Asianet Suvarna News Asianet Suvarna News

Lover Commit Suicide : ಶಿವಮೊಗ್ಗ, ಕೈಕೊಟ್ಟ ಪ್ರಿಯತಮೆ ಮನೆ ಮುಂದೆ ವಿಷ ಸೇವಿಸಿದ!

* ಪ್ರೇಯಸಿ ಕೈಕೊಟ್ಟ ಪ್ರಿಯಕರನೊಬ್ಬ ಯುವತಿ ಮನೆ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

* ಹೊಸನಗರ ತಾಲೂಕಿನ ಜಯನಗರ ಗ್ರಾಮದಲ್ಲಿ ನಡೆದ ಘಟನೆ

* ಹೊಸನಗರ ತಾಲೂಕಿನ ಹೊರಬೈಲು ಗ್ರಾಮದ ಯುವಕ

* ಮೊಬೈಲ್ ಸ್ವಿಚ್ ಆಫ್ ಮಾಡಿ ಹೊರಟು ಹೋಗಿದ್ದ

Boyfriend try to Commit Suicide in Front of Lover House Shivamogga mah
Author
Bengaluru, First Published Dec 13, 2021, 12:30 AM IST

ಶಿವಮೊಗ್ಗ(ಡಿ. 12)  ಪ್ರೇಯಸಿ (Lover)ಕೈಕೊಟ್ಟ ಕಾರಣಕ್ಕೆ ಯುವಕನೊಬ್ಬ ಯುವತಿ ಮನೆ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ (Suicide)ಯತ್ನಿಸಿದ್ದಾನೆ.  ಹೊಸನಗರ(Hosnagar) ತಾಲೂಕಿನ ಜಯನಗರ ಗ್ರಾಮದಿಂದ ಪ್ರಕರಣ ವರದಿಯಾಗಿದೆ.  ಅಸ್ವಸ್ಥಗೊಂಡ ಯುವಕನನ್ನು ಆಸ್ಪತ್ರೆಗೆ(Shivamogga) ದಾಖಲಿಸಲಾಗಿದೆ. 

 ಪ್ರೀತಿಸಿದ ಯುವತಿಯ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಹೊಸನಗರ ತಾಲೂಕಿನ ಹೊರಬೈಲು ಗ್ರಾಮದ  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.. 

ಕಳೆದ 8 ವರ್ಷದಿಂದ ಯುವತಿ ಪ್ರೀತಿ ಮಾಡುತ್ತಿದ್ದ.  ಯುವಕ  ತನ್ನ ಅಪ್ಪ ಅಮ್ಮನಿಗೆ ಪೀಡಿಸಿ ಇದ್ದ ಜಮೀನನ್ನು ಮಾರಿಸಿದ್ದ.  ಅದರಲ್ಲಿ ಬಂದ 6 ಲಕ್ಷ ಹಣದೊಂದಿಗೆ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ  ಇದೀಗ ತನ್ನ ಬೈಕನ್ನ ತಾನು ಕೆಲಸ ಮಾಡುತ್ತಿದ್ದ ಆಫೀಸಿನ ಎದುರು ನಿಲ್ಲಿಸಿ ,ಮೊಬೈಲ್ ಸ್ವಿಚ್ ಆಫ್ ಮಾಡಿ ಹೊರಟು ಹೋಗಿದ್ದ. ಎಲ್ಲಿ ಹೋದ ಎಂಬ ಹುಡುಕಾಟ ನಡೆಯುತ್ತಿದ್ದಾಗಲೇ ತಾನು ಪ್ರೀತಿಸಿದ ಯುವತಿ ಮನೆ ಮುಂದೆ ಆತ್ಮಹತ್ಯೆ ಯತ್ನ ಮಾಡಿರುವುದು ಗೊತ್ತಾಗಿದೆ. 

ಅಸ್ವಸ್ಥಗೊಂಡಿರುವ ಯುವಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಬ್ಯಾಂಕ್ ಒಂದರಲ್ಲಿ ಯುವಕ ಕೆಲಸ ಮಾಡಿಕೊಂಡಿದ್ದ

ಶವ ತಬ್ಬಿ ಮಲಗಿದ್ದ:  ವಿವಾಹಿತ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದವ ಕೊನೆಗೆ ಆಕೆಯನ್ನು ಹತ್ಯೆ ಮಾಡಿದ್ದು ಅಲ್ಲದೇ  ಆಕೆಯ ಶವವನ್ನೇ ತಬ್ಬಿ ಮಲಗಿದ್ದ ಪ್ರಕರಣ ಜೈಪುರದಿಂದ ವರದಿಯಾಗಿತ್ತು. 

ಮಹಿಳೆ ಜತೆ ಜೆಡಿಎಸ್ ಮುಖಂಡನ ಸರಸ ಸಲ್ಲಾಪ

ರಾಜಸ್ಥಾನ ಅಹೋರ್ ಪ್ರದೇಶದಲ್ಲಿ ಘಟನೆ ನಡೆದಿದ್ದು.  ಇಲ್ಲಿನ ಶಾಂತಿ ದೇವಿ ಎಂಬ ಮಹಿಳೆಗೆ ಇಬ್ಬರು  ಗಂಡು ಮಕ್ಕಳು ಇದ್ದಾರೆ. ಮಹಿಳೆಯ ಪತಿ ಶಾಂತಿಲಾಲ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು.    ಶಾಂತಿ ಗಂಡ ಮನೆಯಲ್ಲಿ ಇಲ್ಲದೆ ವೇಳೆ ಅಲ್ಲಿಗೆ ಬಂದ 21 ವರ್ಷದ  ಗಣೇಶ್ ಮೀನಾ ಎಂಬಾತ ನಿನ್ನನ್ನು ಪ್ರೀತಿ ಮಾಡುತ್ತೇನೆ  ಎಂದು ಹೇಳಿದ್ದಾನೆ.

