Asianet Suvarna News Asianet Suvarna News

Mangaluru Railway Police: ದಾಖಲೆ ಇಲ್ಲದ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಬ್ಯಾಗ್ ಪತ್ತೆ

* ದಾಖಲೆ ಇಲ್ಲದ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪತ್ತೆ
* ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ,ಸಿಕ್ಕ ಹಣದ ಬ್ಯಾಗ್
* 12223 ದುರಂತ್ ಎಕ್ಸ್​ಪ್ರೆಸ್​​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದ ವಶಕ್ಕೆ

Rs 1 48 cr cash, gold seized at Mangaluru junction railway station  rbj
Author
Bengaluru, First Published Jan 24, 2022, 5:46 PM IST

ಮಂಗಳೂರು, (ಜ.24): ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ (Mangaluru Junction Railway Station) 12223 ದುರಂತ್ ಎಕ್ಸ್​ಪ್ರೆಸ್​​ ರೈಲಿನಲ್ಲಿ ದಾಖಲೆ ಇಲ್ಲದ ಅಪಾರ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.

ಮಹಾರಾಷ್ಟ್ರದ ಪನ್ವೇಲ್ ರೈಲು ನಿಲ್ದಾಣದಿಂದ ವ್ಯಕ್ತಿಯೋರ್ವ ಹಣದ ಬ್ಯಾಗ್‌ ಹಿಡಿದು ಪ್ರಯಾಣಿಸುತ್ತಿದ್ದ. ಕಪ್ಪು ಬಣ್ಣದ ಬ್ಯಾಗ್ ಮೇಲೆ ರೈಲ್ವೇ ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ  ಮಂಗಳೂರು ರೈಲ್ವೆ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಬ್ಯಾಗ್​ನಲ್ಲಿ 1ಕೋಟಿ 48ಲಕ್ಷದ 58ಸಾವಿರ ನಗದು ಹಾಗೂ 40 ಲಕ್ಷ ಮೌಲ್ಯದ 800ಗ್ರಾಂ ಚಿನ್ನ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

OG Kuppam Gang: ಗ್ರಾಹಕರ ಗಮನ ಬೇರೆಡೆ ಸೆಳೆದು ದರೋಡೆ: ಇಬ್ಬರು ಖದೀಮರು ಅಂದರ್‌

ಯಾವುದೇ ದಾಖಲೆ ಇಲ್ಲದ ಕಾರಣ ಸದ್ಯ ಅಪಾರ ನಗದು ಹಾಗೂ ಚಿನ್ನಾಭರಣವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದು, ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಳ್ಳರನ್ನ ಬೆನ್ನು ಹತ್ತಿಹಿಡಿದ ಕುರಿಗಾರರು.
ರಾಯಚೂರು : ಕುರಿಗಳನ್ನು ಕಳವು ಮಾಡುತ್ತಿರುವ ಕಳ್ಳರನ್ನು ಸಿನಿಮಾ ರೀತಿಯಲ್ಲಿ ಬೆನ್ನು ಹತ್ತಿ ಕುರಿಗಳ ಕಳ್ಳರನ್ನು ಹಿಡಿದಿರುವ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ ನಡೆದಿದೆ.

ಬೇರೆ ಬೇರೆ ಪ್ರದೇಶಗಳಿಂದ ಮೇವನ್ನು ಹರಸಿ ನದಿ ಭಾಗಗಳ ಮತ್ತು ನೀರಾವರಿ ಪ್ರದೇಶಗಳ ಕಡೆ ಕುರಿ ಮೇಯಿಸಲು ಕುರಿಗಳನ್ನು ಒಡೆದುಕೊಂಡು ಬರುತ್ತಾರೆ. ಇದನ್ನು ಹರಿತ ಕಳ್ಳರು ರಾತ್ರಿಯ ಸಮಯದಲ್ಲಿ ಕುರಿಗಳನ್ನು ಕಳವು ಮಾಡಿ, ಅವುಗಳನ್ನು ಸಂತೆಯಲ್ಲಿ ಮಾರುತ್ತಿದ್ದರು.

ಕಳೆದ ಎರಡು ವರ್ಷಗಳಿಂದ ಮುದಗಲ್ ಭಾಗದಲ್ಲಿ ಇದೇ ರೀತಿಯಲ್ಲಿ ಅನೇಕ ಕುರಿಗಳನ್ನು ಕಳ್ಳವು ಮಾಡುತ್ತಿದ್ದರು. ಇದನ್ನೆ ರೂಡಿ ಮಾಡಿಕೊಂಡ ಕಳ್ಳರ ಗುಂಪು ಮತ್ತೆ ರಾತ್ರೋರಾತ್ರಿ ಕುರಿ,ಮೇಕೆ ಕಳ್ಳತನ ಮಾಡಲು ಬಂದಾಗ ಖದಿಮರು ಸಿಕ್ಕಾಕಿಕೊಂಡಿದ್ದಾರೆ. ಕಳ್ಳತನಕ್ಕೆ ಖದಿಮರು ಬುಲೆರೋ ಗಾಡಿ ಬಳಸುತ್ತಿದ್ದರು.

ಕೇಲವು ದಿನಗಳಿಂದ ಬೇಸತ್ತ ಕುರುಬರು ಕಳ್ಳರಿಗಾಗಿ ಹೊಂಚು ಹಾಕಿ ಕುಳಿತ್ತಿದ್ದರು. ಅದನ್ನು ಹರಿಯದ ಕಳ್ಳರು ಕುರಿಕಳವು ಮಾಡಲು ಬಂದು ಸಿಕ್ಕಾಕಿಕೊಂಡಿದ್ದಾರೆ. ಕುರಿಗಳನ್ನು ಕಳವು ಮಾಡಲು ಖದೀಮರು ಬಳಸಿದ ವಾಹನ ಬುಲೆರೋ.

ಅದನ್ನು ಹಿಡಿದಿದ್ದು ರೋಚಕ ಕಥೆ ಏನಂದರೆ ಕುರಿಗಳನ್ನು ಕಳವು ಮಾಡಿದ ಖದೀಮರು ಬುಲೆರೋ ಮೂಲಕ ಕುರಿಗಳನ್ನು ಸಾಗಿಸುತ್ತಿದ್ದರು. ಬುಲೆರೋವನ್ನು ಬೆನ್ನತ್ತಿದ ಕುರುಬರು ಸಿನಿಮಾ ರೀತಿಯಲ್ಲಿ ಕುರಿ ಗಳ್ಳರನ್ನು ಹಿಡಿದಿದ್ದಾರೆ.

ಆದರೆ ಕುರಿಗಾರರು ಬೆನ್ನು ಹತ್ತಿದ್ದುನ್ನು ಗಮನಿಸಿ ವಾಹನ ನಿಲ್ಲಿಸಿ ಎಸ್ಕೇಪ್ ಆಗಿರೋ ಖದೀಮರು. ಬುಲೆರೋ ವಾಹನವನ್ನ ಜಾಲಿಗಿಡದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಬುಲೆರೋ ವಾಹನದಲ್ಲಿದ್ದ ಒಂದು ಟಗರು ರಕ್ಷಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ ಮುದಗಲ್ ಪೊಲೀಸರು. ಕಳ್ಳರು ಬಳಸಿದ್ದ ಬುಲೆರೋ ವಾಹನವನ್ನು ಮುದಗಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow Us:
Download App:
  • android
  • ios