Asianet Suvarna News Asianet Suvarna News

ಬೆಳಗಾವಿ: ಬಿಜೆಪಿ ಮುಖಂಡನ ಹಣೆಗೆ ಗನ್ ಇಟ್ಟು ಜೀವ ಬೆದರಿಕೆ..!

*  ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದ ಘಟನೆ
*  ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಬಾಬುರಾವ್ ದೇಸಾಯಿ ಆರೋಪ 
*  ಆರ್‌ಎಫ್‌ಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ
 

RFO Life Threatening to BJP Leader Baburao Desai at Khanapur in Belagavi grg
Author
Bengaluru, First Published Nov 2, 2021, 2:32 PM IST

ಖಾನಾಪುರ(ನ.02): ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ(Khanapur) ತಾಲೂಕಿನ ಲೋಂಡಾ ಆರ್‌ಎಫ್‌ಒ(RFO) ಪ್ರಶಾಂತ ಗೌರಾಣಿ ಭಾನುವಾರ ಮುಂಜಾನೆ ತಮ್ಮ ಹಣೆಯ ಮೇಲೆ ರಿವಾಲ್ವರ್ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ(BJP) ಮುಖಂಡ, ಜಿಪಂ ಮಾಜಿ ಸದಸ್ಯ ಬಾಬುರಾವ್ ದೇಸಾಯಿ(Baburao Desai) ಆರೋಪಿಸಿದ್ದಾರೆ. 

ಪಟ್ಟಣದ ಲೋಕೋಪಯೋಗಿ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ರಾತ್ರಿ ಮಾಚಾಳಿ ಗ್ರಾಮದ ಸಾರ್ವಜನಿಕರ ಕೆಲಸಕ್ಕಾಗಿ ತಾವು ಲೋಂಡಾ ಆರ್‌ಎಫ್‌ಒ ಅವರಿಗೆ ಕರೆ ಮಾಡಿದ್ದು, ಹಲವು ಬಾರಿ ಕರೆ ಮಾಡಿದರೂ ಆರ್‌ಎಫ್‌ಒ ಸರಿಯಾಗಿ ಸ್ಪಂದಿಸಿರಲಿಲ್ಲ. ಒಮ್ಮೆ ಕರೆ ಸ್ವೀಕರಿಸಿದ ಅವರು ತಮ್ಮೊಂದಿಗೆ ಏಕವಚನ ಬಳಸಿ ಉದ್ಧಟತನದಿಂದ ಮಾತನಾಡಿದ್ದರು. ಇದಾದ ಬಳಿಕ ಭಾನುವಾರ ಬೆಳಗ್ಗೆ ಹಲವು ಫಾರೆಸ್ಟ್‌ ಗಾರ್ಡ್‌ಗಳನ್ನು ತಮ್ಮ ಮನೆಗೆ ಕಳುಹಿಸಿ, ತಮ್ಮನ್ನು ಅವರ ಕಚೇರಿಗೆ ಕರೆಸಿಕೊಂಡ ಆರ್‌ಎಫ್‌ಒ ತಮ್ಮ ಹಣೆಯ ಮೇಲೆ ರಿವಾಲ್ವರ್(Revolver) ಇಟ್ಟು ಕೊಲೆ ಬೆದರಿಕೆ(Life Threatening) ಹಾಕಿದರು. ಇದರಿಂದ ತಾವು ಮಾನಸಿಕವಾಗಿ(Mentally) ನೊಂದಿರುವುದಾಗಿ ಹೇಳಿದ್ದಾರೆ.

ಹೊನ್ನಾವರ: ತಲ್ವಾರ್‌ ಹಿಡಿದು ಬಂದು ವ್ಯಕ್ತಿಗೆ ಜೀವ ಬೆದ​ರಿ​ಕೆ

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ ಮಾತನಾಡಿ, ಇಡೀ ಬಿಜೆಪಿ ತಾಲೂಕು ಘಟಕ ಈ ಘಟನೆಯನ್ನು ತೀವ್ರ ಖಂಡಿಸುತ್ತಿದ್ದು, ಖಾನಾಪುರ ಠಾಣೆಯಲ್ಲಿ ಲೋಂಡಾ ಆರ್‌ಎಫ್‌ಒ ವಿರುದ್ಧ ದೂರು(Complaint)ದಾಖಲಿಸಲಾಗಿದೆ. ಪಟ್ಟಣದ ಪೊಲೀಸ್(Police Station) ಠಾಣೆಯ ಮುಂದೆ ಪ್ರತಿಭಟನೆ(Protest) ನಡೆಸಿ ಲೋಂಡಾ ಆರ್‌ಎಫ್‌ಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಲಾಗಿದೆ.

