* ದೇಶದ ವಿವಿಧೆಡೆಗೆ ರೋಹಿಂಗ್ಯಗಳನ್ನು ಸಾಗಿಸಿ ಆಧಾರ್, ಪಾನ್ ಕಾರ್ಡ್ ಮಾಡುತ್ತಿದ್ದ ಕುಮ್‌ಕುಮ್* ಎನ್‌ಐಎ ತಂಡ ಕಾರ್ಯಾಚರಣೆ* ಮ್ಯಾನ್ಮಾರ್‌ನಿಂದ ದೇಶಕ್ಕೆ ಕಳ್ಳಸಾಗಣೆ
ಬೆಂಗಳೂರು(ಮಾ.15): ದೇಶದ ಆಂತರಿಕ ಭದ್ರತೆಗೆ ಅಪಾಯ ಎನ್ನಲಾದ ರೋಹಿಂಗ್ಯ(Rohingya) ಮುಸ್ಲಿಮರ(Muslim) ಮಾನವ ಕಳ್ಳ ಸಾಕಾಣಿಕೆ ದಂಧೆಯ ಪ್ರಮುಖ ಸೂತ್ರಧಾರನೊಬ್ಬನನ್ನು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (NIA)ವು ಬಂಧಿಸಿದೆ. ಅಸ್ಲಾಂ(Assam) ಮೂಲದ ಕುಮ್‌ಕುಮ್ ಅಹ್ಮದ್ ಚೌಧರಿ ಅಲಿಯಾಸ್ ಅಸಿಕುಲ್ ಅಹ್ಮದ್ ಬಂಧಿತನಾಗಿದ್ದು, ಭಾರತಕ್ಕೆ(India) ರೋಹಿಂಗ್ಯಗಳು ಅಕ್ರಮವಾಗಿ ನುಸುಳಲು ಆರೋಪಿ(Accused) ನೆರವಾಗಿದ್ದ. ಈ ಸಂಬಂಧ ಅಸ್ಸಾಂ, ಮೇಘಾಲಯ(Meghalaya) ಹಾಗೂ ಕರ್ನಾಟಕದಲ್ಲಿ(Karnataka) ಏಕಕಾಲಕ್ಕೆ ಮಾ.10ರಂದು ಎನ್‌ಐಎ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದಾಳಿ ವೇಳೆ ಕುಮ್‌ಕುಮ್ ಬೆಂಗಳೂರಿನಲ್ಲಿ ಪತ್ತೆಯಾದರೆ, ಇನ್ನುಳಿದ ಆತನ ಸಹಚರರಾದ ಅಸ್ಸಾಂನ ಸಹಾಲಮ್ ಲಸ್ಕರ್ ಅಲಿಯಾಸ್ ಅಲ್ಲಾಮ್ ಲಸ್ಕರ್, ಅಹಿಯಾ ಅಹ್ಮದ್ ಚೌಧರಿ, ಬೊಪನ್ ಅಹ್ಮದ್ ಚೌಧರಿ, ಜಮಾಜುದ್ದೀನ್ ಅಹ್ಮದ್ ಚೌಧರಿ ಮತ್ತು ಮೇಘಾಲಯದ ವಂಬಿಂಗ್ ಸುಟಿಂಗ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ ಕೆಲ ದಾಖಲೆಗಳು ಹಾಗೂ ಡಿಜಿಟಲ್ ಉಪಕರಣ ಜಪ್ತಿ ಮಾಡಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
'ಬೆಂಗಳೂರಿನಲ್ಲಿರುವ 72 ರೊಹಿಂಗ್ಯಾಗಳ ಗಡಿಪಾರು ತಕ್ಷಣಕ್ಕೆ ಸಾಧ್ಯವಿಲ್ಲ'
ಕಳೆದ ವರ್ಷ ರೋಹಿಂಗ್ಯಗಳ ಕಳ್ಳ ಸಾಗಾಣಿಕೆ ಸಂಬಂಧ ಅಸ್ಸಾಂ ರಾಜ್ಯದ ಗುವಾಹಟಿ ಎನ್‌ಐಎ ಕಚೇರಿಯಲ್ಲಿ ಎಫ್‌ಐಆರ್(FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅಧಿಕಾರಿಗಳು, ಮಾನವ ಕಳ್ಳ ಸಾಗಾಣಿಕೆ ಜಾಲವನ್ನು ಶೋಧಿಸಿದಾಗ ಕುಮ್‌ಕುಮ್ ಸುಳಿವು ಪತ್ತೆಯಾಗಿದೆ. ಈ ಮಾಹಿತಿ ಬೆನ್ನಹತ್ತಿದ ಅಧಿಕಾರಿಗಳು, ಕುಮ್‌ಕುಮ್‌ನನ್ನು ಸೆರೆ ಹಿಡಿದಿದೆ. ಬೆಂಗಳೂರಿನಲ್ಲಿ ಅಡಗಿದ್ದ ಕುಮ್‌ಕುಮ್, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಮೇಘಾಲಯ ವ್ಯಾಪ್ತಿಯ ದೇಶದ ಗಡಿಭಾಗದಲ್ಲಿ ನೆಲೆಸಿದ್ದ ತನ್ನ ಸಹಚರರ ಜತೆ ನಿರಂತರ ಸಂಪರ್ಕದಲ್ಲಿದ್ದ.