ಈ ಹಿಂದೆಯೂ ಗಣೇಶ್ ಇಂಥದ್ದೇ ಕೆಲಸ ಮಾಡಿಕೊಂಡು ಬಂದಿದ್ದ.  ಸಿಟ್ಟುಗೊಂಡಿದ್ದ ಶಾಂತಿ ದೇವಿ ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ ನನಗೆ ಈಗಾಗಲೇ ಮದುವೆ ಆಗಿ ಮಕ್ಕಳಿವೆ ಎಂದಿದ್ದಾರೆ.   ಇದರಿಂದ ಕೋಪಗೊಂಡ ಗಣೇಶ್ ಕೊಡಲಿಯಿಂದ ಮಹಿಳೆ ಮೇಲೆ ಮನಸಿಗೆ ಬಂದ ಹಾಗೆ ಹಲ್ಲೆ ನಡೆಸಿದ್ದ.  ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.

ಪಾಗಲ್ ಪ್ರೇಮಿ ಟೆಕ್ಕಿ; ಪ್ರೀತ್ಸೆ ಪ್ರೀತ್ಸೆ ಅಂತ ಬೆಂಗಳೂರಿನ ನಟಿ ಹಿಂದೆ ಬಿದ್ದ ಟೆಕ್ಕಿಯನ್ನು ಬಂಧಿಸಲಾಗಿತ್ತು.  ಇಷ್ಟ ಇಲ್ಲದೇ ಇದ್ದರೂ ನಟಿಯ ಹಿಂದೆ ಬಿದ್ದು ಒತ್ತಡ ಹಾಕುತ್ತಿದ್ದ. ಕಾಲೇಜು ಓದುತ್ತಾ ಇದ್ದಾಗಿನಿಂದ ಪ್ರೀತಿಸುವಂತೆ ಪೀಡಿಸುತ್ತಾ ಇದ್ದ.

ಕಾಲೇಜು ದಿನಗಳಿಂದ ಪರಿಚಯ ಆಗಿದ್ದ ಇಬ್ಬರು  ಎರಡು ಮೂರು ತಿಂಗಳು ಇಬ್ಬರೂ ಒಟ್ಟಿಗೆ ಓಡಾಡಿದ್ದರು ನಂತರ ಲವ್ ಮಾಡಲು ಇಷ್ಟವಿಲ್ಲದೆ ಬ್ರೇಕ್ ಅಪ್ ಆಗಿತ್ತು. ಇದರಿಂದ ಚಂದನ್ ಕೋಪಗೊಂಡಿದ್ದ. ಪ್ರಿಯಕರನ ಕಾಟ ತಾಳಲಾರದೆ ನಟಿ ಮನೆ ಬದಲಾಯಿಸಿದ್ದರು.

ಚಾಕು ಇರಿದಿದ್ದ:  ಪ್ರೇಯಸಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ ನಂತರ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಘಟನೆ ಉಡುಪಿ ಅಂಬಾಗಿಲು ಸಮೀಪದ ಸಂತೆಕಟ್ಟೆಯ ಪೆಟ್ರೋಲ್‌ ಬಂಕ್‌ ಬಳಿಯಲ್ಲಿ ಘಟನೆ ವರದಿಯಾಗಿತ್ತು.

Domestic Violence : ಪಾಪಿ ಪತಿ... ಡೆತ್‌ ನೋಟ್ ಬರೆದಿಟ್ಟು ಬೆಂಗಳೂರಿನ ಟೆಕ್ಕಿ ಸುಸೈಡ್

ಸೌಮ್ಯಶ್ರೀ ಭಂಡಾರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದರೆ. ಸೌಮ್ಯಳಿಗೆ ಚೂರಿ ಇರಿದು, ತಾನು ಕತ್ತು ಕೊಯಿದುಕೊಂಡ ಸಂದೇಶ್ ಕುಲಾಲ್ ಸಹ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.  ಪ್ರೀತಿಸಿ ಮದುವೆಯಾಗಿದ್ದ ಟೆಕ್ಕಿ ಜೋಡಿ ನಡುವೆ ಗೊಂದಲ ಹುಟ್ಟಿಕೊಂಡಿದ್ದು ಯುವತಿ ಸುಸೈಡ್‌ ಗೆ ಶರಣಾಗಿದ್ದಳು. ಕ್ಷುಲ್ಲಕ ಕಾರಣಕ್ಕಾಗಿಯೂ ಕೆಲವರು ಇಂಥ ನಿರ್ಧಾರಕ್ಕೆ ಮುಂದಾಘುತ್ತಿರುವುದು ಆಧುನಿಕ ಕಾಲದ ದುರ್ದೈವ.

 

 

 

Latest Videos
Follow Us:
Download App:
  • android
  • ios