ಮಂಗಳೂರು(ನ.26): ದುಷ್ಕರ್ಮಿಗಳ ತಂಡವೊಂದು ರೌಡಿಶೀಟರ್‌ ಓರ್ವನನ್ನು ಭೀಕರವಾಗಿ ಹತ್ಯೆಗೈದ ಘಟನೆ ನಗರದ ಬೊಕ್ಕಪಟ್ಟಣದ ಕರ್ನಲ್‌ ಗಾರ್ಡನ್‌ ಒಳಗಡೆ ನಿನ್ನೆ(ಬುಧವಾರ) ರಾತ್ರಿ ನಡೆದಿದೆ. 

ಮೃತ ವ್ಯಕ್ತಿಯನ್ನು ಇಂದ್ರಜೀತ್‌ (29) ಎಂದು ಹೇಳಲಾಗಿದ್ದು, ಈತ ರೌಡಿಶೀಟರ್‌ ಆಗಿದ್ದ ಎಂದು ಹೇಳಲಾಗುತ್ತಿದೆ. ಬುಧವಾರ ರಾತ್ರಿ ಹತ್ಯೆಗೀಡಾದ ಇಂದ್ರಜೀತ್‌ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿತ್ತು ಎಂದು ಹೇಳಲಾಗುತ್ತಿದೆ. 

ಉದ್ಯೋಗಕ್ಕಾಗಿ ತಂದೆಯನ್ನೇ ಕೊಂದ ನಿರುದ್ಯೋಗಿ ಪುತ್ರ!

ಘಟನೆ ನಡೆದ ಬಳಿಕ ಬೆಳಗಿನ ಜಾವ ಸುಮಾರು 2 ಗಂಟೆಗೆ ಕರ್ನಲ್‌ ಗಾರ್ಡನ್‌ ಬಳಿ ಇಂದ್ರಜೀತ್‌ ಹತ್ಯೆಗೈಯಲಾಗಿದೆ. ಈ ಹಿಂದೆ ಈತನ ಮೇಲೆ ತಲವಾರ್‌ ದಾಳಿ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈತನನ್ನ ಯಾರು ಕೊಲೆ ಮಾಡಿದರು, ಯಾವ ಉದ್ದೇಶಕ್ಕಾಗಿ ಹತ್ಯೆಗೈಯಲಾಗಿದೆ ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.