್ದ ಆರೋಪಿ. ಬಳಿಕ ಕಡಿಮೆ ಬೆಲೆಗೆ ಬೈಕ್ ಮಾರಾಟದ ಬಗ್ಗೆ ಗ್ರುಪ್‌ಗಳಲ್ಲಿ ಹಂಚಿ ಜನರಿಗೆ ಸೆಕೆಂಡ್ ಹ್ಯಾಂಡ್ ಮಾರಾಟ. ಕಡಿಮೆ ಬೆಲೆಗೆ ಮಾರುಹೋದ ಜನರಿಂದ ನಕಲಿ ದ್ವಿಚಕ್ರ ವಾಹನಗಳ ಖರೀದಿ ನಡೆಯುತ್ತಿತ್ತು. ಇದೇ ರೀತಿ ಉಮರ್‌ ಬೇಗ್ ನಿಂದ ಹಲವಾರು ಸೆಕೆಂಡ್ ಬೈಕ್‌ಗಳು ಜನರಿಗೆ ಮಾರಾಟವಾಗಿದೆ. ಸದ್ಯ ಆರೋಪಿ ಉಮರ್‌ನಿಂದ ಸುಮಾರು 2.15 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿರುವ ಪೊಲೀಸರು. ಪ್ರಕರಣ ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios