ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ಆಂಧ್ರಪ್ರದೇಶ ರಾಜ್ಯದ ವ್ಯಕ್ತಯೊಬ್ಬನ ಬಳಿ ಯಾವುದೇ ದಾಖಲೆಗಳಿಲ್ಲದ 28 ಲಕ್ಷ ರೂ. ನಗದು, 20 ಲಕ್ಷ ರೂ. ಮೌಲ್ಯದ 319 ಗ್ರಾಂ ಚಿನ್ನ ಹಾಗೂ 10 ಲಕ್ಷ ರೂ. ಮೌಲ್ಯದ 15 ಕೆ.ಜಿ. ಬೆಳ್ಳಿ ಪತ್ತೆಯಾಗಿದೆ.
ಬೆಂಗಳೂರು (ಮಾ.15): ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ಆಂಧ್ರಪ್ರದೇಶ ರಾಜ್ಯದ ವ್ಯಕ್ತಯೊಬ್ಬನ ಬಳಿ ಯಾವುದೇ ದಾಖಲೆಗಳಿಲ್ಲದ 28 ಲಕ್ಷ ರೂ. ನಗದು, 20 ಲಕ್ಷ ರೂ. ಮೌಲ್ಯದ 319 ಗ್ರಾಂ ಚಿನ್ನ ಹಾಗೂ 10 ಲಕ್ಷ ರೂ. ಮೌಲ್ಯದ 15 ಕೆ.ಜಿ. ಬೆಳ್ಳಿ ಪತ್ತೆಯಾಗಿದೆ. ಈ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ದಾಖಲೆಗಳಿಲ್ಲದೆ ವ್ಯವಹಾರ ನಡೆಸುತ್ತಿದ್ದ ದೊಡ್ಡ ತಿಮಿಂಗಲವೇ ಸಿಟಿ ಮಾರ್ಕೆಟ್ ಪೊಲೀಸರ ಬಲೆಗೆ ಬದ್ದಿದ್ದು, ಈ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ಅನುಮಾನಾಸ್ಪದವಾಗಿ ಬ್ಯಾಗ್ ಹಿಡಿದುಕೊಮಡು ಸುತ್ತಾಡುತ್ತಿದ್ದ ವ್ಯಕ್ತಿಯನ್ನು ನಿನ್ನೆ ಸಂಜೆ ಪೊಲೀಸರು ತಪಾಸಣೆ ಮಾಡಿದ್ದಾರೆ. ಈ ವೇಲೆ ಆಂಧ್ರಪ್ರದೇಶ ಮೂಲದ ಅಕ್ಷಯ್ ಎನ್ನುವ ವ್ಯಕ್ತಿ ಹಣ ಸಮೇತ ಸಿಕ್ಕಿ ಬಿದ್ದಿದ್ದಾನೆ. ಕೆ.ಆರ್.ಮಾರ್ಕೇಟ್ ಬಳಿಯ ಗ್ರೀನ್ ಬಜಾರ್ ನಲ್ಲಿ ಹಣ ಮತ್ತು ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಣ ಮತ್ತು ಚಿನ್ನವನ್ನು ಜ್ಯುವೆಲರಿ ಶಾಪ್‌ಗೆ ಕೊಡಲು ಬಂದಿದ್ದಾಗಿ ಹೇಳಿದ್ದಾರೆ. ಪೊಲೀಸರು ಅಕ್ಷಯ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
Bengaluru Crime: ಪ್ರೀತಿಸಿದ ಯುವತಿಗೆ ಮದುವೆ ಫಿಕ್ಸ್: ಮನೆಗೆ ನುಗ್ಗಿ ರೇಪ್ ಮಾಡಿ ಕೊಲೆಗೈದ ಪ್ರೇಮಿ
ಐಟಿ ಅಧಿಕಾರಿಗಳಿಗೆ ಮಾಹಿತಿ ರವಾನೆ: ಇನ್ನು ಅಕ್ಷಯ್ ಅವರ ಬ್ಯಾಗ್ ಅನ್ನು ತಪಾಸಣೆ ಮಾಡಿದಾಗ ಸುಮಾರು 28 ಲಕ್ಷ ರೂ. ನಗದು ಹಣಕ್ಕೆ ಹಾಗೂ 319 ಗ್ರಾಂ ಚಿನ್ನ ಮತ್ತು 15 ಕೆ.ಜಿ. ಬೆಳ್ಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ಆದ್ದರಿಂದ ಕೂಡಲೇ ಅಕ್ಷಯ್‌ನನ್ನು ಬೀಟ್ ಪೊಲೀಸರು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ನಂತರ ಈ ಬಗ್ಗೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಣ ಮತ್ತು ಚಿನ್ನಕ್ಕೆ ಸಂಬಂಧಿಸಿದಂತೆ ದಾಖಲೆ ಕೇಳುತ್ತಿದ್ದು, ಈ ಬಗ್ಗೆ ಐಟಿ ಸಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.