ಮಂಗಳವಾರ ತಾಲೂಕಿನ ಪಕ್ಷದ ಮುಖಂಡರ ನಿಯೋಗದ ಮೂಲಕ ಅರಣ್ಯ ಸಚಿವರು, ಡಿಸಿ, ಸಿಸಿಎಫ್, ಡಿಎಫ್‌ಒ ಅವರ ಬಳಿ ತೆರಳಿ ಬಾಬುರಾವ್ ಅವರಿಗಾದ ಸಮಸ್ಯೆಯನ್ನು ವಿವರಿಸಲಾಗುವುದು ಎಂದು ಮಾಹಿತಿ ನೀಡಿದರು.
ಪಕ್ಷದ ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ಜ್ಯೋ ತಿಬಾ ರೇಮಾಣಿ, ಸುರೇಶ ದೇಸಾಯಿ, ವಿಠ್ಠಲ ಹಲಗೇಕರ, ಕಿರಣ ಯಳ್ಳೂರಕರ, ವಸಂತ ದೇಸಾಯಿ, ಬಸವರಾಜ, ಪಂಡಿತ ಇದ್ದರು. 

ಮಾಜಿ ಶಾಸಕ ನರಸಿಂಹ ಸ್ವಾಮಿ ವಿರುದ್ಧ ಕೋಟಿ ಕೋಟಿ ವಂಚನೆ, ಜೀವ ಬೆದರಿಕೆ ಆರೋಪ: FIR ದಾಖಲು

ಜಯಂತ್ಯುತ್ಸವ ಇಂದು

ಮುನವಳ್ಳಿ: ಸಮೀಪದ ಮಬನೂರ ಗ್ರಾಮದಲ್ಲಿ ಶ್ರೀ ಸ.ಸ.ಮಾಧವಾನಂದರ 106 ಜಯಂತ್ಯುತ್ಸವ ಹಾಗೂ ಶ್ರೀ ಸ.ಸ.ಕರೆಪ್ಪ ಮಹಾರಾಜರ 3 ಪುಣ್ಯಸ್ಮರಣೆ, ತೊಟ್ಟಿಲು ಪೂಜೆ, ಸಾಮೂಹಿಕ ವಿವಾಹ(Mass Wedding) ಸಮಾರಂಭ ನ. 2 ರಂದು ಬೆಳಿಗ್ಗೆ 10.30 ಕ್ಕೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಆರೋಪ ಸುಳ್ಳು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಲೋಂಡಾ ಆರ್‌ಎಫ್‌ಒ ಗೌರಾಣಿ, ಲೋಂಡಾ ಅರಣ್ಯ ವಲಯದ ಮಾಚಾಳಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ಶನಿವಾರ ರಾತ್ರಿ ತಮಗೆ ಕರೆ ಮಾಡಿದ ಬಾಬುರಾವ್ ದೇಸಾಯಿ ಅರಣ್ಯದ ಮೂಲಕ ಕಟ್ಟಿಗೆ ಕಂಬಗಳನ್ನು ಅಳವಡಿಸಲು ಕೋರಿದ್ದರು. ಆದರೆ, ಅರಣ್ಯದಲ್ಲಿ ವಿದ್ಯು(Electricity) ಸರಬರಾಜು ಮಾಡಲು ತಾವು ಅವಕಾಶ ನೀಡಲು ಒಪ್ಪದ ಕಾರಣ ಲಘುವಾಗಿ ಮಾತನಾಡಿದ್ದರು. ಭಾನುವಾರ ಅವರನ್ನು ಕಚೇರಿಗೆ ಕರೆಸಿ ಈ ಕುರಿತು ವಿಚಾರಿಸಿದಾಗ ತಮ್ಮಿಂದ ತಪ್ಪಾಗಿದೆ ಎಂದು ಪತ್ರ ಬರೆದು ಕೊಟ್ಟಿದ್ದಾರೆ. ತಮ್ಮ ಮೇಲಿನ ಆರೋಪ(Allegation) ಸುಳ್ಳು(ಸುಳ್ಳು) ಎಂದು ಹೇಳಿದ್ದಾರೆ.
 

Follow Us:
Download App:
  • android
  • ios