ಸಚಿನ್ ತೆಂಡೂಲ್ಕರ್ ಭದ್ರತಾ ಸಿಬ್ಬಂದಿ ದೂರಿನ ಆಧಾರದ ಮೇಲೆ ಜುಲೈ 14 ರಂದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.

ಮುಂಬೈ ( ಜು. 17): ಭಾರತದ ಮಾಜಿ ಕ್ರಿಕೆಟಿಗ ಮತ್ತು ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ (Sachin Tendulkar)ಅವರ ಖಾಸಗಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ 32 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್ ಹಗರಣಕ್ಕೆ (Online Scam) ಬಲಿಯಾಗಿ 18,200 ರೂ.ಗಳನ್ನು ಕಳೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ದೂರಿನ ಆಧಾರದ ಮೇಲೆ ಜುಲೈ 14 ರಂದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

ದೂರುದಾರರ ಪ್ರಕಾರ, ಜುಲೈ 13 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನ (Kotak Mahindra bank) ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ವಂಚಕರೊಬ್ಬರು ತಮ್ಮ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಮಾಡಿ ಸಾಲದ ಅಗತ್ಯವಿದೆಯೇ ಎಂದು ಕೇಳಿದರು. ಸೆಕ್ಯೂರಿಟಿ ಗಾರ್ಡ್ ಗೆ ಹಣದ ಅವಶ್ಯಕತೆ ಇದ್ದ ಕಾರಣ ಸಾಲ ಪಡೆಯಲು ಒಪ್ಪಿಗೆ ನೀಡಿದ್ದಾರೆ.

ಸೈಬರ್ ವಂಚಕನು (Cyber Fraud) ತನ್ನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ನ ವಿವರಗಳನ್ನು ವಾಟ್ಸಾಪ್ ಸಂಖ್ಯೆಗೆ ಕಳುಹಿಸಲು ಕೇಳಿದ್ದ. ಅದರಂತೆ, ದೂರುದಾರರು ವಂಚಕ ಕೇಳಿದ ಎಲ್ಲಾ ವಿವರಗಳನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ:ಕೆಲಸ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ. ವಂಚನೆ: ಆನ್‌ಲೈನ್ ದೋಖಾ ಮಾಡುತ್ತಿದ್ದ ಮೂವರು ಅರೆಸ್ಟ್‌

ವಂಚಕರು ನಂತರ ಅವರಿಗೆ 10,000 ರೂಪಾಯಿಗಳನ್ನು ಕಳುಹಿಸಿದ್ದಾರೆ ಮತ್ತು ಭದ್ರತಾ ಸಿಬ್ಬಂದಿಯ ಕ್ರೆಡಿಟ್ ಕಾರ್ಡ್ (Credi Card) ವಿವರಗಳನ್ನು ಬಳಸಿ, ಅವರ ಖಾತೆಯಿಂದ 18,200 ರೂಪಾಯಿಗಳನ್ನು ಡೆಬಿಟ್ ಮಾಡಲು ಓಟಿಪಿಯನ್ನು ಜನರೇಟ್‌ ಮಾಡಿದ್ದಾರೆ. ನಂತರ ದೂರುದಾರರು ವಂಚಕ ಕೇಳಿದಂತೆ ಓಟಿಪಿಯನ್ನು ಹಂಚಿಕೊಂಡಿದ್ದು ಅವರ ಬ್ಯಾಂಕ್ ಖಾತೆಯಿಂದ 18,200 ರೂ.ಗಳನ್ನು ಡೆಬಿಟ್ ಮಾಡಲಾಗಿದೆ. ಬಳಿಕ ತಾನು ವಂಚನೆಗೊಳಗಾಗುತ್ತಿರುವುದನ್ನು ಅರಿತು ಭದ್ರತಾ ಸಿಬ್ಬಂದಿ ಸಹಾಯಕ್ಕಾಗಿ ಬಾಂದ್ರಾ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಆನ್‌ಲೈನ್‌ ಮೋಸದಿಂದ ಪಾರಾಗೋದು ಹೇಗೆ?: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯ ಕಳೆಯಲು ಪ್ರಾರಂಭಿಸುತ್ತಿದ್ದಂತೆ ವಂಚಕರು ಹೊಸ ವಿಧಾನಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಹೀಗಾಗಿ ಆನ್‌ಲೈನ್‌ ವ್ಯವಹಾರ ನಡೆಸೋವಾಗ ನಮ್ಮ ಹಣದ ಸುರಕ್ಷತೆ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಅನುಸರಿಸೋದು ಅಗತ್ಯ.

