ರಿವೇಂಜ್‌ ಸ್ಟೋರಿ, 58 ವರ್ಷದ ಮಹಿಳೆಯನ್ನು ರೇಪ್‌ ಮಾಡಿ ಕೊಂದ 16 ವರ್ಷದ ಬಾಲಕ!

ಎರಡು ವರ್ಷದ ಹಿಂದೆ ಮೊಬೈಲ್‌ ಕದ್ದ ಘಟನೆಯಲ್ಲಿ ಅವಮಾನ ಮಾಡಿದ್ದ ಕಾರಣಕ್ಕೆ 16 ವರ್ಷದ ಬಾಲಕನೊಬ್ಬ, 58 ವರ್ಷದ ಮಹಿಳೆಯನ್ನು ರೇಪ್‌ ಮಾಡಿ, ಭೀಕರವಾಗಿ ಕೊಂದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೈಲಾಶ್‌ಪುರಿ ಗ್ರಾಮದಲ್ಲಿ ನಡೆದಿದೆ. ಹನುಮನ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜನವರಿ 30ರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.

Rewa 16 year old boy rapes brutally kills woman in Madhya Pradesh san

ಭೋಪಾಲ್‌ (ಫೆ.5): 16 ವರ್ಷದ ಬಾಲಕೊಬ್ಬ 58 ವರ್ಷದ ಮಹಿಳೆಯನ್ನು ರೇಪ್‌ ಮಾಡಿದ್ದಲ್ಲದೆ, ಕುಡುಗೋಲು ಬಳಸಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದೆ ಮೊಬೈಲ್‌ ಫೋನ್‌ ಕದ್ದ ಘಟನೆಯಲ್ಲಿ ಮಾಡಿರುವ ಅವಮಾನವನ್ನು ಸಹಿಸಿಕೊಳ್ಳದ ಬಾಲಕ, ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 30 ರ ರಾತ್ರಿ ಕೈಲಾಶ್‌ಪುರಿ ಜಿಲ್ಲೆಯ ಹನುಮನ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಆಕೆಯ ಬಾಯಿಗೆ ಪ್ಲಾಸ್ಟಿಕ್ ಚೀಲ ಮತ್ತು ಬಟ್ಟೆಯನ್ನು ತುಂಬಿ, ಆಕೆ ವಾಸವಿದ್ದ ಕಟ್ಟಡದ ನಿರ್ಮಾಣ ಹಂತದ ಭಾಗಕ್ಕೆ ಎಳೆದೊಯ್ದು, ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ಕುಡಗೋಲಿನಿಂದ ಹೊಡೆದು ಆಕೆಯ ಖಾಸಗಿ ಭಾಗಗಳಿಗೆ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ಘಟನೆಯ ವಿವರವನ್ನು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಹುಡುಗ ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಮಹಿಳೆಯ ಕುಟುಂಬ ಆರೋಪಿಸಿತ್ತು. ಇದರಿಂದ ಅವಮಾನಿತನಾಗಿದ್ದ ಹುಡುಗ ಸೇಡು ತೀರಿಸಿಕೊಳ್ಳಬೇಕು ಎನ್ನುವ ಹಠದಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ವಿವೇಕ್ ಲಾಲ್ ಅವರು ಫೆಬ್ರವರಿ 1 ರಂದು 58 ವರ್ಷದ ಮಹಿಳೆಯ ಮೃತದೇಹವು ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಬಿದ್ದಿದೆ ಎನ್ನುವ ಮಾಹಿತಿ ಲಭಿಸಿತ್ತು ಎಂದು ಹೇಳಿದ್ದಾರೆ. ಪೊಲೀಸರು ಮತ್ತು ಫೋರೆನ್ಸಿಕ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಮಹಿಳೆಯನ್ನು ಅಪರಿಚಿತ ವ್ಯಕ್ತಿಗಳು ಬರ್ಬರವಾಗಿ ಹತ್ಯೆ ಮಾಡಿಬಹುದು ಎಂದು ಮೊದಲಿಗೆ ಅಂದಾಜು ಮಾಡಿದ್ದೆವು ಎಂದಿದ್ದಾರೆ.

