Bengaluru Crime: ಮದುವೆಯಾದ ಮಹಿಳೆ ಅನೈತಿಕ ಸಂಬಂಧ ನಿಲ್ಲಿಸಿದ್ದಕ್ಕೆ ಚಾಕು ಚುಚ್ಚಿದ

ಮದುವೆಯಾಗಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಮುಂದುವರೆಸುವಂತೆ ಒತ್ತಾಯಿಸಿದ ವ್ಯಕ್ತಿಯೊಬ್ಬ, ತನ್ನ ಮಾಜಿ ಪ್ರೇಯಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದು ಚಾಕುವನ್ನು ಚುಚ್ಚಿ ವಿಕೃತಿಯನ್ನು ಮೆರೆದಿದ್ದಾನೆ.

Bengaluru Crime Married woman stabbed with knife for stopping adultery sat

ಬೆಂಗಳೂರು (ಮಾ.15): ಮದುವೆಯಾಗಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಮುಂದುವರೆಸುವಂತೆ ಒತ್ತಾಯಿಸಿದ ವ್ಯಕ್ತಿಯೊಬ್ಬ, ತನ್ನ ಮಾಜಿ ಪ್ರೇಯಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದು ಚಾಕುವನ್ನು ಚುಚ್ಚಿ ವಿಕೃತಿಯನ್ನು ಮೆರೆದಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಒಂದು ಗಂಡಿಗೆ ಒಬ್ಬ ಹೆಂಗಸು ಇದ್ಏ ಇರುತ್ತಾಳೆ. ಗಂಡು- ಹೆಣ್ಣಿಗೆ ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯ ಆಗಿರುತ್ತದೆ ಎಂಬ ನಂಬಿಕೆ ಇರುವ ನಮ್ಮ ದೇಶದಲ್ಲಿ ಹಲವರು ಮದುವೆಯಾದ ಪತಿ ಅಥವಾ ಪತ್ನಿಯ ಹೊರತಾಗಿಯೂ ಅನೈತಿಕ ಸಂಬಂಧವನ್ನು ಮುಂದುವರೆಸುತ್ತಾರೆ. ಅದೇ ರೀತಿ ಬೆಂಗಳೂರಿನ ಯಲಚೇನಹಳ್ಳಿಯ ನಿವಾಸಿಗಳಿಬ್ಬರು ಮದುವೆಯಾಗಿ ಮಕ್ಕಳಾದ ನಂತರವೂ ಅನೈತಿಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಸುಮಾರು 4 ವರ್ಷಗಳು ಅನೈತಿಕ ಸಂಬಂಧದಲ್ಲಿ ಮುಂದುವೆದಿದ್ದು, ಈಗ ಮಕ್ಕಳು ದೊಡ್ಡವರಾಗಿದ್ದಾರೆ. ನಮ್ಮ ಸಂಬಂಧವನ್ನು ನಿಲ್ಲಿಸೋಣ ಎಂದು ಮಹಿಳೆ ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ಪ್ರೇಮಿ ಆಕೆಯನ್ನು ನಡು ರಸ್ತೆಯಲ್ಲಿಯೇ ಚಾಕು ಚುಚ್ಚಿ ಕೊಲೆ ಮಾಡಲು ಯುತ್ನಿಸಿದ್ದಾನೆ. 

Bengaluru Crime: ಬ್ರೇಕಪ್‌ ಆಗಿದ್ದಕ್ಕೆ ಮಹಿಳೆಯ ಮುಖಕ್ಕೆ ಚಾಕುವಿನಿಂದ ಕೊಯ್ದ ಪಾಗಲ್‌ ಪ್ರೇಮಿ..!