  • ನೀವು ಆನ್‌ಲೈನ್‌ ತಾಣದ ವ್ಯವಹಾರಗಳಿಗೆ ಒಟಿಪಿ ಅಗತ್ಯ. ಪ್ರತಿ ವ್ಯವಹಾರಕ್ಕೂ ನಿರ್ದಿಷ್ಟ ಒಟಿಪಿ ಅಥವಾ ಒನ್‌ ಟೈಮ್‌ ಪಾಸ್‌ವಾರ್ಡ್‌ ನಿಮ್ಮ ಮೊಬೈಲ್‌ಗೆ ರವಾನೆಯಾಗುತ್ತೆ. ಈ ಒಟಿಪಿಯನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ
  • ನಿಮಗೆ ಅಪರಿಚಿತ ವ್ಯಕ್ತಿ ಅಥವಾ ಸಂಸ್ಥೆ ಹೆಸರಿನಲ್ಲಿ ಮೇಲ್‌ ಬರಬಹುದು. ಯಾವುದೇ ಕಾರಣಕ್ಕೂ ಆ ಮೇಲ್‌ನಲ್ಲಿರೋ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಡಿ. 
  • ನಮ್ಮಲ್ಲಿ ಬಹುತೇಕರು ಕ್ರೆಡಿಟ್‌ ಹಾಗೂ ಡೆಬಿಟ್‌ಕಾರ್ಡ್‌ಗಳ ಮಾಹಿತಿ ಆನ್‌ಲೈನ್‌ ವೇದಿಕೆ ಹಾಗೂ ಆಪ್‌ಗಳಲ್ಲಿ ಸೇವ್‌ ಮಾಡಿಟ್ಟಿರುತ್ತಾರೆ. ಯಾವುದೇ ಕಾರಣಕ್ಕೂ ಆನ್‌ಲೈನ್‌ ವ್ಯವಹಾರ ನಡೆಸುವಾಗ ಬ್ರೌಸರ್‌ನಲ್ಲಿ ಆಟೋ ಫಿಲ್‌ ಅಥವಾ ಸೇವ್‌ ಆಯ್ಕೆ ಆಫ್ ಆಗಿರುವಂತೆ ನೋಡಿಕೊಳ್ಳಿ

ಇದನ್ನೂ ಓದಿ:ಆನ್​ಲೈನ್​ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!

  • ನಿಮ್ಮ ಮೊಬೈಲ್‌ ಜೊತೆ ಸಿಮ್‌ ಬಗ್ಗೆ ಕೂಡ ಎಚ್ಚರ ವಹಿಸಿ. ಸಿಮ್‌ ತದ್ರೂಪಿ ಸೃಷ್ಟಿಸಲು ಕೆಲವೇ ಕೆಲವು ನಿಮಿಷಗಳು ಸಾಕು. ಒಂದು ವೇಳೆ ನೀವು ನಿಮ್ಮ ಸಿಮ್‌ ಬಳಸದೆ ಹಾಗೇ ಬಿಟ್ಟಿದ್ದರೆ ಆನ್‌ಲೈನ್‌ ವಂಚಕರು ಅದೇ ಸಂಖ್ಯೆಯ ನಕಲಿ ಸಿಮ್‌ ಸೃಷ್ಟಿಸುವ ಸಾಧ್ಯತೆಯಿದೆ
  • ಸ್ಮಾರ್ಟ್‌ಫೋನ್ ಹಾಗೂ ಲ್ಯಾಪ್‌ಟ್ಯಾಪ್‌ನಂತಹ ಎಲೆಕ್ಟ್ರಾನನಿಕ ಸಾಧನಗಳನ್ನು ನಿಮ್ಮ ಅನುಪಸ್ಥಿತಿಯಲ್ಲಿ ಬೇರೆಯವರು ದುರ್ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ ನೀವು ಬಳಸುವ ಸಾಧನಗಳಲ್ಲಿ ಆಂಟಿ ವೈರಸ್‌ ಸಾಫ್ಟ್‌ವೇರ್‌ ಹಾಗೂ ಸೆಕ್ಯೂರಿಟಿ ಫೀಚರ್ಸ್ ಅಳವಡಿಸಲು ಮರೆಯಬೇಡಿ.‌
  • ವಂಚಕರು ಆರ್ಥಿಕ ಮಾಹಿತಿಗಳನ್ನು ಕದಿಯುವದರ ಜತೆಗೆ ತೀರಾ ಖಾಸಗಿ ವಿಷಯಗಳನ್ನು ಕೂಡ ಕದ್ದು, ದುರ್ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ ನಿಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ, ಜನ್ಮದಿನಾಂಕ ಮುಂತಾದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.