Road accident : ಹಾವೇರಿ, ಲಾರಿ ಡಿಕ್ಕಿ, ತಂದೆ ಕಣ್ಣೆದುರೇ ಪ್ರಾಣ ಬಿಟ್ಟ ಮಗಳು!
* ತಂದೆ ಕಣ್ಣೆದುರೇ ಪ್ರಾಣ ಬಿಟ್ಟ ಮಗಳು
* ಹಾವೇರಿ ಜಿಲ್ಲೆ ಗುತ್ತಲ ರೋಡ್ ನಲ್ಲಿ ಭಯಾನಕ ಅಪಘಾತ
* ತಲೆ ಮೇಲೆ ಲಾರಿ ಹರಿದು ಯುವತಿ ಸಾವು
* ಮಾಲಾ ಕೋಟೆಪ್ಪ ತಡಸದ (20) ಮೃತ ದುರ್ದೈವಿ
ಹಾವೇರಿ(ಡಿ. 13) ಹಾವೇರಿಯಿಂದ ಗುತ್ತಲ ಕಡೆಗೆ ಹೊರಟಿದ್ದ ಬೈಕ್ ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಯುವತಿ ಮೃತಪಟ್ಟಿರುವ ಘಟನೆ ಭಾನುವಾರ ಸಂಭವಿಸಿದೆ.
ಸಮೀಪದ ಶಿವನಗರ (ಗುತ್ತಲ ತಾಂಡಾ) ಹೊರವಲಯದ ಬಳಿ ದೇವಗಿರಿ ಗ್ರಾಮದ ಕೋಟೆಪ್ಪ ತಡಸದ ಹಾಗೂ ಇಬ್ಬರು ಮಕ್ಕಳು ಬೈಕನಲ್ಲಿ ಗುತ್ತಲ ಕಡೆಗೆ ಹೊರಟಾಗ ಹಿಂಬದಿಯಿಂದ ಬಂದ ಕಬ್ಬು ಸಾಗಾಟದ ಖಾಲಿ ಲಾರಿಯೊಂದು ಡಿಕ್ಕಿ ಹೊಡೆದು ಮಾಲಾ ಕೋಟೆಪ್ಪ ಕಳಸದ (20) ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕಣ್ಣೆದುರುಗಡೆಯೇ ಮಗಳ ಸಾವನ್ನು ಕಂಡ ತಂದೆ ಹಾಗೂ ಅಣ್ಣನ ಗಾಯದ ನೋವಿನಲ್ಲೂ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆ ಕೋಟೆಪ್ಪ ಕಳಸದ ಹಾಗೂ ಮೃತಳ ಸಹೋದರ ಚಂದ್ರು ಕಳಸದ ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಗುತ್ತಲದ ಸಮುದಾಯ ಆರೋಗ್ಯ ಕೇಂದ್ರದಿಂದ ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾಸ್ಫತ್ರೆಗೆ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಜಗದೀಶ., ಎಎಸ್‌ಐಗಳಾದ ಎಂ.ಕೆ. ಸೊರಟೂರ, ವೈ.ಡಿ. ಹಾವನೂರ ಹಾಗೂ ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಘಟನೆ ಕುರಿತಂತೆ ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಇಂದಿರಾನಗರದ 80 ಅಡಿ ರಸ್ತೆಯ ಎಸ್‌ಬಿಎಂ ಎಟಿಎಂ ಬಳಿ ಅತಿ ವೇಗವಾಗಿ ಬಂದ ಐಷಾರಾಮಿ ಬೆಂಜ್ ಕಾರು(Mercedes-Benz) ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಆಲ್ಟೋ ಕಾರು ಚಾಲಕ ಮೃತಪಟ್ಟು(Death) ಆರು ಮಂದಿ ಗಾಯಗೊಂಡಿದ್ದರು.
Lover Commit Suicide : ಶಿವಮೊಗ್ಗ, ಕೈಕೊಟ್ಟ ಪ್ರಿಯತಮೆ ಮನೆ ಮುಂದೆ ವಿಷ ಸೇವಿಸಿದ!
ಅಪಘಾತದಲ್ಲಿ(Accident) ಆಲ್ಟೋ ಕಾರು ಚಾಲಕ ಅಸ್ಸಾಂ ಮೂಲದ ಹರಿಮಹಂತ(36) ಮೃತಪಟ್ಟಿದ್ದರು.. ಬೆಂಜ್ ಕಾರು ಚಾಲಕ ಉದ್ಯಮಿ ಸುವೀತ್ ಕಾರ್ಡಿಯೋ(43) ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದರು.
ಕೋರಮಂಗಲ ಅಪಘಾತ: ಬೆ ಕೋರಮಂಗಲ ಅಪಘಾತ ಪ್ರಕರಣದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಇದಾದ ಮೇಲೆ ವೈಟ್ ಫೀಲ್ಡ್ ಮೇಲು ಸೇತುವೆ ಮೇಲೆ ಕಾರೊಂದು ಅಪ್ಪಳಿಸಿ ಇಬ್ಬರು ಮೃತಪಟ್ಟಿದ್ದರು.
ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದ ನಾಲ್ವರು ನಿವಾಸಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರಲ್ಲಿ ಒಬ್ಬಾತ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ ಅಳಿಯ ವಿಜಯಕುಮಾರ್ ಕಾಶಿನಾಥ ದೊಡಮನಿ ಎಂದು ಗುರುತಿಸಲಾಗಿತ್ತು. ಪಾರ್ಚ್ಯೂನರ್ ಕಾರಿನ ಅತೀವೇಗ ಹಾಗೂ ಚಾಲಕನ ಆಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅಳಿಯ ಸಾಯಿ ಧರ್ಮ್ ತೇಜ್ (Sai Dharam Tej) ಸೆ.10ರಂದು ಭೀಕರ ರಸ್ತೆ ಅಪಘಾತದಿಂದ (Road accident) ಕೋಮಾಗೆ ಜಾರಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಯಾವುದೇ ರೀತಿಯ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಕೋಮಾದಿಂದ (Coma) ಹೊರ ಬರಬೇಕು ಎಂದೆಲ್ಲಾ ಮಾತುಗಳು ಟಾಲಿವುಡ್‌ನಿಂದ ಕೇಳಿ ಬರುತ್ತಿತ್ತು. ಅಭಿಮಾನಿಗಳು ಹಾಗೂ ಸಿನಿ ಆಪ್ತರ ಆತಂಕ ದೂರ ಮಾಡಲು ಸಾಯಿ ಟ್ಟೀಟ್ ಮಾಡಿದ್ದರು. ತಾವು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಇದರಿಂದ ಅಭಿಮಾನಿಗಳಲ್ಲಿ ಮರೆಯಾಗಿದ್ದ ಆತಂಕ ದೂರವಾಗಿತ್ತು
ತಮಿಳುನಾಡಿನಲ್ಲಿ ನಡೆದ ಘೋರ ದುರಂತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿ ಹದಿಮೂರು ಜನ ದುರ್ಮರಣಕ್ಕೆ ಗುರಿಯಾಗಿದ್ದರು. ಅತ್ಯಾಧುನಿಕ ಸೇನಾ ಹೆಲಿಕಾಪ್ಟರ್ ಹೇಗೆ ಅಪಘಾಥಕ್ಕೆ ಗಿರಿಯಾಯಿತು ಎನ್ನುವ ತನಿಖೆ ಆರಂಭಿಸಲಾಗಿದೆ.