Bengaluru Crime: ಪ್ರೀತಿಸಿದ ಯುವತಿಗೆ ಮದುವೆ ಫಿಕ್ಸ್: ಮನೆಗೆ ನುಗ್ಗಿ ರೇಪ್ ಮಾಡಿ ಕೊಲೆಗೈದ ಪ್ರೇಮಿ
ಪ್ರೀತಿಸಿದ ಯುವತಿಯನ್ನೇ ಕೊಲೆ ಮಾಡಿದ ಪ್ರಿಯಕರ
ಯುವತಿಗೆ ಬೇರೆ ಮದುವೆ ಫಿಕ್ಸ್ ಮಾಡಿದ್ದ ಯುವತಿ ಪೋಷಕರು
ಮನೆಗೆ ನುಗ್ಗಿ ಪ್ರೇಯಸಿಯನ್ನು ಕೊಲೆ ಮಾಡಿ ಪರಾರಿಯಾದ
ಬೆಂಗಳೂರು (ಮಾ.15): ಬೆಂಗಳೂರಿನ ಕೆ.ಪಿ. ಅಗ್ರಹಾರದ ಯುವಕನೊಬ್ಬ ತಾನು ಪ್ರೀತಿಸಿದ ಯಿವತಿಗೆ ಬೇರೊಬ್ಬರೊಂದಿಗೆ ಮದುವೆ ಫಿಕ್ಸ್ ಆಗಿರುವುದನ್ನು ಸಹಿಸಿಕೊಳ್ಳಲಾಗದೇ, ಆಕೆಯ ಮನೆಗೆ ನುಗ್ಗಿ ಬಲವಂತವಾಗಿ ರೇಪ್ ಮಾಡಿ ಕೊಲೆಗೈದಿರುವ ಘಟನೆ ವಿಲ್ಸನ್ ಗಾರ್ಡನ್‌ನಲ್ಲಿ ನಡೆದಿದೆ.
ಪ್ರೀತಿಯಲ್ಲಿ ಎಲ್ಲ ಪ್ರೇಮಿಗಳೂ ಒಂದಾಗಲು ಸಾಧ್ಯವಿಲ್ಲ ಎಂಬುದು ಸಹಜ ಸತ್ಯ. ಹೀಗಾಗಿ, ಪ್ರೀತಿಯಲ್ಲಿ ಸಂತೋಷ, ನಲಿವಿನ ಜೊತೆಗೆ ವಿರಹವೇದನೆಯೂ ಹೆಚ್ಚಾಗಿರುತ್ತದೆ. ಆದರೆ, ತನ್ನ ಪ್ರೇಯಸಿ ತನಗೆ ಸಿಗದಿದ್ದರೆ ಬೇರೆ ಯಾರಿಗೂ ಸಿಗಬಾರದು ಎಂದು ತಿಳಿದು ಆಕೆಯನ್ನು ಬಲಯವಂತವಾಗಿ ರೇಪ್ ಮಾಡಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
Bengaluru Crime: ಮದುವೆಯಾದ ಮಹಿಳೆ ಅನೈತಿಕ ಸಂಬಂಧ ನಿಲ್ಲಿಸಿದ್ದಕ್ಕೆ ಚಾಕು ಚುಚ್ಚಿದ
ಈ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಲ್ಸನ್ ಗಾರ್ಡನ್‌ನ ಸುಮಾರು 22 ವರ್ಷದ ಶಾಲಿನಿ ಕೊಲೆಯಾದ ಯುವತಿ ಆಗಿದ್ದಾಳೆ. ಆಕೆಯ ಪ್ರೇಮಿ ಮನೋಜ್ ಕೊಲೆ ಮಾಡಿ ಪರಾರಿ ಆಗಿದ್ದಾನೆ. ಮಗಳ ಮದುವೆಯ ತಯಾರಿಯಲ್ಲಿದ್ದ ಕುಟುಂಬ ಸದಸ್ಯರು ಮನೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದ ಶಾಲಿನಿಯನ್ನು ನೋಡಿ ಗಾಬರಿಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಈಗಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿದಿದ್ದಾರೆ.