ಅನಧಿಕೃತ ಹಣ ಸಾಗಣೆ ಮೇಲೆ ನಿಗಾ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಕೆಲ ಸೂಚನೆ ನೀಡಿದೆ. ಆ ಬಗ್ಗೆ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಅಲರ್ಟ್ ಗೆ ಸೂಚಿಸಲಾಗಿದೆ. ಚುನಾವಣೆ ಆಸೆ, ಆಮಿಷಗಳ ಮುಕ್ತವಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಆದ್ದರಿಂದ ಅನಧಿಕೃತವಾಗಿ ಹಣ ಸಾಗಣೆ ಬಗ್ಗೆ ನಿಗಾವಹಿಸಲು ಚೆಕ್ ಪೋಸ್ಟ್‌ಗಳು ಹಾಗೂ ರೌಡಿ ಆಸಾಮಿಗಳ ಬಗ್ಗೆ ನಿಗಾವಹಿಸುತ್ತಿದ್ದೇವೆ. ಎಲ್ಲಾ ರೀತಿಯ ಬಂದೋ ಬಸ್ತ್ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
Bengaluru Crime: ಮದುವೆಯಾದ ಮಹಿಳೆ ಅನೈತಿಕ ಸಂಬಂಧ ನಿಲ್ಲಿಸಿದ್ದಕ್ಕೆ ಚಾಕು ಚುಚ್ಚಿದ
23 ಪ್ರಕರಣದ ಆರೋಪಿ ಕುಖ್ಯಾತ ಕಳ್ಳ ಇಮ್ರಾನ್ ಬಂಧನ: ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 23 ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳ ಇಮ್ರಾನ್ ಅನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 5 ಚೈನ್ ಸ್ನಾಚಿಂಗ್, ಮನೆ ಕಳ್ಳತನ ಸೇರಿದಂತೆ ಅನಧಿಕೃತವಾಗಿ 6 ಕೆಜಿ ಚಿನ್ನಾಭರಣ ತೆಗೆದುಕೊಂಡು ಹೋಗ್ತಿದ್ದ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯಿಂದ 1.5 ಕೆಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಜೊತೆಗೆ, ನಾಲ್ಕು ವಾಚ್ ಗಳು, 100 ಗ್ರಾಂ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ. ಈತ 2019 ರಿಂದಲೂ ಮನೆಗಳ್ಳತನದಲ್ಲಿ ಪಳಗಿದ್ದನು. ಮನೆಗಳಲ್ಲಿ ಕದ್ದ ಚಿನ್ನ ಹಾಗೂ ಚಿನ್ನಾಭರವನ್ನು ರಾಜಸ್ಥಾನದ ನೂರುಲ್ಲಾ ಎಂಬಾತನಿಗೆ ಮಾರಾಟ ಮಾಡುತ್ತಿದ್ದನು.