ತನ್ನ ತಂಡವನ್ನು ಬಳಸಿಕೊಂಡು ಮ್ಯಾನ್ಮಾರ್ ಮೂಲಕ ರೋಹಿಂಗ್ಯಗಳು ಭಾರತಕ್ಕೆ ಪ್ರವೇಶಿಸಲು ಕುಮ್‌ಕುಮ್ ತಂಡ ನೆರವಾಗುತ್ತಿತ್ತು. ಹೀಗೆ ನುಸುಳಿ ಬಂದ ರೋಹಿಂಗ್ಯಗಳಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಆರೋಪಿಗಳು ಆಶ್ರಯ ಕಲ್ಪಿಸುತ್ತಿದ್ದರು. ಆನಂತರ ಅಕ್ರಮ ವಲಸಿಗರಿಗೆ ಸ್ಥಳೀಯ ನಾಗರಿಕರು ಎನ್ನುವಂತೆ ಆಧಾರ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಪಡಿತರ ಚೀಟಿ ತಯಾರಿಸಿ ಕೊಡುತ್ತಿದ್ದ. ಈ ದಾಖಲೆ ಪಡೆದ ರೋಹಿಂಗ್ಯಾ ಮುಸ್ಲಿಮರು, ತಾವು ಪಶ್ಚಿಮ ಬಂಗಾಳ, ಅಸ್ಸಾಂ ಅಥವಾ ಮೇಘಾಲಯ ಮೂಲ ನಿವಾಸಿಗಳು ಎಂದು ಬಿಂಬಿಸಿಕೊಳ್ಳುತ್ತಿದ್ದರು. ಅಲ್ಲದೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡ ಬಗ್ಗೆ ಕೆಲ ರೋಹಿಂಗ್ಯಗಳ ಮೇಲೆ ಪ್ರಕರಣಗಳು ದಾಖಲಾಗಿವೆ. ದೇಶದ ಆಂತರಿಕ ಭದ್ರತೆಗೂ(Internal Security) ಕೂಡಾ ಅಕ್ರಮ ವಲಸಿಗರು ಸಹ ಅಪಾಯ ತಂದೊಡ್ಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರ ಗುರಿ!
ಪೊಲೀಸರ ಸೋಗಲ್ಲಿ ರೈತನಿಂದ ಹಣ ದೋಚಿದ್ದವರ ಬಂಧನ
ಬೆಂಗಳೂರು: ನಗರಕ್ಕೆ ಟ್ರಕ್ ಖರೀದಿಗಾಗಿ ಬಂದಿದ್ದ ರೈತನಿಗೆ(Farmer) ಪೊಲೀಸರ ಸೋಗಿನಲ್ಲಿ ಬೆದರಿಸಿ 8 ಲಕ್ಷ ದೋಚಿದ್ದ ನಾಲ್ವರು ಕಿಡಿಗೇಡಿಗಳು ಕೆ.ಜಿ.ಹಳ್ಳಿ ಠಾಣೆ ಪೊಲೀಸರ(Police) ಬಲೆಗೆ ಬಿದ್ದ ಘಟನೆ ಮಾ.12 ರಂದು ನಡೆದಿತ್ತು. ತಮಿಳುನಾಡು(Tamil Nadu) ರಾಜ್ಯದ ವೆಲ್ಲೂರಿನ ನಟರಾಜ್ ಅಲಿಯಾಸ್ ರಾಜೇಶ್ ರೆಡ್ಡಿ, ಚಿತ್ರದುರ್ಗದ ಸದಾಶಿವ ನಾಯಕ್ ಅಲಿಯಾಸ್ ಪ್ರಶಾಂತ್, ಕೋಲಾರದ ಶಿವರಾಜ್ ಅಲಿಯಾಸ್ ಕೋಳಿ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 8 ಲಕ್ಷ ಜಪ್ತಿ ಮಾಡಲಾಗಿತ್ತು.
ಇತ್ತೀಚೆಗೆ ಕಡಿಮೆ ಬೆಲೆಗೆ ಟ್ರಕ್ ಕೊಡಿಸುವುದಾಗಿ ಆರೋಪಿಗಳು ನಾಗಮಂಗಲದ ಎಚ್.ಜಿ.ರಂಗಸ್ವಾಮಿ ಅವರನ್ನು ನಂಬಿಸಿ ನಗರಕ್ಕೆ ಕರೆಸಿಕೊಂಡು ಬಳಿಕ ಬೆದರಿಸಿ ಹಣ ದೋಚಿದ್ದರು. ಈ ಬಗ್ಗೆ ಅವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು.
