Asianet Suvarna News Asianet Suvarna News

ಹೊನ್ನಾವರ: ತಲ್ವಾರ್‌ ಹಿಡಿದು ಬಂದು ವ್ಯಕ್ತಿಗೆ ಜೀವ ಬೆದ​ರಿ​ಕೆ

*  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾವಿನಕುರ್ವಾದಲ್ಲಿ ನಡೆದ ಘಟನೆ
*  ಕೊಲೆ ಮಾಡುವ ಉದ್ದೇಶದಿಂದ ನವೀನ ಕಡೆ ತಲವಾರ್‌ ಬೀಸಿದ್ದ ಆರೋಪಿ
*  ತಲ್ವಾರ್‌ ಪುಡಾಂಟಕ್ಕೆ ಸಾಕ್ಷಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿ 
 

Life Threatening to a Person at Honnavara in Uttara Kannada  grg
Author
Bengaluru, First Published Oct 31, 2021, 1:32 PM IST
  • Facebook
  • Twitter
  • Whatsapp

ಹೊನ್ನಾವರ(ಅ.31): ತಾಲೂಕಿನ ಮಾವಿನಕುರ್ವಾದಲ್ಲಿ ತಲ್ವಾರ್‌ ಹಿಡಿದು ವ್ಯಕ್ತಿಯೊಬ್ಬನಿಗೆ ಜೀವ ಬೆದರಿಕೆ(Life Threatening) ಹಾಕಿರುವ ಕುರಿತು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಮಾವಿನಕುರ್ವಾದ ನವೀನ ಎನ್ನುವವರು ತನ್ನ ತಾಯಿ ಮತ್ತು ತನ್ನ ಮಗನಾದ ಜಾಕ್ಸನ್‌ರೊಂದಿಗೆ ಮನೆಯಲ್ಲಿದ್ದಾಗ ಆರೋಪಿತರಾದ(Accused) ಮೋಹನ ನಾರಾಯಣ ಗೌಡ, ಅಂಕುಶ ನಾರಾಯಣ ಗೌಡ, ಮಾರುತಿ ಗಣಪಯ್ಯ ಗೌಡ, ಪವನ ರಾಮ ಗೌಡ, ರಾಜೇಶ್‌ ರಾಮಾ ಗೌಡ, ಗೋಪಾಲ ಲಕ್ಷ್ಮಣ ಗೌಡ ಹಾಗೂ ಇತರ ಕೆಲವರು ಗುಂಪು ಕಟ್ಟಿಕೊಂಡು ತಲ್ವಾರ್‌(Weapon) ಹಿಡಿದು ನವೀನ್‌ ಮನೆಯ ಅಂಗಳಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದರು ಎನ್ನಲಾಗಿದೆ.

8 ತಿಂಗಳಿಂದ ತಲೆಮರೆಸಿಕೊಂಡಿದ್ದ ರೌಡಿಗೆ ಗುಂಡು ಹೊಡೆದು ಅರೆಸ್ಟ್‌

ಸುಮಾರು ಎರಡೂವರೆ ಅಡಿ ಉದ್ದದ ತಲವಾರನ್ನು ಹಿಡಿದು, ನವೀನ ಎಲ್ಲಿದ್ದಿಯಾ? ನಿನಗೆ ಇವತ್ತು ಬಿಡುವದಿಲ್ಲ ಅಂತ ಕೂಗುತ್ತಾ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ನವೀನ ಮನೆಯಿಂದ ಹೊರಗೆ ಬಂದು ಯಾಕೆ ಅಂಗಳಕ್ಕೆ ನುಗ್ಗುತ್ತಿದ್ದಿರಿ ಅಂತ ಕೇಳಿದಾಗ, ಇವತ್ತು ನಿನಗೆ ಕೊಲೆ(Murder) ಮಾಡದೇ ಬಿಡುವದಿಲ್ಲ. ಸಾಯಿಸಿ ಹಾಕುತ್ತೇವೆ ಅಂತ ತಮ್ಮ ಕೈಯ್ಯಲ್ಲಿದ್ದ ತಲವಾರನ್ನು ಕೊಲೆ ಮಾಡುವ ಉದ್ದೇಶದಿಂದ ನವೀನ ಕಡೆ ಬೀಸಿ ಹೊಡೆದಿದ್ದಾರೆ ಎನ್ನಲಾಗಿದೆ. ನವೀನ ತಪ್ಪಿಸಿಕೊಂಡು ಮನೆಯೊಳಗೆ ಕೂಗುತ್ತಾ ಓಡಿದಾಗ ಆರೋಪಿತರು ನವೀನ್‌ ಹಿಂದೆ ಬರ ತೊಡಗಿದಾಗ ನವೀನ ತಾಯಿ ಪುಲ್ಲಾ ಅವರು ನನ್ನ ಮಗನ ಸಾಯಿಸಬೇಡಿ ಕೈಮುಗಿಯುತ್ತೇನೆ ಅಂತ ಕೂಗುತ್ತಾ ಅವರಿಗೆ ಅಡ್ಡವಾಗಿ ನಿಂತಿದ್ದಾರೆ. ಆಗ ಆರೋ​ಪಿ​ಗಳು, ನವೀನ ತಾಯಿಯವರನ್ನು ಕೈಡಿದು ಎಳೆದಾಡಿ ಅವರ ಮಾನಕ್ಕೆ ಕುಂದುಂಟು ಮಾಡಿದ್ದಾರೆ ಎಂದು ದೂರಿನಲ್ಲಿ(Complaint) ತಿಳಿಸಿದ್ದಾರೆ. 

ಊರವರಾದ ಮಾರುತಿ ಮಾದೇವ ಗೌಡ ಹಾಗೂ ಅರುಣ, ಮಂಜುನಾಥ ಗೌಡ ಹಾಗೂ ಇತರ ಜನರು ಬಂದಿದ್ದನ್ನು ನೋಡಿ ಆರೋಪಿತರು ನವೀನ್‌ ಅವರಿಗೆ ಉದ್ದೇಶಿಸಿ ನಿನಗೆ ಇಷ್ಟಕ್ಕೆ ಬಿಡುವದಿಲ್ಲ ನಿನ್ನನ್ನು ಕೊಂದು ಬಿಸಾಡುತ್ತೇವೆ ಅಂತ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಹೊನ್ನಾವರ ಪೊಲೀಸ್‌(Police) ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಹಿಂದೆ ಮಾವಿನಕುರ್ವಾದಲ್ಲಿ ಜಗಳ, ಹೊಡೆದಾಟ ಅನೇಕ ಅಪರಾಧ(Crime) ಕೃತ್ಯಗಳಿಗೆ ಸಾಕ್ಷಿಯಾಗಿತ್ತು. ದ್ವೇಷದ ರಾಜಕಾರಣ(Politics) ಇಲ್ಲಿ ಎಲ್ಲದಕ್ಕೂ ಕಾರಣವಾಗುತ್ತಿತ್ತು. ಕ್ಷುಲ್ಲಕ ಕಾರಣಗಳು ನೆತ್ತರು ಹರಿಸಿದ ಉದಾಹರಣೆ ಹಲವಾರುಂಟು. ಇತ್ತೀಚೆಗೆ ಎಲ್ಲವೂ ಶಾಂತವಾಗಿದ್ದ ಗ್ರಾಮ ಮತ್ತೆ ತಲ್ವಾರ್‌ ಪುಡಾಂಟಕ್ಕೆ ಸಾಕ್ಷಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿ.
 

Follow Us:
Download App:
  • android
  • ios