ನಿನ್ನನ್ನು ಬಿಟ್ಟು ಬದುಕೊಲ್ಲ ಎಂದವ ಚಾಕು ಚುಚ್ಚಿದ: ಇವರು ಮದುವೆ ಆಗಿದ್ದರೂ ಲವ್‌ ಸ್ಟೋರಿ ಮಾತ್ರ ಯವಕರನ್ನೂ ನಾಚಿಸುವಂತಿದೆ. ನಾಲ್ಕು ವರ್ಷಗಳ ಕಾಲ ದೈಹಿಕ ಸಂಬಂಧವನ್ನು ಬೆಳೆಸಿಕೊಂಡು ಕಾಮತೃಷೆಯನ್ನು ತೀರಿಸಿಕೊಳ್ಳುತ್ತಿದ್ದ ಜೋಡಿಗಳಲ್ಲಿ, ಇತ್ತೀಚೆಗೆ ಮಹಿಳೆ ದೈಹಿಕ ಸಂಬಂಧ ಬೇಡವೆಂದು ಆತನನ್ನು ನಿರಾಕರಣೆ ಮಾಡಿದ್ದಾಳೆ. ಇದೇ ಕಾರಣಕ್ಕೆ ನಿನ್ನ ಬಿಟ್ಟು ನಾನು ಬದುಕೋದಿಲ್ಲ , ನೀನು‌ ನನಗೆ ಬೇಕೇ ಬೇಕು ಎಂದು ಮಹಿಳೆಗೆ ಚಾಕು ಚುಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಕಳೆದ ವಾರವೂ ಮಹಿಳೆಗೆ ಪೀಡಿಸಿದ್ದ ರಾಜಣ್ಣ: ರಾಜಧಾನಿಯ ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಹಾಡಹಗಲೇ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ಮಾಡಿದ್ದ ವ್ಯಕ್ತಿಯನ್ನು ರಾಜಣ್ಣ ಎಂದು ಗುರುತಿಸಲಾಗುದೆ. ರಾಜಣ್ಣ ಮಹಿಳೆಯೊಬ್ಬಳ ಜೊತೆ ನಾಲ್ಕು ವರ್ಷದಿಂದ ದೈಹಿಕ  ಸಂಬಂಧ ಹೊಂದಿದ್ದನು. ಆದರೆ ಮಕ್ಕಳು ದೊಡ್ಡವರಾದರು ಎಂದು ಮಹಿಳೆ ಅನೈತಿಕ ಸಂಬಂಧಕ್ಕೆ ಫುಲ್ ಸ್ಟಾಫ್ ಇಟ್ಟಿದ್ದಳು. ಆದರೆ ರಾಜಣ್ಣ ಮಹಿಳೆಯನ್ನ ಬೆಂಬಿಡದೆ ಕಾಡುತ್ತಿದ್ದನು. ಹೀಗೆ ಕಳೆದ ವಾರ ಯಲಚೇನಹಳ್ಳಿ‌ ಮೆಟ್ರೋ ಸ್ಟೇಷನ್ ಬಳಿ ಮಹಿಳೆ ಹಿಂದೆ ಹೋಗಿ ಪೀಡಿಸಿದ್ದನು. ಈ ವೇಳೆಯೂ ನಿರಾನರಣೆ ಮಾಡಿದ್ದಳು. ಪದೇ ಪದೆ, ತನ್ನನ್ನು ನಿರಾಕರಣೆ ಮಾಡುತ್ತಿರುವುದರಿಂದ ಕುಪಿತಗೊಂಡು ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದನು.

ಪತ್ನಿ ಮೇಲೆ ಅನೈತಿಕ ಸಂಬಂಧ ಶಂಕೆ: ಮೊದಲ ಪತಿಯ ಮಗನನ್ನು ಕೊಲೆ ಮಾಡಿದ ಎರಡನೇ ಪತಿ

ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ: ಸದ್ಯ ಕೋಣನಕುಂಟೆ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದರೆ, ಮಹಿಳೆಯ ಮಕ್ಕಳು ಮತ್ತು ಕುಟುಂಬ ಸದಸ್ಯರು ಆಕೆಯ ಅನೈತಿಕ ಸಂಬಂಧಕ್ಕೆ ಅಸಹ್ಯ ಪಡಬೇಕೋ ಅಥವಾ ಅದರಿಮದ ದೂರವಾಗಿ ಒಳ್ಳೆಯ ಜೀವನ ನಡೆಸುವಾಗ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದಕ್ಕೆ ದುಖಿಃಸಬೇಕೋ ಎಮದು ಚಿಂತೆಗೀಡಾಗಿದ್ದಾರೆ. ಆದರೆ, ಮಹಿಳೆಗೆ ಇದ್ದ ಚಿಕ್ಕ ಮಕ್ಕಳು ಅಮ್ಮ ಆಸ್ಪತ್ರೆಯಲ್ಲಿ ಇರುವುದನ್ನು ಕಂಡು ಅಳುವುದನ್ನು ಮಾತ್ರ ನಿಲ್ಲಿಸಿಲ್ಲ.

Latest Videos
Follow Us:
Download App:
  • android
  • ios