ಮಾಹಿತಿದಾರರ ಸುಳಿವು ಮತ್ತು ತನಿಖೆಯ ಆಧಾರದ ಮೇಲೆ, ಪೊಲೀಸರು ಆಕೆಯ ನೆರೆಮನೆಯಲ್ಲಿಯೇ ವಾಸ ಮಾಡುತ್ತಿದ್ದ ಹುಡುಗನ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆ ಮಾಡಿದ್ದರು. ಇನ್ನು ಮಹಿಳೆಯ ಕುಟುಂಬ ಸದಸ್ಯರು ಕೂಡ ಬಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಎರಡು ವರ್ಷದ ಹಿಂದೆ ಈ ಬಾಲಕ ತಮ್ಮ ಮನೆಗೆ ಟಿವಿ ವೀಕ್ಷಿಸಲು ಬರುತ್ತಿದ್ದ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದರು. ಆದರೆ, ಒಂದು ದಿನ ಈ ಹುಡುಗನ ಮೇಲೆ ಮೊಬೈಲ್‌ ಕದ್ದ ಆರೋಪ ಹೊರಿಸಿದ ತಕ್ಷಣ, ಹುಡುಗನಿಗೆ ಮಹಿಳೆಯ ಕುಟುಂಬದ ವಿರುದ್ಧ ದ್ವೇಷ ಹುಟ್ಟಿಕೊಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕಳ್ಳತನದ ಆರೋಪದ ನಂತರ ಗ್ರಾಮದಲ್ಲಿ ಎದುರಿಸಿದ ಅವಮಾನದ ಕಾರಣ ಹುಡುಗ ಸೇಡು ತೀರಿಸಿಕೊಳ್ಳಲು ಬಯಸಿದ್ದ. ಜನವರಿ 30 ರಂದು ಮಹಿಳೆಯ ಮಗ ಹಾಗೂ ಪತಿ ಊರಿನಿಂದ ಹೊರಗಿದ್ದ ವೇಳೆ, ಹುಡುಗ ಮನೆಗೆ ನುಗ್ಗಿದ್ದ. ಮಂಚದ ಮೇಲೆ ಮಲಗಿದ್ದ ಮಹಿಳೆಯ ಮೇಲೆ ಬಿದ್ದು ರೇಪ್‌ ಮಾಡಲು ಯತ್ನಿಸಿದ್ದ. ಈ ವೇಳೆ ಆಕೆ ಕೂಗಲು ಆರಂಭಿಸಿದಾಗ ಪಾಲಿಥಿನ್‌ ಬ್ಯಾಜ್‌ ಹಾಗೂ ಬಟ್ಟೆಯನ್ನು ಆಕೆಯ ಬಾಯಿಗೆ ಮುಚ್ಚಿದ್ದ ಎಂದು ಪೊಲೀಸರು ಹೇಳಿದ್ದಾರೆ.

'ಲಾಯರ್‌ ಕರೀತಿದ್ದಾರೆ 1 ಅವರ್‌ ಕೆಲಸ..' ಎಂದ್ಹೇಳಿ ಹೊರಟವನು ಸಲಿಂಗಕಾಮಕ್ಕೆ ಬಲಿಯಾದ!

ಆಕೆಯ ಬಾಯಿಗೆ ಪ್ಲಾಸ್ಟಿಕ್ ಚೀಲವನ್ನು ಕಟ್ಟಿ,  ಹಗ್ಗ ಮತ್ತು ತಂತಿಯನ್ನು ಬಳಸಿ ಕಟ್ಟಡದ ನಿರ್ಮಾಣ ಹಂತದಲ್ಲಿರುವ ಭಾಗಕ್ಕೆ ಎಳೆದೊಯ್ದು ರೇಪ್‌ ಮಾಡಿದ್ದಾನೆ ಎಂದು ಲಾಲ್ ಹೇಳಿದ್ದಾರೆ. ಆಕೆಯನ್ನು ಬಾಗಿಲಿನ ತೋಳಿಗೆ ಕಟ್ಟಿ, ಪದೇ ಪದೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಉಸಿರುಕಟ್ಟಿದಂತಾಗಿ ಆಕೆ ಪ್ರಜ್ಞೆ ತಪ್ಪಿದಾಗ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮಹಿಳೆಯ ತಲೆಗೆ ಕುಡುಗೋಲಿನಿಂದ ಹೊಡೆದಿದ್ದು, ಕೈ, ಕುತ್ತಿಗೆ ಮತ್ತು ಎದೆಯ ಮೇಲೂ ಗಾಯ ಮಾಡಿದ್ದಾರೆ. ಕುಡುಗೋಲು ಬಳಸಿ ಆಕೆಯ ಮರ್ಮಾಂಗಕ್ಕೂ ಹಲ್ಲೆ ಮಾಡಿದ್ದಾನೆ.
ಆಕೆಯ ಬಳಿ ಇದ್ದ 1 ಸಾವಿರ ರೂಪಾಯಿ ಹಣ ಹಾಗೂ ಆಭರಣಗಳನ್ನು ಕದ್ದು, ಮಹಿಳೆಯನ್ನು ಮನೆಯನ್ನೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಆರೋಪಿಯನ್ನು ಬಂದಿಸಲು ಯಶಸ್ವಿಯಾಗಿದ್ದು, ವಿಚಾರಣೆಯ ವೇಳೆ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದಿದ್ದಾರೆ.

'ಒಮ್ಮೆ ಶರಣಾದ್ರೆ ಪ್ರೀತಿಗೆ, ಕತ್ತು ಕೊಟ್ಟಂಗೆ ಕತ್ತಿಗೆ..' ಮೂರೇ ತಿಂಗಳ ಪ್ರೀತಿಗೆ ನೂರ್ಕಾಲದ ಬದುಕು ಕಳೆದುಕೊಂಡ್ರು!

ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ ಮತ್ತು ಆತನ ವಿರುದ್ಧ ಭಾರತೀಯ ದಂಡ ಸಂಹಿತೆ 302 (ಕೊಲೆ), 376 (ಅತ್ಯಾಚಾರ), 460 (ಸುಪ್ತವಾಗಿ ಮನೆ-ಅತಿಕ್ರಮಣ ಅಥವಾ ರಾತ್ರಿಯಲ್ಲಿ ಮನೆ ಒಡೆಯುವುದು) 380 (ಕಳ್ಳತನ) ಮತ್ತು 201 ಸೇರಿದಂತೆ (ಅಪರಾಧ ಪುರಾವೆಗಳ ನಾಪತ್ತೆ)  ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Latest Videos
Follow Us:
Download App:
  • android
  • ios