'ಏರಿಯಾದಲ್ಲಿ ನಿಂದು ಹವಾ ಜಾಸ್ತಿ ಆಗಿದೆ': ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ!
ಕ್ಷುಲ್ಲಕ ಕಾರಣಕ್ಕೆ 24 ವರ್ಷದ ಯುವಕ ರೇಣುಕುಮಾರ್‌ನಿಗೆ ಚಾಕು ಇರಿದು ಹತ್ಯೆಮಾಡಿರುವ ಘಟನೆ ನಗರದ ಮಹದೇವಪುರದಲ್ಲಿ ತಡರಾತ್ರಿ ನಡೆದಿದೆ.
ಬೆಂಗಳೂರು (ಮೇ.26) : ಕ್ಷುಲ್ಲಕ ಕಾರಣಕ್ಕೆ 24 ವರ್ಷದ ಯುವಕ ರೇಣುಕುಮಾರ್‌ನಿಗೆ ಚಾಕು ಇರಿದು ಹತ್ಯೆಮಾಡಿರುವ ಘಟನೆ ನಗರದ ಮಹದೇವಪುರದಲ್ಲಿ ತಡರಾತ್ರಿ ನಡೆದಿದೆ.
ಏರಿಯಾದಲ್ಲಿ ನಿಂದು ಹವಾ ಜಾಸ್ತಿ ಆಗಿದೆ ಎಂಬ ವಿಚಾರಕ್ಕೆ ನಡೆದಿರುವ ಘಟನೆ. ರೇಣುಕುಮಾರ್‌ನಿಂದ ಬೆದರಿಕೆ ಹಾಕಿದ್ದ ಆರೋಪಿ. ಮಾತಿಗೆ ಮಾತಿಗೆ ಬೆಳೆದು ವಿಕೋಪಕ್ಕೆ ತಿರುಗಿ, ರೇಣುಕುಮಾರನಿಗೆ ಚಾಕು ಇರಿದು ಹತ್ಯೆ ಮಾಡಿರುವ ಆರೋಪಿ.
ಯುವತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ
Viral video: ಮನೆಯೆದುರು ಬೈಕ್ ನಿಲ್ಲಿಸಬೇಡ ಎಂದಿದ್ದಕ್ಕೆ ಮಚ್ಚಿನಿಂದ ಕುತ್ತಿಗೆಗೆ ಬೀಸಿದ ಆಸಾಮಿ!
ಯುವತಿಯ ವಿಚಾರಕ್ಕೆ ಪರಿಚಯಸ್ಥನಿಂದಲೇ ಕೊಲೆ ನಡೆದಿರುವ ಅನುಮಾನ ವ್ಯಕ್ತವಾಗಿದೆ. ರೇಣುಕುಮಾರ್ ಏಳು ಕೇಸ್ ನಲ್ಲಿ ಅರೋಪಿಯಾಗಿದ್ದ. ಕೊಲೆ ಯತ್ನ , ರಾಬರಿ , ಹಲ್ಲೆ ಕೇಸ್ ಗಳು ರೇಣುಕುಮಾರ್ ಮೇಲಿವೆ. ಸ್ನೇಹಿತರಿಗೆ ಜತೆಗೆ ಇರುವಂತೆ ಅವಾಜ್ ಹಾಕಿದ್ದ. ಪ್ರಶಾಂತ್, ಶ್ರೀಕಾಂತ್, ವಸಂತ ಕುಮಾರ್ ಮೂವರು ಸ್ನೇಹಿತರು. ನೀವು ನನ್ನ ಜತೆಗೇ ಇರಬೇಕು. ನಾನು ಜೈಲಿಗೆ ಹೋಗಿ ಬಂದವನು. ನಾನು ನಿಮ್ಮ ಬಾಸ್. ಒಂಟಿಯಾಗಿ ಏನಾದರೂ ಕೆಲಸ ಮಾಡಿದ್ರೆ ನಿಮ್ಮ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದ. ನಿನ್ನೆ ಕೂಡ ಆರೋಪಿಗಳಿಗೆ ಹೆದರಿಸಿದ್ದ ರೇಣುಕುಮಾರ್.
ಹೀಗೆ ಬಿಟ್ಟರೆ ಇವನು ನಮ್ಮನ್ನು ಹೊಡೆದು ಮುಗಿಸ್ತಾನೆ ಎಂದು ರೇಣುಕುಮಾರ್‌ನನ್ನೇ ಎತ್ತಲು ಪ್ಲಾನ್ ಮಾಡಿದ್ದ ಸ್ನೇಹಿತರು. ಶ್ರೀಕಾಂತ್, ಪ್ರಶಾಂತ್ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಬಂಗಾರಪೇಟೆ ಮೂಲದ ಗೆಳೆಯ ವಸಂತ್ ನನ್ನು ಜೊತೆಗೆ ಸೇರಿಸಿಕೊಂಡು ಪ್ಲಾನ್ ಮಾಡಿರುವ ಆರೋಪಿಗಳು.
ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಸಿಬ್ಬಂದಿಯಿಂದ ಮೂವರು ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ!
ಪ್ಲಾನ್ ಮಾಡಿಕೊಂಡೇ ಬಂದಿರುವ ಆರೋಪಿಗಳು. ರೇಣುಕುಮಾರ್‌ನೊಂದಿಗೆ ಜಗಳ ತೆಗೆದಿದ್ದಾರೆ. ಏರಿಯಾದಲ್ಲಿ ನಿಂದು ಹವಾ ಜಾಸ್ತಿಯಾಗಿದೆ ಎಂದವರೇ ಚೂರಿ ಇರಿದು ಕೊಂದುಹಾಕಿದ್ದಾರೆ. ಸದ್ಯ ಘಟನೆ ಸಂಬಂಧ ಮಹದೇವಪುರ ಠಾಣೆಯಲ್ಲಿ ಕೇಸ್ ದಾಖಲು. ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು. ತನಿಖೆ ಮುಂದುವರಿಸಿದ್ದಾರ