ಮದುವೆಗೆ ಯಾಕೆ ಒಪ್ಪಿಕೊಂಡಿದ್ದೀಯ ಎಂದು ಗಲಾಟೆ: ಮನೋಜ್ ಮತ್ತು ಶಾಲಿನಿ ಇಬ್ಬರು ಪ್ರೀತಿ ಮಾಡುತ್ತಿದ್ದರು. ಆದರೆ, ಯುವತಿ ಶಾಲಿನಿಗೆ ಬೇರೊಬ್ಬರ ಜೊತೆ ಮನೆಯವರು ಮದುವೆಯನ್ನು ಫಿಕ್ಸ್ ಮಾಡಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು. ಆದರೆ, ನಿನ್ನೆ ಸಂಜೆ ವೇಳೆ ಮನೆಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಮನೋಜ್ ಶಾಲಿನಿ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡು ಒಳಗೆ ನುಗ್ಗಿದ್ದಾನೆ. ಈ ವೇಳೆ ಇಬ್ಬರ ನಡುವೆಯೂ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಗಲಾಟೆ ಅಗಿದೆ. ನಿಮ್ಮ ಮನೆಯವರು ತೋರಿಸಿದ ಹುಡುಗನನ್ನು ನೀನು ಒಪ್ಪಿಕೊಂಡಿದ್ದರಿಂದಲೇ ಮದುವೆ ಫಿಕ್ಸ್ ಆಗಿದೆ ಎಂದು ಮನೋಜ್ ಗಲಾಟೆ ಮಾಡಿದ್ದಾನೆ. ನಂತರ ಆಕೆಯನ್ನು ಬೆಡ್‌ರೂಂಗೆ ಎಳೆದೊಯ್ದು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ: ಇನ್ನು ಆಸ್ಪತ್ರೆಯಲ್ಲಿ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೈದ್ಯರು, ಆಕೆಯ ಮೇಲೆ ಬಲವಂತದ ಲೈಂಗಿಕ ಕ್ರಿಯೆ ನಡೆಸಲಾಗಿದೆ. ನಂತರ ಆಕೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕೊಲೆ ಮಾಡಿದ ಆರೋಪಿ ಮನೋಜ್ ಯುವತಿಯ ಮನೆಯಿಂದ ಕೆ ಪಿ ಅಗ್ರಹಾರದಲ್ಲಿರುವ ತಮ್ಮ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಮನೋಜ್‌ನನ್ನು ಕುಟುಂಬದವರು ಅಸ್ಪತ್ರೆಗೆ ದಾಖಲು ಮಾಡಿದ್ದಾರೆ.
Bengaluru Crime: ಬ್ರೇಕಪ್ ಆಗಿದ್ದಕ್ಕೆ ಮಹಿಳೆಯ ಮುಖಕ್ಕೆ ಚಾಕುವಿನಿಂದ ಕೊಯ್ದ ಪಾಗಲ್ ಪ್ರೇಮಿ..!
ಯುವತಿ ಗುಪ್ತಾಂಗದಲ್ಲಿ ರಕ್ತಸ್ರಾವ: ಮನೆಯಲ್ಲಿ ಶಾಲಿನಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಅನುಮಾನಾಸ್ಪದ ರೇಪ್ ಅಂಡ್ ಮರ್ಡರ್ ಎಂದು ದೂರು ದಾಖಲು ಮಾಡಿದ್ದರು. ಸಂಜೆ ವೇಳೆ ಘಟನೆ ನಡೆದಿದ್ದು, ರಾತ್ರಿಯೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಇನ್ನು ವೈದ್ಯಕೀಯ ಪರೀಕ್ಷೆಯ ವೇಳೆ ಯುವತಿಯ ಗುಪ್ತಾಂಗದಲ್ಲಿ ರಕ್ತಸ್ರಾವ ಹಾಗೂ ಗಾಯದ ಗುರುತು ಪತ್ತೆಯಾಗಿದೆ. ಸದ್ಯ ಅತ್ಯಾಚಾರ ನಡೆಸಿ ನಂತರ, ಉಸಿಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಆಗಿದೆ.