ಧೆಂಕನಲ್(ಏ.  12) ಕಂದಾಯ ಇಲಾಖೆಯ ಈ ಇನ್ಸ್ ಪೆಕ್ಟರ್ ತಮ್ಮ ಕಚೇರಿಯನ್ನೇ ಬೆಡ್ ರೂಂ ಮಾಡಿಕೊಂಡಿದ್ದರು. ಕಚೇರಿಯಲ್ಲೇ ಮಹಿಳೆಯೊಂದಿಗೆ ಸರಸ-ಸಲ್ಲಾಪ ನಡೆಸಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಸರಸ ಸಲ್ಲಾಪದಲ್ಲಿ ತೊಡಗಿದ್ದ ಅಧಿಕಾರಿ ರಂಜನ್  ಪಾಣಿಗ್ರಹಿ ಅವರನ್ನು ಜಿಲ್ಲಾಧಿಕಾರಿ ಭೂಮೇಶ್ ಚಂದ್ರ ಅಮಾನತು ಮಾಡಿದ್ದಾರೆ.

ವೈರಲ್ ಆದ ಬಿಗ್ ಬಾಸ್ ವಿನ್ನರ್ ಲಿಪ್ ಲಾಕ್

ಕಚೇರಿಯಲ್ಲೇ ಮುಕ್ತ ಸರಸ ಮಾಡುತ್ತಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. 

ಹೆಚ್ಚುವರಿ ರೆವೆನ್ಯೂ ಇನ್ಸ್ ಪೆಕ್ಟರ್ ಆಗಿದ್ದ ರಂಜನ್ ಕೆಲ ತಿಂಗಳ ಹಿಂದೆ ಗಾಡಸಿಲಾಕ್ಕೆ ನೇಮಕವಾಗಿ ಬಂದಿದ್ದರು. ಕಚೇರಿಯಲ್ಲಿ ಮದ್ಯದ ಬಾಟಲಿಗಳು ಕಂಡು ಬಂದಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ .